ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಭಾ. ಮಲಿನವಾಗಿದ್ದ ಕಣ್ಣಳನ್ನು ಅರ್ಧ ತೆರೆಯುತ್ತಲೂ ಅರ್ಧ ಮುಚ್ಚು ತಲೂ ರಮಣಿಯನ್ನೆ ನೋಡುತ್ತಿದ್ದಳು. ರಮಣಿಯು ಅಳುತ್ತಿರುವ ರೋಗಿಯನ್ನು ಕುರಿತು ಮೃದುಸ್ವರ ಎಂದ ಕೇಳಿದಳು:- .. ಅಮ್ಮ! ಹೀಗೇಕೆ ಆಳುತ್ತಿರುವೆ ? ನಿನಗೇನು ವೇಕೆ ? ರೋಗಿ:- ನಭಾ ! ಹೇಗೆ ಅಳದಿರಲಿ ? ಹದಿನೆಂಟು ವರ್ಷ ದೊಳ ಗಾಗಿ ನಿನಗೆ ತವರ್ಮನೆಯ ಆಶೆಯೆ.........” ಹೀಗೆ ಹೇಳಿ ಮುಂದೆ ಮಾತಿಲ್ಲದೆ ಅತ್ತು ಬಿಟ್ಟಳು, `ನಭಾ:- ಅಳುವುದರಿಂದಾಗುವ ಫಲವೇನು ? ಆವ ಕಾರವು ಅಳು ನಿನಿಂದ ಸಾಧಿಸಲ್ಪಡುವುದು ? ರೋಗಿ:- ನಭಾ: ದು:ಖವನ್ನು ತಡೆಯಲಾರೆ. ಉಕ್ಕಿ ಉಕ್ಕಿಬರು ನಂತಾಗಿದೆ. ನಾನೇನು ಮಾಡಲಿ ? ನಭಾ:- ಅಳುವನ್ನು ತಡೆಯದಿದ್ದರೆ ಹೇಗೆ? ಅಷ್ಟೂ ಕೇಶವೂ ಹೆಚ್ಚು, ರೋಗವೂ ಹೆಚ್ಚು. ರೆಗಿ:- ಮತ್ತೇನು ಮಾಡಲ? ಮಗ ನಾನು ಸಾಯುವೆನು; ಪ್ರಾ.ಯತುಂಬಿದ ನೀನೊಬ್ಬಳೇ ಮನೆಯಲ್ಲಿ ನಿಸ್ಸಹಾಯಕಳಾಗಿ ಉಳ ಯುವೆ ಶಾಂತಿಪ್ರಸ್ತವು ನೆರೆವೇರಿ, ನೀನು ಸತಿಗೃಹವನ್ನು ಸೇರಿದ್ದರೆ ನಾನು ಎಷ್ಟೋ ಸಂತೋಷದಿಂದ ಪ್ರಾಣಬಿಡುತ್ತಿದ್ದೆ! ನಭಾ:- ಅಮ್ಮ! ಜನನ ಮರಣಗಳನ್ನು ತಿಳಿದು ಹೇಳುವವರಾ ರ ಇಲ್ಲ, ಸಾಯುವೆಯೆಂದು ಹೇಗೆ ಹೇಳುತ್ತಿ? ದೇವರ ದಯೆಯಿಂದ ನಿನಗೆ "ಲ ಗಣವಾದರೆ ಒಡನೆಯೇ ಅವರಿಗೆ ಬರೆಯುತ್ತೇನೆ. ರೋಗಿ;- ನಗು ! ನನ್ನ ರೋಗವು ನಿಜವಾಗಿ ಗುಣವಾಗುವು ದೆಂದಿರುವೆಯಾ? ಇಲ್ಲ-ಇಲ್ಲ; ನಾನಿನ್ನು ಬದುಕುವುದಿಲ್ಲ, ಸಾಯುವುದ ಕ್ಯಾಗಿ ನಾನು ಅಳುತ್ತೇನೆಂದು ತಿಳಿಯಬೇಡ; ನಾನು ಸಾಯುವುದಕ್ಕೆ ವೆ ದಲು ನಿನ್ನ ಗಂಡನೊಡನೆ ನೀನು ಸುಖಿಯಾಗಿ ಸಂಸಾರ ಮಾಡುವು ದನ್ನು ನೋಡದೆ ಹೋಗುವೆನೆಂಬುದೇ ನನ್ನ ಕೊರತೆ. `ನಭಾ:-- ಅಮ್ಮ: ದೇವರ ಇಚ್ಛೆಯಿದ್ದರೆ ಅದ: ಆಗುವುದು.