ಈ ಪುಟವನ್ನು ಪರಿಶೀಲಿಸಲಾಗಿಲ್ಲ.

66 ಸತೀಹಿತೈಷಿಣೀ ರಮಾ:- ಕರ್ಮಭೂಮಿಯಲ್ಲಿ ಹುಟ್ಟಿದವರೆಲ್ಲರೂ ಇಹವ್ಯಾಪಾರ ದಲ್ಲಿ ಬದ್ಧರಾಗಿರಲೇಬೇಕು, ಅದನ್ನು ಬಿಟ್ಟಿರುವರಾರಿರುವರು ? - ನಭಾ:-ಹಾಗೆ ಬದ್ಧರಾಗಿದ್ದರೂ ಕೀವ್ರ ರಕ್ತಮಯವಾದ ಕೂಪ ದಲ್ಲಿ ಬಿದ್ದು ಕಷ್ಟ ಪಡುವುದಕ್ಕಿಂತ ತಾವರೆಯಲೆಯ ಮೇಲಿನನೀರಿನಂತೆ ನಿರ್ಲಿಪ್ತರಾಗಿದ್ದು, ವಿಶಾಲವಾದ ಮೈದಾನದಲ್ಲಿ ವಿರಮಿಸುವವರೇ ಧನ್ಯರು. - ನಿರಂಜನ:- ನಿನ್ನ ಅಭಿಪ್ರಾಯದಲ್ಲಿ ಕಿವು-ರಕ್ತಮಯವಾದ ಕೂಪವಾವುದು ? ನಭಾ:- ಕ್ಷಣಭಂಗುರವಾದ ಕಾಮಕ್ರೋಧಾದಿಗಳಿಗೊಳಪಟ್ಟ ದುರ್ವಿಷಯಗಳೇ ಕೀವುರಕಗಳು; ಇವುಗಳಿಗೆ ಆಧಾರಭೂತವಾದ ದುರಭಿಮಾನವೇ ಕೂಪವು. ಇಂತಹ ಕೂಪದಲ್ಲಿ ಬಿದ್ದಿರುವರೇ ಹುಚ್ಚರು, ರಮಾ:- ಹಾಗಾದರೆ, ನಾವೆಲ್ಲಾ ಹುಚ್ಚರೇನು ? ಸಭಾ:- ಅಮ್ಮ! ಗೃಹಸ್ಥಾಶ್ರಮಧರ್ಮದಲ್ಲಿ ರುವ ನೀವು ಹಾಗೆ ದಿಗೂ ತಿಳಿಯಬಾರದು. ರಮಾ:- ಹಾಗಾದರೆ, ನಮ್ಮ ಕರ್ಮಗಳು ಮತ್ತಾವುವು? ಹೇಗಿರ ಬೇಕು? ಹೇಳಬಲ್ಲೆಯಾ? - ನಭಾ:- ಅಣ್ಣ! ಅಮ್ಮ! ಹಾಸ್ಯಮಾಡಬೇಡಿರಿ. ನನಗೆ ವೇದಾಂ ತವ ತಿಳಿಯದು, ಆದರೂ ಇಷ್ಟು ಮಾತ್ರ ತಿಳಿದಿರುವೆನು, ಪ್ರಾಸಂ ಚಿಕ ತತ್ವವನ್ನು ವಿಚಾರಮಾಡಿದರೆ, ಪತಿಗೆ ಸತಿಯೂ, ಸತಿಗೆ ಪ್ರತಿಯ ಪರಸ್ಪರ ಸಹಾಯಕರಾಗಿರಬೇಕು, ಅವರು ದೇಹ, ವಾಕ, ಮನಸ್ಸ ಗಳಲ್ಲಿಯೂ ಒಬ್ಬರಂತೆಯೇ ಅಭೇದಭಾವದಿಂದಿರಬೇಕು, ಇಂತಹ ಅಭಿನ್ನ ಭಾವನೆಯ ಕ್ಷಮದಮಾದಿಯೋಗದಿಂದ ಚತುರ್ವಿಧಪುರುಷಾರ್ಥ ಗಳನ್ನು ಸಂಪಾದಿಸುವುದೇ ಗೃಹಸ್ಥಾಶ್ರಮದ ಅಧಿಕಾರವು, ಗೃಹಿಗಳು. ಪತ್ರಮಿತ್ರ ಕಳತ್ರಾದಿ ಬಂಧುವರ್ಗವನ್ನೂ ಬ್ರಹ್ಮಚಾರಿ ಸನ್ಯಾಸಿಗಳೇ ಮೊದಲಾದ ಅನಾಥವರ್ಗವನ್ನೂ ಕಾಪಾಡಬೇಕಾದುದು ಕರ್ತವ್ಯವಾಗಿದೆ. ಇಂತಹ ಕರ್ತವ್ಯ ಸಾಧನೆಗೆ ನಿರ್ದುಷ್ಟವಾದ ಶ್ರದ್ಧೆ, ಸಮಾದರ, ಅಭಿಮಾ ನಗಳು ಚಿರಸ್ಥಾಯಿಗಳಾದ ಉಪಕರಣಗಳಾಗಿರಬೇಕು, ಹಾಗಲ್ಲದಿದ್ದರೆ ಅವರು ನಿಜಕರ್ತವ್ಯಕರ್ಮವನ್ನು ಹೋಗಲಾಡಿಸಿಕೊಳ್ಳು ವರು,