ಈ ಪುಟವನ್ನು ಪರಿಶೀಲಿಸಲಾಗಿದೆ

 16

                      ಕಾದಂಬರೀ ಸಂಗ್ರಹ

^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^ ಕಾಲವನ್ನೆಲ್ಲಾ ವಿದ್ಯೆಯಲ್ಲಿಯೂ, ದೇಶಕ್ಕೆ ಒಳ್ಳೆಯದಾಗುವ ಕಾರ್ಯಗಳಲ್ಲಿಯೂ ಮತ್ತೆ ಕೆಲವರು ಸೋಮಾರಿಗಳಾಗಿ ಕಳ್ಳತನ, ಕುಡಿತ, ಅರಾಜಕತ್ವ ಇವುಗಳಲ್ಲೂ ಕಳೆಯುತ್ತಾ ಬಂದರು. ಇಲ್ಲಿ ಎಲ್ಲೆಲ್ಲಿ ನೋಡಿದರೂ ಸಂಘಗಳೂ, ಪ್ರತಿ ದಿವಸವೂ ಉಪನ್ಯಾಸಗಳೂ ತುಂಬಿಹೋಗಿರುವುವು. ಅತ್ಯಂತ ವಿದ್ಯಾವಂತರಾದ ಇಲ್ಲಿಯ ಜನಗಳು ಇಂಡಿಯಾ ದೇಶಕ್ಕೆ ಬಹಳ ಒಳ್ಳೆಯ ಹೆಸರನ್ನು ತಂದಿರುವರು. ಇಲ್ಲೇ ಸಂಸ್ಕರಣದಕ್ಷರೂ, ದೇಶಸುಧಾರಕರೂ ಮೊಟ್ಟಮೊದಲು ತಲೆಯನ್ನೆತಿ ಜಯವನ್ನು ಹೊಂದುತ್ತಿದ್ದಾರೆ. ಇಲ್ಲೇ ಕ್ರೂರವಾದ ಸಹಗಮನಪದ್ಧತಿಯನ್ನು ನಿಲ್ಲಿಸಲು ಮೊಟ್ಟ ಮೊದಲಿನ ಪ್ರಯತ್ನ ನಡೆಯಿತು.

    ಇಂತಹ ಮಹಾ ಪಟ್ಟಣದಲ್ಲೂ ಕೆಲವು ಮಂದಿ ದುಷ್ಟರು ಅನೇಕ ಪಂಗಡಗಳನ್ನು ಮಾಡಿಕೊಂಡಿದ್ದರು. ಪ್ರತಿಯೊಂದು ಪಂಗಡವೂ ಇಂಗ್ಲೀಷ್ ಅಕ್ಷರಗಳನ್ನು ತಮ್ಮ ಪ್ರತ್ಯೇಕ ಭಾಗಗಳಿಗೊಂದೊಂದನ್ನಾಗಿ ಒಂದೊಂದು ವಿಧವಾದ ಗುಂಡಿಗಳ ಮೇಲೆ ಕೆತ್ತಿಸಿ ತಮ್ಮ ಉಡುವಿನ ಯಾವದಾದರೂ ಒಂದು ಭಾಗದಲ್ಲಿಟ್ಟುಕೊಂಡಿರುತ್ತಿದ್ದರು. ಇವರುಗಳ ಕೆಲಸವು ಕದಿಯುವುದು ರಾಜದ್ರೋಗಕರವಾದ ಬರವಣಿಗೆಗೆಳನ್ನು ಬರೆಯುವುದು ; ಹೊರಗೆ ಮಹಾ ಸತ್ಪುರುಷರಂತೆಯೂ, ಸಾತ್ವಿಕ ಶಿಖಾಮಣಿಗಳಂತೆಯೂ ಕಾಣಿಸಿಕೊಳ್ಳುತ್ತಲೂ, ಸುಗುಣಿಗಳೂ ದೇಶಹಿತವನ್ನೇ ವ್ರತವಾಗುಳ್ಳವರೂ ಆದ ಸಂಘಸಂಸ್ಕರಣಕರ್ತರ ಸಭೆಗೆ ಹೋಗಿ ಅಲ್ಲಿ ಮನಸ್ಸಿನಲ್ಲಿ ಏನಿಲ್ಲದಿದ್ದರೂ ಮಹಾ ತಿಳಿದವರಂತೆ ತಲೆಯನ್ನಾಡಿಸುತ್ತಲೂ, ಶಾಭಾಸ್, ಮೆಗುಡ್ (very good) ಇದಕ್ಕೆ ವೈದೀಕ ಮೂಢರುಗಳೇನು ಹೇಳುವರು (what can the Orthodox _people say to this) ಎಂದು ಕೂಗುತ್ತಲೂ, ಸಭೆಯು ಮುಗಿದಮೇಲೆ ಎಲ್ಲರಿಗಿಂತಲೂ ಗಟ್ಟಿಯಾಗಿ ಕೈ ಚಪ್ಪಾಳೆತಟ್ಟಿ, ವಯಸ್ಕರಾದ ಕನೈಗಳನ್ನು ಲಗ್ನ ಮಾಡಿ ಕೊಳ್ಳುವುದಕ್ಕೆ ಒಪ್ಪುವವರು ತಮ್ಮ ನಾಮಧೇಯಗಳನ್ನು ಬರೆಯಿರೆಂದು ಹೇಳಿದರೆ ತಾವು ಮೊದಲೆಂದು ನುಗ್ಗಿ ತಮ್ಮ ಹೆಸರುಗಳನ್ನು ಬರೆಯುತ್ತಲೂ, ಸಂಘಕೂಟಗಳೆಂದು ಹೇಳಿ (Social gatherings) ತಮ್ಮಂತಹ ನೀಚರನ್ನೇ ಸೇರಿಸಿಕೊಂಡು ದ್ರಾಕ್ಷಾರಸ ಮುಂತಾದವುಗಳನ್ನು ಕುಡಿದು ಮನಸ್ಸಿಗೆ ಬಂದಹಾಗೆ ಕುಣಿಯುತ್ತಲೂ ಇರುತ್ತಿದ್ದರು. ಇವರ ವಿಷಯವನ್ನೇ ಬರೆಯುತ್ತಾ ಹೋದರೆ ಎಷ್ಟು ಪುಸ್ತಕಗಳನ್ನು ಬರೆದರೂ ಮುಗಿಯುವುದಿಲ್ಲವು.
    ಈ ದಿವಸ ಮೇಲೆ ಹೇಳಿದಂಥಾ ಪಂಗಡಗಳಲ್ಲೊಂದಾದ ಎಂ(M) ಕೂಟದವರ ವಾರ್ಷಿಕ ಕೂಟವು. ಆದ್ದರಿಂದ ಇವರು ತಮ್ಮ ಕಾಳೀ ಬೀದಿಯಲ್ಲಿರುವ ತಮ್ಮ