ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಭಾ 65 ರಮಾ~ ನನಗೇನೋ ಪೂರ್ಣಾಭಿಲಾಷೆಯಿರುವುದು, ಆದರೆ, ಅವಳಿಗೆ ಇನ್ನು ಹೇಳಲಾರೆನು. ಹೇಳುವಷ್ಟನ್ನೆಲ್ಲ ಹೇಳಿ, ಅಂದೇ ಮುಗಿಸಿ ಬಿಟ್ಟಿರುವೆನು, ನಿರಂಜನ:- ನಭಾ! ಏನುಹೇಳುವೆ ? ನಭಾ:- ಏನುಹೇಳಲಿ? ಅಮ್ಮನು ಹೇಳಿದುದೂ ಉಂಟು; ಅಮ್ಮ ನಿಗೆ ಸಮಂಜಸವಾದ ಉತ್ತರವನ್ನು ಕೊಟ್ಟುದೂ ಉಂಟು, ನಾನೊಲ್ಲೆ ನು. ನಿರಂಜನ:- ಏಕೆ ? ನಭಾ:- ಏಕೆಂದರೆ, ಏನುಹೇಳಲಿ? ಇಷ್ಟವಿಲ್ಲ. ನಿರಂಜನ:- ಇಷ್ಟವಿಲ್ಲವೊ? ಸುಖವಾಗಿ ಬಾಳುವ ಮಾರ್ಗ ದಲ್ಲಿ ಹೋಗಲು ಇಷ್ಟವಿಲ್ಲವೊ ? ನಭಾ:- ಇವೆಲ್ಲಾ ಸುಖಗಳೊ? ನೈಜವಾದ ಸುಖವಾವುದು ? ಅದೆ ಲ್ಲಿದೆ? ವಿಚಾರಮಾಡಿ ಹೇಳಿರಿ ! ನಿರಂಜನ:-ಹಾಗಾದರೆ, ಮತ್ತಾವುದು ನೈಜವಾದ ಸುಖ ? ನಭಾ:- ಇದೇ ಈಗಿನ ಈ ಸುಬ್ರಹ್ಮಚರ್ಯೆಯೇ ಉತ್ತಮವಾದ ಮಾರ್ಗವೆಂದು ಧೈರ್ಯವಾಗಿ ಹೇಳಬಲ್ಲೆನು. ನಿರಂಜನ:-ಒಂದುವೇಳೆ, ಇದು ಅಸಾಧ್ಯವಾಗಿ ತೋರಿದರೋ? ನಭಾ:~ ಅಸಾಧ್ಯವಾವುದು ? ನಮ್ಮ ಸ್ವಾಧೀನದಲ್ಲಿರುವ ಅನುದಾ ದರೂ ನಮ್ಮ ಪ್ರಯತ್ನದಿಂದ ಅಸಾಧ್ಯವಾಗುವುದುಂಟೊ ? ತಕ್ಕಷ್ಟು ಶ್ರಮಪಟ್ಟರೆ, ಎಲ್ಲವೂ ಸಾಧ್ಯವೇ ಆಗುವುದು. ನಿರಂಜನ:- ಅಷ್ಟು ಕಷ್ಟ ಪಡಲೇಕೆ ? ಸುಲಭವಾದುದಕ್ಕಲ್ಲದೆ, ಕಷ್ಟವಾದುದಕ್ಕೆ ಯತ್ನಿಸುವುದರಿಂದೇನು ?

  • ನಭಾ:-ಕಷ್ಟವಿಲ್ಲದೆ ಸುಖವು ದೊರೆಯದು, ಕಷ್ಟವಿಲ್ಲದೆ ದೊರೆವ ಸುಖವು ನೈಜವಾದ ಸುಖವಲ್ಲವ, ಸುಖದಂತ ಕಾಣುವ ಕಷ್ಟ ವೇ ಅದೆ ನಬಹುದು.

ನಿರಂಜನ:- ಹಾಗಾದರೆ, ನೈಜವಾದ ಸುಖವಾವ್ರದು ? - ನಭಾ:- ಇಹವ್ಯಾಪಾರವನ್ನು ಸಾಧ್ಯವಾದಮಟ್ಟಿಗೆ ತ್ಯಜಿಸಿ ಪರದ ಸರಸ್ವಕ್ಕೆ ಪ್ರಯತ್ನಿಸುವುದು.