ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸತೀಹಿತೈಷಿಣೀ. ಅತ್ತು ಫಲವಿಲ್ಲ. - ರೋಗಿ:- ಮಗು, ನನಗೆ ಪ್ರತಿದಿನವೂ ಕೆಟ್ಟ ಕೆಟ್ಟ ಕನಸುಗಳು ಬೀಳುತಲಿವೆ. ಈವರೆಗೆ ಎಷ್ಟೋ ಕಷ್ಟಗಳನ್ನು ಅನುಭವಿಸಿದುದಾಯ್ತು, ಇನ್ನೂ ಎಷ್ಟ ನ್ನು ಅನುಭವಿಸಬೇಕೆ............... ನಭಾ:-ಇಲ್ಲದುದನ್ನೆಲ್ಲ ಮನಸ್ಸಿಗೆ ಹಚ್ಚಿಸಿಕೊಳ್ಳಬಾರದು. ಕನ ಸೆಲ್ಲವೂ ನಿಜವಾಗುವುದಿಲ್ಲ. - ರೋಗಿಯು ಸಭೆಯ ಕೈಯನ್ನು ಹಿಡಿದು ಸತೃಷ್ಣನಯನೆಯಾಗಿ ನೋಡುತ್ತ ಮಗು, ನಿನ್ನ ತಂದೆಯವರು ನಿನ್ನನ್ನು ನೋಡಿದಾಗಲೆಲ್ಲ « ಮಗಳು ಬಹು ಯಶಸ್ವಿನಿಯಾಗಿ ಬಾಳುವಳೆಂದು ” ಹೇಳುತ್ತಿದ್ದರು. ನಿನ್ನ ಈಗಿನ ಬುದ್ದಿ ಕುಶಲತೆ, ವಿವೇಚನಾಶಕ್ತಿ ಇವೆಲ್ಲವನ್ನೂ ನೋಡಿ ದರೆ ಆ ಮಾತು ನಿಜವೆಂದೇ ತೋರುತಿದೆ, ಮಗು, ಕುಲಕ್ಕೆಲ್ಲಾ ಒಬ್ಬಳೇ ಮಗಳೂ ನಮ್ಮ ವಂಶಕ್ಕೆ ಶಿರೋರತ್ನ ಪ್ರಾಯವೂ ಆಗಿರುವ ನೀನು ಚಿರಜೀವಿನಿಯಾಗಿರಬೇಕೆಂಬುದೇ ದೇವರಲ್ಲಿ ನನ್ನ ಪ್ರಾರ್ಥನೆ ” ಎಂದಳು; ಮುಂದೆ ಮಾತಿಲ್ಲದೆ ನಿಟ್ಟುಸಿರುಬಿಟ್ಟಳು. ನಭಾ:- ಅಮ್ಮಾ, ಅದೇನನ್ನು ಕುರಿತು ಚಿಂತೆಮಾಡುತ್ತಿ? ರೋಗಿ:-ಮಗು, ಏನು ಚಿಂತೆ ? ದೇವರ ದಯೆಯಿದ್ದಿದ್ದು ನಿನ ಗಿಂತ ಮೊದಲು ಹುಟ್ಟಿದವರೆಲ್ಲರೂ ಬದುಕಿದ್ದರೆ ಈಗ ನಿನಗೆಷ್ಟು ಮಂದಿ ಅಕ್ಕ, ಅಣ್ಣಂದಿರಾಗುತ್ತಿದ್ದರು ? (ಹೀಗೆ ಹೇಳಿ ಮತ್ತೆ ಬಿಕ್ಕಿಬಿಕ್ಕಿ ಅಳ ತೊಡಗಿದಳು.) - ನಭಾ:- ಅಮ್ಮ, ಇದೇಕೆ ಹೀಗೆ ಅಳುತ್ತಿ? ಎಲ್ಲವನ್ನೂ ತಿಳಿದ ನೀನೇ ಈ ರೀತಿ ಅಳುತ್ತ ಕುಳಿತರೆ ಹುಡುಗಿಯಾದ ನನ್ನ ಪಾಡೇನು ? ನೀನು ಅತ್ತಷ್ಟೂ ನನಗೆ ದುಃಖವು ಹೆಚ್ಚುವುದು, ಮಗಳಿಗೆ ಕಷ್ಟವನ್ನು ಕೊಡಬೇಕೆಂದಿದ್ದರೆ ನೀನು ಅಳಬಹುದು. ರೋಗಿ:-(ದುಃಖವನ್ನು ತಡೆದು)-ಇಲ್ಲ, ಮಗು, ಇನ್ನು ಅಳು ವುದಿಲ್ಲ. ನಭಾ:-ಅಮ್ಮ! ನೋಡು, ನೀನೇ ವಿಚಾರಮಾಡು (ಎಂದೋ ಸತ್ತವರಿಗೆ ಇಂದು ಅತ್ತರು” ಎಂಬಂತೆ ಸಾಯುವಕಾಲದಲ್ಲಿಯ ಹಿಂದೆ