ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸತೀಹಿತೈಷಿಣೀ. ರೋಗಿ:-- ಹಾಗಾದರೆ ನಾನು ಹೋದಮೇಲೆ ನಿನ್ನ --ಗತಿ ? ನಭಾ:- ನನಗೆ ಪ್ರಾರಬ್ಬವೊಂದಲ್ಲದೆ ಮತ್ತೆ ಗತ್ಯಂತರವಿಲ್ಲ. ನಿರಾಲೋಚನೆಯಿಂದ ನೀನು ಹೊರಡು. ರೋಗಿಯು ಶೋಕಾಧಿಕ್ಯದಿಂದ ಹಾ! ಹಾಳುಬೈ ವವೇ! ಕಣ್ಣಿ ಲ್ಲವೆ? ಅಯ್ಯೋ! ಮಗು ! ನನ್ನ ನಭಾ! ಏನುಮಾಡುವೆ?” ಎಂಬ ಪ್ರಲಾಪ ದೊಡನೆಯೇ ಇಹಲೋಕವನ್ನು ಬಿಟ್ಟು ಹೋದಳು. ಇವಳ ಅಂತ್ಯಕಾಲದ ಆರ್ತ ಧ್ವನಿಯಿಂದ ಮನೆಯ ಅಂಗಳವೇ ಪ್ರತಿಧ್ವನಿತವಾಯಿತು. ಸಭೆಯು ಸತ್ತು ಬಿದ್ದಿದ್ದ ತಾಯಿಯನ್ನು ನೋಡಿ, ಮುಂದಿನ ಕಾರ್ಯಕ್ರಮವನ್ನು ಕುರಿತು ಆಲೋಚಿಸತೊಡಗಿದಳು. ನಭೆಯು ಸ್ತ್ರೀಯಾದರೂ ಸಾಧಾರಣಸ್ತ್ರೀಯರಂತೆ ಬಡಿದುಕೊಳ್ಳದೆ ಮನ ಸೃನ್ನು ಘಟ್ಟಿ ಮಾಡಿಕೊಂಡು ತನ್ನ ದುರ್ಗತಿಯನ್ನು ಕುರಿತು ದುಃಖಿಸುವು ದನ್ನು ಕಡೆಗಿಟ್ಟು ಮೃತಳ ದಹನಸಂಸ್ಕಾರಕ್ಕೆ ಮುಂದೇನು ಮಾಡಬೇ ಕೆಂದು ಆಲೋಚಿಸತೊಡಗಿದಳು, ರೋಗಿಯ ಆಕ್ರಂದನವನ್ನು ಕೇಳಿದೆ ನೆರೆಮನೆಯ ವೃದ್ದಳೊಬ್ಬಳು ನಭೆಯ ಮನೆಗೆ ಓಡಿಬಂದು, ಅವಳ ಸ್ಥಿತಿ ಯನ್ನು ನೋಡಿ, ಕನಿಕರದಿಂದ ಕೇಳಿದಳು:- “ನಭಾ! ನಿಮ್ಮ ಅಮ್ಮನು ಹಾಗೇಕೆ ಕೂಗಿಕೊಂಡಳು? ವರ್ತಮಾನವೇನು ??? ನಭಾ:- ಏನೆಂದು ಹೇಳಲಿ? ತಾಯಿ ! ಅಮ್ಮನು ಅಳಿದ ಅಳಿಯ ನಿಗೂ, ಅಳಿಯಲೊಲ್ಲದ ಮಗಳಿಗೂ ಅತ್ತು ಅತ್ತು ಸತ್ತಳು. ವೃದ್ದೆ ;- ಏನು-ಏನು? ನಿಮ್ಮಮ್ಮನು ಸತ್ತಳೆ? ಅಳಿಯ, ಏನು? ಅರು, ನಿನ್ನ ಗಂಡ..... ನಭೆಯು ಉತ್ತರವಿಲ್ಲದೆ ಕಣ್ಣೀರು ತುಂಬಿದಳು. ವೃದ್ಧೆಯ ಕಣ್ಣಿನಲ್ಲಿ ನೀರು ತುಂಬಿತು, ಅವಳು ಅನುಕಂಪ ದಿಂದ- ಅಯ್ಯೋ ಹೀಗಾಗಬಹುದೆ?” ಎಂದಳು. ನಭಾ:- ನನ್ನ ದುಷ್ಕರ್ಮವ ಹೀಗಿರುವಾಗ ಆಗಬಾರದೆಂದರೆ ಬಿಟ್ಟಿತೇ? ತಾಯಿ, ಈಗ ಅಳುತ್ತ ಕೂಡುವಂತಿಲ್ಲ ಈ ಸಮಯದಲ್ಲಿ ನನಗೆ ನೀವು ಸ್ವಲ್ಪ ಉಪಕಾರಮಾಡಲಾರಿರಾ? ವೃದ್ದೆ:-ನಭಾ, ಇಂತಹ ಕಾಲದಲ್ಲಿ ಮಾಡುವುದು ಉಪಕಾರವೇ?