ಈ ಪುಟವನ್ನು ಪರಿಶೀಲಿಸಲಾಗಿಲ್ಲ.

96 ಸತೀಹಿತೈಷಿಣೀ ನಭಾ:-ಆ ಪ್ರೇಮವು ಬೇಡವಾದರೆ ಬಿಡು, ಬೇರೆಬಗೆಯ ಪ್ರೇಮ ಕೈ ಇಲ್ಲಿ ಆಸ್ಪದವಿಲ್ಲ. ಸತೀತ್ವವನ್ನು ಮಾತ್ರ ಕಳೆದುಕೊಳ್ಳಲಾರೆ. ರಾಜ:-- ಇದೆಲ್ಲವೂ ಬಾಹ್ಯಾಡಂಬರ; ಸ್ತ್ರೀಜನಾಂಗವೇ ಹಾಗೆ. ನಭಾ:- ಎಲ್ಲ ಸ್ತ್ರೀಯರನ್ನೂ ಒಂದೇರೀತಿ ಭಾವಿಸಿ ನಿಂದಿಸಬೇಡ. ರಾಜ:- ಪಂಚಕನ್ಯರಲ್ಲಿ ಒಬ್ಬಳಾದ ಬ್ರೌಪದಿಯೇ ಹೇಳಿರು ವಳು. ಅಂತಹುದರಲ್ಲಿ ನಿಮ್ಮ ಪಾಡೇನು? ನಭಾ:- ಅದೆಲ್ಲವೂ ಪುರಾಣ. ನಮ್ಮ ಅ೦ಗನಾನಿವಹವು ದಾರಿ ತಪ್ಪದೆ ಇರಲೆಂದು ಎಚ್ಚರಿಕೆಗಾಗಿ ಹೇಳಿದುದು ಮಾತ್ರ. ಅದು ನನಗೆ ಬೇಡ; ನಾನು ಹೊರಟೆ. ರಾಜ:- ನಿನ್ನಿ ನಿಷ್ಟುರ ವಾಕ್ಯಗಳು ನನ್ನ ಹೃದಯವನ್ನು ಚುಚ್ಚಿ ಚಿರದುಃಖಿಯನ್ನಾಗಿ ಮಾಡುತಿವೆ, ನಭಾ! ಸರಳತೆಯನ್ನು ವಹಿಸು. ನಭಾ:-ರಾಜಶೇಖರ ನಭೆಯ ಹೃದಯವು ಯಾವಾಗಲೂ ಸರಳ ವಾದುದೇಸರಿ, ಅವಳ ಬಾಯಿಂದ ಹೊರಹೊರಡುವ ಸರಳವಾಕ್ಯ ಪರಂಪ ರೆಯು ದುರ್ಬೋಧಕರನ್ನು ಚುಚ್ಚುವುದು, ಅದು ಎಷ್ಟು ಮಾತ್ರಕ್ಕೂ ಎಂದಿಗೂ ಕಡಿಮೆಯಾಗದು. ರಾಜ:- ನಭಾ! ಹಾಗಾದರೆ, ನಾನು ಸಾಯಲೆ ? ನಭಾ:- ಏಕೆ ? ರಾಜ:- ಮತ್ತೇನುಮಾಡಲಿ ? ನಭಾ:- ವಿವಾಹವನ್ನು ಮಾಡಿಕೊಂಡು ಸುಖವಾಗಿ ಬಾಳು. ಇನ್ನೊಂದು ಪಕ್ಷದೊಳಗಾಗಿಯೇ ಈ ಗೃಹದಲ್ಲಿಯೇ ವಿವಾಹವು ನಡೆ ಯಲು ಏರ್ಪಡಿಸಿರುವೆನು. ರಾಜ: -- ಆರೊಡನೆ? ನಿನ್ನೊಡನೆಯೋ? ನಭಾ:-- ಅದು ಸ್ವಷ್ಟೇಪಿ ದುರ್ಲಭಃ ಎಂತಹ ಗಂಡಾಂತರಗಳು ಬಂದರೂ ಸರ್ವಸ್ವವಾದ ಸತೀತ್ವವನ್ನು ಮಾತ್ರ ಕಳೆದು ಕೊಳ್ಳೆನು. ರಾಜ:--ನಿಜವೊ ? ನಭಾ:-ಸಂದೇಹವೇನು? ರಾಜಶೇಖರನು ಮಂಚದಿಂದ ಮೃಗದಂತೆ ಹಾರಿ ಬಾಗಿಲಬಳಿಗೆ