ಈ ಪುಟವನ್ನು ಪರಿಶೀಲಿಸಲಾಗಿಲ್ಲ.

26 ಸತೀಹಿತೈಷಿಣೀ. ಬಡವನು ಹೀನನು, ದೊಡ್ಡವನು ಮಹಾತ್ಮನೆಂಬ ” ಭೇದವ ಲವಲೇಶ ವಾದರೂ ಅವನಿಗಿಲ್ಲ. ಮನೆಮನೆಗೆ ಭಿಕ್ಷವೆತ್ತಿ ತಿನ್ನು ವ ದರಿದ್ರನಾಗಲಿ, ಸಕಲಸಾಮ್ರಾಜ್ಯ ಪದಾಧಿಕಾರಿಯಾದ ಸಾರಭೌಮನಾಗಲೀ ಎಲ್ಲರೂ ಕಾಲಪುರುಷನ ವಶವರ್ತಿ ಗಳೇ ಆಗಿರುವರು, ಈ ದಿನ ಈ ವೇಳೆಯಿಂದ ನಾಳೆಯ ದಿನ ಈ ವೇಳೆಗೆ ದರಿದ್ರನಿಗೆಷ್ಯ ವೇಳೆಯೊ, ಸಾಲ್ವಭೌಮನಿಗೂ ಅಷ್ಟೇವೇಳೆಯು. ಆದರೆ ಆ ಕಾಲಪುರುಷನು ಸರ್ವರ ವಶದಲ್ಲಿ ಯ ಇದ್ದು ಅವರವರು ಉಪಯೋಗಿಸಿಕೊಳ್ಳುವಂತೆ ಪರಿಣಮಿಸುವನು. - ನಭೆಯು ಚಿಕ್ಕಮ್ಮನ ವಾಕ್ಯರಹತಿಯಿಂನ ಅನುದಿನವೂ ಪರಿತಪಿ ಸುತ ಎರಡು ತಿಂಗಳುಗಳನ್ನು ಕಳೆದಳು. ದಿನಗಳು ಕಳೆದಮೇಲೆ ಅವನ್ನು ಲೆಕ್ಕಿಸಿದರೆ, ದೊಡ್ಡದಾದರೂ ಮನಸ್ಸಿನಲ್ಲಿ ಸಣ್ಣದೆಂಬ ಭಾವನೆಯು ಇರುವುದರಿಂದಲೇ ಹೃದಯದಲ್ಲಿ ಒಂದು ವಿಧವಾದ ಪರಿವರ್ತನೆಯುಂ ಟಾಗುವುದು. ತಲೆಕೂದಲನ್ನು ತೆಗೆಯಸದಿದ್ದ ತಪ್ಪಿತಕ್ಕಾಗಿಯೇ ಎರಡು ತಿಂಗಳಕಾಲ ಇವಳು ಅನುಭವಿಸಿದ ಕಷ್ಟಗಳನ್ನು ವರ್ಣಿಸಿ ತೀರದು. ಏಕಾಂಗಿಯಾಗಿ ಕುಳಿತಾಗಲೆಲ್ಲಾ ಶರಾವತಿ-ಶಂಕರನಾಥರ ಏಕಾಂತ ಭಾಷಣವು ನೆನಪಿಗೆ ಬಂದ. ಹೃದಯವು ಒಡೆದುಹೋಗುವಂತಾಗುತ್ತಿ ದ್ದಿ ತು. ಬೆಳಿಗ್ಗೆ ಒಂಭತ್ತು ಘ೦ಟೆ, ನಭೆಯ ಹಿತ್ತಿಲಕಡೆಯ ಕಿರುಮನೆ ಯಲ್ಲಿ ಏಕಾಂಗಿಯಾಗಿ ಕುಳಿತು- ಈಗೇನು ಮಾಡುವ ? ಕೂದಲಿರು ವುದೇನೋ ಒಂದು ಹೊರೆಯಂತೆಯೇ ಸರಿ; ಆದರೆ, ಇದನ್ನು ತೆಗೆಯಿಸು ವುದೆಂತು ? ನೀಚನ ಕರಸ್ಪರ್ಶದಿಂದಲ್ಲವೇ ? ಚಿಃ ! ಆಗದು. ಅಂತಹ ಕೆಲಸವು ನನ್ನಿಂದ ಆಗದು, ಕೂದಲು ತೈಲಾದಿಗಳಿಂದ ಸಂಸ್ಕೃತವಾದ ರಲ್ಲವೆ, ಅಲಂಕಾರ ಪ್ರಾಯವಾಗುವುದು? ಜಟಾಬಂಧಿತವಾದರೆ ಕುಂ ದೇನು ? ಕೇಶರಾಶಿಯಿಂದಾಗುವ ಲಕ್ಷಣವನ್ನು ಹಾಳುಮಾಡಿದರೆ, ಅದನ್ನು ತೆಗೆವುದರಿಂದಾಗುವ ಫಲವಾಗಲಿಲ್ಲವೇ ?” ಎಂದು ತನ್ನಲ್ಲಿಯೇ ಆಲೋಚಿಸುತ್ತಿದ್ದಳು. ನಭೆ ಹೀಗೆ ಅನನ್ಯಮನಸ್ಕಳಾಗಿ ಚಿಂತಿಸುತ್ತಿರುವಾಗ ಅವಳ ಇದಿ ರಿಗೆ ಸುಮಾರು ಇಪ್ಪತ್ತು-ಇಪ್ಪತ್ತೈದು ವರ್ಷ ವಯಸ್ಸಿನ ಒಬ್ಬ