ಈ ಪುಟವನ್ನು ಪರಿಶೀಲಿಸಲಾಗಿದೆ

6

ಕಾದಂಬರೀ ಸಂಗ್ರಹ




ವಾದ ಸುಳಿವಾದರೂ ಸಿಗಲಿಲ್ಲವು. ಕೊಠಡಿಯ ಒಂದು ಭಾಗದಲ್ಲಿ ಒಂದು ದೊಡ್ಡ
ಮಂಚವು ಹಾಕಲ್ಪಟ್ಟಿತ್ತು. ಭಾಸ್ಕರನ ಸೂಕ್ಷ್ಮವಾದ ಕಣ್ಣಿಗೆ ಆ ಮಂಚದ ಒಂದು
ಭಾಗದಲ್ಲಿ ಸ್ವಲ್ಪ ಆರಿಶಿನವು ಕಾಣಬಂದಿತು. ಭಾಸ್ಕರನು ಅದನ್ನು ತನ್ನ ಬುಕ್ಕಿನಲ್ಲಿ
ಬರೆದುಕೊಂಡನು. ಕೊಠಡಿಗೆಲ್ಲಾ ಮೆತ್ತನಾದ ಜಮಖಾನವನ್ನು ಹಾಸಿದ್ದರು.
ಅದರ ಮೇಲೇನಾದರೂ ಕಾಲಿನ ಗುರುತುಗಳು ಕಾಣುವುವೋ ಎಂದು ಬಹಳ
ಹೊತ್ತು ದೃಷ್ಟಿಸಿ ನೋಡಿದನು. ಏನೂ ಪ್ರಯೋಜನ ಕಂಡು ಬರಲಿಲ್ಲ. ಹಾಗೇ
ಮಲಗಿಕ್ಕೊಂಡು ಪರೀಕ್ಷಿಸುತ್ತಾ ಬಂದನು. ಮಂಚದ ಸವಿಾಪದಲ್ಲಿ ಸ್ವಲ್ಪ ಮಂಕು
ಮಂಕಾಗಿ ಎರಡು ಮೂರು ಬೂಟ್ಸ್ ಕಾಲಿನ ಗುರುತುಗಳು ಮಂಚದ ಕಡೆಗೆ ತೋರಿಸು
ತ್ತಿದ್ದವು. ಅದನ್ನೂ ತನ್ನ ಬುಕ್ಕಿನಲ್ಲಿ ಬರೆದುಕೊಂಡನು. ಅನಂತರ ಅವನಿಗೆ ಯಾವ
ಸುಳಿವಾದರೂ ಶಿಗಲಿಲ್ಲವು. ಇನ್ನು ಹುಡುಕಿ ಪ್ರಯೋಜನವಿಲ್ಲವೆಂದು ತೀರ್ಮಾನಿಸಿ
ಸೋಮಸುಂದರನನ್ನೂ ಸಹಾ ಹಿಂದಕ್ಕೆ ಕರೆದುಕೊಂಡು ಬಂದು ಮಾರನೇ ದಿವಸ
ಬೆಳಿಗ್ಗೆ ಒಂದು ಮಾತನಾಡುವುದಾಗಿ ಹೇಳಿ ಹೊರಟು ತನಗಾಗಿ ಕೊಟ್ಟಿದ್ದ ಕೊಠಡಿ
ಯನ್ನು ಸೇರಿ ಅಲ್ಲಿ ಒಂದು ವೇತ್ರಾಸನದ ಮೇಲೆ ಕುಳಿತುಕೊಂಡು ಯೋಚಿಸಲಾ
ರಂಭಿಸಿದನು.
ಭಾಸ್ಕರನು ಯೋಚನೆಯಲ್ಲಿಯೇ ರಾತ್ರಿ ಎಂಟು ಗಂಟೆಗಳವರಿಗೆ ಕುಳಿತಿದ್ದನು.
ಆಗ ಹಠಾತ್ತಾಗಿ ಅವನು ಆಹಾ ! ಗೊತ್ತಾಯಿತು. ನಾನು ಈಗ ಯೋಚಿಸಿದ್ದೇ ಸರಿ
ಯಾಗಿರಬೇಕು. ಇರಲಿ. ಎಲ್ಲವನ್ನೂ ವಿಚಾರಿಸಿದರೆ ತಿಳಿಯುವುದು ಎಂದು ಹೇಳಿ
ಕೊಂಡು ಊಟಕ್ಕೆ ಹೊತ್ತಾದ್ದರಿಂದ ಎದ್ದು ಊಟಮಾಡಿ ಪುನಃ ಬಂದು ಕುಳಿತನು.
ಆಗ ಅವನು ಸ್ವಲ್ಪ ಹೊತ್ತು ಯೋಚಿಸುತ್ತಿದ್ದು ತನ್ನ ಪುಸ್ತಕದಲ್ಲಿ ಏನನ್ನೋ
ಬರೆದುಕೊಂಡು ಮಲಗಿ ನಿದ್ರೆಹೋದನು.
ಮಾರನೇ ದಿನ ಬಳಿಗ್ಗೆ ಒಂಭತ್ತು ಗಂಟೆಯ ಸುಮಾರಿಗೆ ಭಾಸ್ಕರನು ಸೋಮ
ಸುಂದರನ ಕೊಠಡಿಗೆ ಹೋಗಿ ಅಲ್ಲಿದ್ದ ವೇತ್ರಾಸನದ ಮೇಲೆ ಕುಳಿತುಕೊಂಡು ಅವನು
ಕೊಟ್ಟ ಕಾಫಿಯನ್ನು ಕುಡಿದನು.
ಭಾಸ್ಕರ:-ಸ್ವಮಿಾ, ನಿಮ್ಮ ಮನೆಯಲ್ಲಿ ಬಹಳ ಹಳೆಯ ಸೇವಕರಾರಾ
ದರೂ ಇರುವರೋ ?
ಸೋಮಸುಂದರ :-ಆಹಾ ! ಇರುವರು, ನಮ್ಮ ತಾತನ ಕಾಲದಿಂದಲೂ ಬಂದ
ಮುದುಕನಾದ ಕೃಷ್ಣನೆಂಬುವನೊಬ್ಬನೂ ನನ್ನ ತಂದೆಯ ಕಾಲದಿಂದ ಬಂದ ಹೀರಣ್ಣ
ನೆಂಬುವನೂ ಇರುವರು.