ಈ ಪುಟವನ್ನು ಪರಿಶೀಲಿಸಲಾಗಿಲ್ಲ.

38 ಸತೀಹಿತೈಷಿನೇ. ಪ೦ ಚ ಮ ಸ ರಿ ಚೇ ದ. ~~ ( ವಿ ಮ ಶೇ ೯ :) ಪ್ರತಾಪಶಾಲಿಯಾದ ಜಗಚ್ಚಕ್ಷುವು ನಭೋಮಂಡಲಮಧ್ಯವರ್ತಿ ಯಾಗಿ ಪ್ರಜ್ವಲಿಸುತ್ತಿದ್ದನು, ಪಶು ಪಕ್ಷಿಗಳು ವೃಕ್ಷಚ್ಚಾಯೆಯನ್ನನು ಸರಿಸಿ ಮಲಗಿದ್ದುವು, ಬೀದಿಯಲ್ಲಿ ಒಬ್ಬರಾದರೂ ತಿರುಗಾಡುತ್ತಿರಲಿಲ್ಲ. ನಾಧಾರಣವಾಗಿ ಎಲ್ಲಾ ಮನೆಗಳ ಬಾಗಿಲುಗಳನ್ನೂ ಹಾಕಿದ್ದರು. ಪ್ರ ತಾಪಶಾಲಿಯಾದ ಕೆ ಧನಹಾಪುರುಷನ ಶಕ್ತಿ ಕೂಡ ಇಂತಹ ಸಮ ಯದಲ್ಲಿ ಯಲ್ಲವೆ, ಹೆಚ್ಚಿರುವದು ? ಈ ಮಹಾಪುರುಷನ ಕೈಯಿಂದಾಗದೆ ಕಾರವಾವುದು ? ಶರಾವತಿಯು ದುರ್ಜಯಕ್ರೋಧಮಹಾರಾಜನ ಸಮಾವೇಶದಿಂದ ಬಲುಬೇಗ ಅಡುಗೆಯನ್ನು ಮುಗಿಸಿದಳು, ಗಂಡನು ಊಟಕ್ಕೆ ಬಂದು ಕುಳಿತುಕೊಳ್ಳುವವರೆಗೂ ಸುಮ್ಮನೆಯೇ ಇದ್ದಳು. ಶಂಕರನು ಊಟ ಕೈಂದು ಎಲೆಯಮುಂದೆ ಕುಳಿತನು. ಅವನನ್ನು ನೋಡಿ ಹುಬ್ಬುಗಂಟಿ ಕ್ಕಿಕೊಂಡು ಕರ್ಕಶಸ್ವರದಿಂದ “ಏನು, ನಿಮ್ಮ ಮಗನು ಊಟಕ್ಕೆ ಬರು ವನೋ ಇಲ್ಲವೋ?” ಎಂದು ಕೇಳಿದಳು. ಶಂಕರನಾಥನು ಚಕಿತನಾಗಿ ( ಏನು, ಯಾರು? ನಿರಂಜನನು ಒಂದಿರುವನೆ? ” ಎಂದು ವಿಚಾರಿಸಿದನು, ಶರಾವತಿ:- ಆ ತಲೆಹರಟೆಯವನೇ ಬಂದಿರುವನು. ಶಂಕರ:- ಆವಾಗ ಬಂದನಂತೆ ? ಶರಾವತಿ:- ಆರಿಗೆ ಗೊತ್ತು? ಬೆಳಿಗ್ಗೆ ಇಲ್ಲಿಗೆ ಬಂದಿದ್ದನು. ಶಂಕರ:- ಏಕೊ ? ಶರಾವತಿ:- ತಂಗಿಯನ್ನು ನೋಡುವುದಕ್ಕೇನೋ ? ಶಂಕರಃ~ ನನ್ನ ನ್ನು ನೋಡಲಿಲ್ಲವೇಕೆ ? ಶರಾವತಿ:- ನೀವು ಮಾಡಿರುವ ದ್ರೋಹಕ್ಕೆ ನಿಮ್ಮ ಮುಖವನ್ನೂ ನೋಡಬೇಕೆ?