ವಾಗಿ ಹೆದರಿಸಿದನು, ನಿಶ್ಯಬ್ಬ, ಅವನು ಮಿತಿ ಮೀರಿದ ಕೋಪದಿಂದ ಆಗುಡಿಸಲಿಗೆ ಬೆಂಕಿ ಹಚ್ಚುವೆನೆಂದೂ ಮಗುವನ್ನು ಸಂಹರಿಸಿ ಬಿಡುವೆನೆಂದೂ ಬೊಗಳಿದನು, ಆ ಕಟುಕನಿಗೆ ಆಗ ಕನಿಕರ ವೆಳ್ಳಷ್ಟೂ ಇರಲಿಲ್ಲ. ಆಹಾ! ಕಾಮಾಂಧರು ತಮ್ಮ ಕಾರ್ಯನಿರ್ವಾಹಕ್ಕೆ ಏನು ಬೇಕಾದರೂವಾಡುವರಲ್ಲವೆ ? ಏನಾದರೂ ಲಲಿತೆಯು ಮಾತನಾಡಲೇ ಇಲ್ಲ. ಆ ಕಟುಕನು ಬಹುಕೋಪದಿಂದ ಆಮಗುವಿನತಲೆಯನ್ನು ಕದಕ್ಕೆ ಹೊಡೆದನು, ಮಗುವು ಕಿಟ್ಟನೆ ಕಿರುಚ ತೊಡಗಿತು. ಆಮಗುವು ಅಳುವಿನಲ್ಲೂ ಮುದ್ದು ಮುದ್ದಾಗಿ ಅಮ್ಮ, ಅಮ್ಮ, ಎಂದು ಕೂಗುತ್ತಿತ್ತು, ಆದರೂ ಬಾಗಿಲು ತೆರೆಯಲ್ಪಡಲಿಲ್ಲ, ಲಲಿತೆಯು ಎಂತಹ ಕಠಿನ ಹೃದಯಳಿರಬಹುದು; ಸ್ತ್ರೀಯರು ಆವದುಃಖವನ್ನಾದರೂ ಸಹಿಸಬಲ್ಲರು. ತಮ್ಮ ಮಕ್ಕಳು ತಮ್ಮ ದಿಗೆ ಆರ್ತನಾದ ಮಾಡುತ್ತಿದ್ದರೆ ನೋಡಿ ಸಹಿಸಲಾರರು, ಲಲಿ ತೆಯು ಮಗುವನ್ನು ಅವನ ಕೈಗೆ ಕೊಟ್ಟಾಗಲೇ ಯಮನ ವಶಮಾಡಿದಂತೆ ಭಾವಿಸಿ ದಳು, ಭಿಕ್ಷುಕನು ಕೊನೆಗೆ ಆ ಮಗುವನ್ನು ವೇಗವಾಗಿ ಬೀದಿಗೆ ಎಸೆದು ಆ ಮನೆಗೆ ಕನ್ನವನ್ನಿಕ್ಕಲು ಪ್ರಯತ್ನಿಸಿ ಒಂದು ಕಡೆ ಗೋಡೆಯನ್ನು ಹೊಡೆದು ಆ ರಂಧ್ರದಿಂದ ತನ್ನ ತಲೆಯನ್ನು ಒಳಕ್ಕೆ ನುಗ್ಗಿಸಿದನು. ಇದನ್ನು ಲಲಿತೆಯು ನೋಡಿ ತನ್ನ ಮನೆ ಯಲ್ಲಿದ್ದ ಮಚ್ಚು ಕತ್ತಿಯಿಂದ ಆ ಕಳ್ಳನ ತಲೆಗೆ ಬಲವಾಗಿ ಹೊಡೆದಳು. ಅವನ ತಲೆ ಯೊಡೆದು ರಕ್ತ ಸುರಿಯುತ್ತಿದ್ದಾಗಲೇ ಅವನ ಕಾಲನ್ನು ಒಂದು ಸರ್ಪವು ಕಚ್ಚಿತು. ಅರ್ಧ ಗಳಿಗೆಯೊಳಗಾಗಿ ಕಳ್ಳಭಿಕ್ಷುಕನು ಲೋಕಾಂತರವನ್ನೆ ದಿದನು. ಲಲಿತೆಯು ಬಾಗಿಲು ತೆರೆಯದೆ ಒಳಗೇ ಇದ್ದಳು. ಬೆಳಗಾಯಿತು. ಲಲಿತೆಯ ಗಂಡನು ಬಂದನು. ಗುಡಿಸಲಿಗೆ ಹತ್ತು ಮಾರು ದೂರದಲ್ಲಿ ಮಗುವು ಭೀಕರಾವಸ್ಥೆಯಲ್ಲಿ ಬಿದ್ದಿರುವುದನ್ನೂ ಗುಡಿಸಲಿನ ಹೊರಗೆ ಭಿಕ್ಷುಕನು ಸತ್ತಿರುವುದನ್ನೂ ನೋಡಿದನು. ಬಾಗಿಲು ತೆರೆಯಲ್ಪಟ್ಟಿ ರಲಿಲ್ಲ, ಕೂಗಿದರೂ ನಿರುತ್ತರ. ಕೂಡಲೆ ಹೊಸೂರಿನಿಂದ ಪೊಲೀಸಿನವರನ್ನು ಕರದು ಕೊಂಡು ಬಂದು ಗುಡಿಸಲು ಬಾಗಿಲನ್ನೊಡೆಸಿ ಒಳಹೊಕ್ಕನು, ಲಲಿತೆಯು ಮೂರ್ಛಿತ ಳಾಗಿ ಬಿದ್ದಿದಾಳೆ, ಅವಳನ್ನು ಉಪಚರಿಸಿ ಮೇಲಕ್ಕೆಬ್ಬಿಸಿ ಜ್ಞಾನೋದಯವಾದಮೇಲೆ ಕೇಳಲು ನಡೆದ ವೃತ್ತಾಂತವು ತಿಳಿದುಬಂದಿತು, ಮಗುವನ್ನು ವೈದ್ಯರಿಗೆ ತೋರಿಸಲು ಸತ್ತಿರಲಿಲ್ಲ ವೆಂದು ತಿಳಿಯಿತು, ಮಗುವಿನ ಪ್ರಾಣವು ಉಳಿದುದಕ್ಕಾಗಿ ಎಲ್ಲರೂ ಸಂತೋಷಿಸಿದರು. ಲಲಿತೆಯ ಈ ಪಾತಿವ್ರತ್ಯ ರಕ್ಷಣೆಯ ವಿಚಾರವು ಊರಿಗೆಲ್ಲಾ ತಿಳಿದು ಜನರೆಲ್ಲರೂ ಆಕೆಯನ್ನು ಹೊಗಳಿದರು. --+--..
ಪುಟ:ನನ್ನ ಸಂಸಾರ.djvu/೭೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.