ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಭರಿ, ನಿನಗೆ ಈಗಿನ ಸುಬ್ರಹ್ಮಡರ ವೇ ಸುಲಭವೂ ಸುಖದಾಯಕವೂ ಆದುದೆಂದು ನಂಬಿ, ಕೈ ಬಿಡದೆ ಇದನ್ನೇ ಅನುಸರಿಸು. ಎಂತಹ ಆಪತ್ಕಾ ಲದಲ್ಲಿ, ಎಂತಹ ಕಠೋರಸಮಯದಲ್ಲಿ, ಎಂತಹ ಧನಕನಕ ವಾಹನಾದಿ ಸಂವಲ್ಲಾಭವಾಗುವಂತಿರುವ ವೇಳೆಯಲ್ಲಿಯಾಗಲೀ ನೀನು ಚಂಚಲಳಾಗ ಬಾರದು ! ಒಮ್ಮೆ ಈ ಕ್ಷಣಿಕ ಸುಖದ ಕಡೆಗೆ ಗಮನವಿಟ್ಟ ಮಾತ್ರಕ್ಕೂ ಮೋಹಪಾಶಬಂಧನದಲ್ಲಿ ಬಿದ್ದು ಪರದ ಸರಸ್ವವನ್ನೂ ಕಳೆದುಕೊ ಳ್ಳುವೆ ! ನಭ !! ನಿಷಯೋಪಭೋಗಗಳಿಗಾಗಿ ಚಿರಕಳಂಕಿನಿಯಾಗ ಬೇಡ, ನೀನು ಎಂದಿಗೂ ವಿವೇಕಕ್ಕೆ ವಿರುದ್ಧವಾಗಿ ನಡೆಯಲಾಗದು. ಉಭಯ ಕುಲವನ್ನೂ ಉದ್ದರಿಸಿ, ಯಶಶ್ಚಂದ್ರಿಕೆಯಿಂದ ಬೆಳಗುವಂತ ಮಾಡುವಿಯೆಂಬ ದೃಢವಾದ ನಂಬುಗೆಯು ನನಗಿದೆ, ನಿನ್ನ ಮಾತೃ ಸನ್ನಿಧಿಯಲ್ಲಿ, ನನ್ನ ಅಂತ್ಯ ಪ್ರಣಾಮಗಳನ್ನು ಭಕ್ತಿಯಿಂದ ಸಮರ್ಪಿಸು. ನಭಾ ! ಇನ್ನೇನನ್ನೂ ಬರೆಯಲಾರೆನು. ಇಷ್ಟನ್ನು ಹೇಳುತ್ತೇನೆ. ಅತ್ಮಹತ್ಯೆ ಮಹಾಪಾತಕಕರವಾದುದು, ಅದು ನಿನ್ನ೦ ತಹ ಸ್ತ್ರೀಯರಿಗೆ ಕೂಡದು. ಕಮಾವಲ೦ಬಿನಿಯಾಗಿರು ! ಸತ್ಯಾನುಸಂಧಾನನೇ ಮಾರ್ಗ ವಾಗಿರಲಿ ' ಸುಪ್ರಸಿದ್ಧ ನಾನ್ನಿ ಯರಾದ- ಸದ್ವಿನಿ, ತಾರಾದಿದೇವಿಯರೇ ನಿನ್ನ ದೇಶೋದ್ಧಾರ ಮಹಾವ್ರತದಲ್ಲಿ-ಆದರ್ಶರಾಗಿರಲಿ !! ಇದೇ ನನ್ನ ಅಂತ್ಯಲೇಖನ, ಶ್ರೀನಿವಾಸ.” ನಭೆಯು ಪತ್ರವಕೆಳಗಿಟ್ಟಳು, ಅಳಲಿಲ್ಲ. ಏಕೆ ? ಅತೀವ ದುಃಖದಿಂದ ಕಣ್ಣಿನಲ್ಲಿ ನೀರುಬಾರದು: ಮನವು ಕಲ್ಲಾಗುವುದು. ನಭೆಗೂ ಹಾಗೆಯೇ ಆಯಿತು. ಅಡಿಗಡಿಗೆ ಪತ್ರವನ್ನು ನೋಡುತ್ತ * ಸರ್ವೆಶ್ವರ ! ಇದೂ ನಿನ್ನ ಲೀಲೆಯೇನು ? ಎಂದುಕೊಳ್ಳುತ್ತಿದ್ದಳು. ರೋಗಿ ಉನ್ಮಾದಿನಿಯಂತೆ ಉಚ್ಚಸ್ವರದಿಂದ ;-ಹಾ ! ನಭಾ ! ನಭಾ !! ನನ್ನ ಪ್ರಾಣಗಳು ಅರ್ಧ ಹೋಗಿವೆ; ಎಲ್ಲವೂ ಹೋಗಬಾರದೆ?' ಎಂದು ಕೂಗಿ, ಮತ್ತೂ ಹೇಳಿದಳು:- ಮತ್ತೆರಡು ಕಾಗದವೆಲ್ಲಿಯುವು? ಓದು ಅವನ್ನು, ಕನಸೇ ನಿಜವಾಯತೇ? "