ಈ ಪುಟವನ್ನು ಪರಿಶೀಲಿಸಲಾಗಿಲ್ಲ.

22 ಸತೀಹಿತೈಷಿನೇ. ಹೊರಹೊರಡಬೇಕಾಗಿದೆ, ಅದೇನು? ನಭೆಯ ಶಿರೋಮುಂಡನಾದಿಕ್ರಿಯೆ ಗಳ ವಿಚಾರ ; ನಭೆಯು ಇದರ ಪರಿಣಾಮವನ್ನು ತಿಳಿಯಲು ಆತುರದಲ್ಲಿ ರುವಳು, ಶರಾವತಿಯು ಬೀದಿಯನ್ನು ನೋಡುತ್ತಿರುವಳು; ಶಂಕರ ನಾಥನು ಎಲ್ಲೆಲ್ಲಿಯೋ ಅಲೆದು ಮನೆಗೆ ಬಂದನು; ಹೊಸತಿನೊಳಗೆ ಕಾಲಿಡುವುದರೊಳಗಾಗಿ ಶರಾವತಿಯು ತನ್ನ ಗೃಧದೃಷ್ಟಿಯಿಂದ ನೋಡಿ, 'ಅಯ್ಯೋ, ಊರೆಲ್ಲ ಸುತ್ತಿ ಬಂದುದು ; ನಿಮ್ಮ ಹಣೆಯಬರೆಹವೇ ಅಷ್ಟು !” ಎಂಬ ಕಠೋರ ವಾಗ್ದಾಣಗಳನ್ನು ಪ್ರಯೋಗಿಸಿದಳು. ಶಂಕರನಾಥನು ಕಿರುನಗೆಯಿಂದಲೇ ಪತ್ತಿಯ ಮುಖವನ್ನು ನೋಡಿ, “ ಏನು, ಯಜಮಾನಿಯವರಿಗೆ ಮಹದಾಗ್ರಹವೆಂದು ತೋರು ವುದು? ಈ ದಿನ ಇಷ್ಟು ಕೋಪಕ್ಕೆ ಯಾರು ಕಾರಣರು? ೨೨ ಶರಾವತಿ:-ನನಗೆ ಯಾರಮೇಲೆಯೂ ಕೋಪವಿಲ್ಲ. ಯಾರ ಮೇಲೆ ಕೋಪಿಸಿಕೊಳ್ಳುವ ಅಧಿಕಾರವತಾನೇ ನನಗಿರುವುದು? ನಿಮ್ಮ ಕೆಲಸವನ್ನು ನೀವು ಮಾಡಿಕೊಂಡುಹೋಗಿರಿ, ಯಾರಿಗೇನು? ಅನುಭವಿ ಸುವರು ನೀವೇ ಶಂಕರನಾಥನು ನಕ್ಕು; ಇಷ್ಟ ಕೋಪವೇಕೆ? ಹೆಸರಿಗೆ ತಕ್ಕಂತೆ ಪ್ರತಿವಾಕ್ಯವೂ ತೀಷ್ಟಶರವಾಗಿಯೇ ಪರಿಣಮಿಸುತಿರುವುದಲ್ಲಾ? ಶರಾವತಿ:-ಅಹುದು, ನಾನೇನೋ ಅಂತಹಳೇ ಸರಿ, ತಿಳಿದು ತಿಳಿದು, ನನ್ನ ಹತ್ತಿರ ಹಾಸ್ಯ ವಿನೋದಗಳೇಕೆ ? ಶಂಕರ:-ನೀನು ನನ್ನಲ್ಲಿ ಆಗ್ರಹಮಾಡುವುದೂ, ನಾನು ನಿನ್ನೆ ಡನೆ ಹಾಸ್ಯವಾಡುವುದೂ ಸಹಜವೇ ಸರಿ. ಶರಾವತಿ:-ನನಗೆ ನಿಮ್ಮ ಹಾಸ್ಯವು ಬೇಕಾಗಿಲ್ಲ. ಶಂಕರ:-ಏಕೆ ? ಶರಾವತಿ:-ಹೇಳಿದ ಮಾತಿಗೆ ಬೆಲೆಯಿದ್ದರಲ್ಲವೆ ? ಶಂಕರನಾಥನು ಬೆನ್ನು ತಟ್ಟಿ ಹೇಳಿದನು:- ಸರಿ, ಸರಿ, ಈಗ ತಿಳಿಯಿತು, ಇಂದು ನಾನು ನಿನ್ನಲ್ಲಿ ನಿಜವಾಗಿಯೂ ಅಪರಾಧಿಯಾಗಿರು ವೆನು, ನಿನ್ನ ಮಾತಿನ ಪ್ರಕಾರ ಜಾಗ್ರತೆಯಾಗಿ ಬರಬೇಕಾಗಿದ್ದಿತು. ಆದರೆ, ನಾಳಿನ ಕಾರಗಳಿಗಾಗಿ ನಾಮಗ್ರಿಗಳನ್ನು ತರಲು ಹೋಗಿದ್ದೆ