ಈ ಪುಟವನ್ನು ಪರಿಶೀಲಿಸಲಾಗಿಲ್ಲ.

64 ಸತೀಹಿತೈಷಿಣೀ ನಭಾ:- ಕ್ಷಮಿಸು, ಅಣ್ಣಾ! ತಿಳಿಯಲಿಲ್ಲ. ನಿರಂಜನ:- ಏನನ್ನು ಕ್ಷಮಿಸುವುದು? ತಪ್ಪುಮಾಡಿ ಕ್ಷಮಾಪಣೆ ಕೇಳುವದೋ? ಅದೇ ಮರ್ಯಾದೆಯೋ! ನಭಾ:- ನೀನೇಕೆ ಹಾಗೆಮಾಡಿದೆ? ನಿರಂಜನ:- ನೀನೇಕೆ, ಹಾಗೆ ಅರಚಿಕೊಂಡೆ ? ನಭಾ:- ರಾಜಶೇಖರನು ಹಿಡಿದುಕೊಂಡನೆಂದು ಅರಚಿಕೊಂಡೆ! ನಿರಂಜನ:- ನನ್ನ ಹಾಗೆ ಅವನು ಮಾಡಿದ್ದರೆ, ಆಗುತ್ತಿದ್ದ ಕುಂದೇನು? ನಭಾ:- ಕುಂದಲ್ಲವೆ? ನೀನು ನನಗಾರು? ಅಣ್ಣ, ಮತ್ತು ನನ್ನ ವಿಷಯದಲ್ಲಿ ನೀನು ನಿಷ್ಕಲ್ಮಷವಾದ ಶುದ್ದ ಪ್ರೇಮದಿಂದ ನನ್ನ ಆತ್ಮೀ ನೃತಿಯಾಗುವಂತೆ ಮಾಡಲುಳ್ಳವನಾಗಿದ್ದೀಯೆ. ಅವನು ಆ ಭಾವವನ್ನು ತ್ಯಜಿಸಿರುವುದರಿಂದ ಅವನನ್ನು ಕಂಡರೆ ನನಗೆ ಹೆದರಿಕೆಯಾಗುತಿರುವುದು, ನಿರಂಜನ:- ಅವನ ಭಾವವೆಂತಹುದು ? ಉದ್ದೇಶವಾದರ ಏನೆಂಬುದನ್ನು ಬಲ್ಲೆಯೋ ? ನಭಾ:- ಪುನರ್ವಿ ವಾಹವಿಧಿಯಿ೦ದ ನಾನು ಆತನನ್ನು ವರಿಸಬೇ ಕಂತೆ ? ನಿರಂಜನ:- ಅದಕ್ಕೆ ನೀನೇನು ಹೇಳುವೆ ? ಈ ವೇಳೆಗೆ ಸರಿಯಾಗಿ ರಮಾಮಣಿಯು ಚಹದ ಪಾತ್ರೆಯನ್ನು ಕೈಯಲ್ಲಿ ಹಿಡಿದುಕೊಂಡು ಕಿರುಮನೆಯನ್ನು ಹೊಕ್ಕಳು, ಹಿಂದೆ ಉಪಾ ಹಾರ ಪದಾರ್ಥವನ್ನು ತಂದ ಪರಿಚಾರಕನು ನಿರಂಜನ, ರಮಾಮಣಿ, ನಭೆಯರಿಗೆ ಮುಂದಿಟ್ಟು ಹೊರಟುಹೋದನು. ರಮಾಮಣಿಯ ಒಂದು ಆಸನವನ್ನು ಸ್ವೀಕರಿಸಿದಳು. ನಿರಂಜನನು ರಮಾಮಣಿಯ ಆಜ್ಞಾನುಸಾರವಾಗಿ ಟೀಕಪಾ ಯವನ್ನು ಕುಡಿಯುತ್ತ ಅಮ್ಮ : ನೀನೇನು ಹೇಳುವೆ ? ” ಎಂದನ.. ರಮಾ:- ಆವ ವಿಷಯದಲ್ಲಿ ? ನಿರಂಜನ:- ನಭೆಯ ಪುನರ್ವಿವಾಹ ವಿಷಯದಲ್ಲಿ !