ಈ ಪುಟವನ್ನು ಪರಿಶೀಲಿಸಲಾಗಿಲ್ಲ.

76 ಸತೀಹಿತೈಷಿಣೀ ಕೈಕೊಂಡಿರುವಳು. ಸರ್ವರನ್ನೂ ತನ್ನ ಮೋಹಮಯಶಕ್ತಿಯಿಂದ ಮರುಳುಮಾಡಿರುವಳು. ಆದರೂ ಅವಳು ಇನ್ನೂ ರಮಾನಂದ, ಭಗೆ ವಾನಂದ, ನಭೆ - ಇವರೆಡೆಗೆ ಬರಲು ಶಕ್ತಳಾಗಿರಲಿಲ್ಲ, ಈ ಮೂವರ ತಮ್ಮ ನಿಯಮಿತವಾಠವನ್ನು ತೀರಿಸಿಕೊಂಡು ಕುಳಿತು ಅನೇಕ ವಿಷಯ ಗಳನ್ನು ಚರ್ಚಿ ಸುತ್ತಿದ್ದರು. ಅವುಗಳಲ್ಲಿ ಕೆಲವನ್ನು ಮಾತ್ರ ನಮ್ಮ ವಾಚಕರ ಅವಗಾಹನೆಗೆ ಕೊಡುವೆವು. - ರಮಾನಂದ:-ಅಕ್ಕ ! ನೀನು ಇಲ್ಲಿಗೆ ಬಂದು ಇನ್ನೂ ಬಹುದಿನ ಗಳಾಗಿಲ್ಲ; ಈಗಾಗಲೇ ನಮಗಿಂತ ಹೆಚ್ಚಾಗಿ ಪಾಠಗಳನ್ನು ಓದಿರುವಿ ಯಲ್ಲ ! ಇದೇನು ಆಶ್ಚರವು? ನೀನು ನಮ್ಮೊಡನೆ ಓದುತ್ತಿದ್ದರೂ ನಿನ್ನ ಷ್ಟು ಜಾಗ್ರತೆ ನಮಗೇಕೆ ಬರಬಾರದು ? - ಸಭಾ:--ಪುರುಷರಿಗಿಂತ ಸ್ತ್ರೀಯರು ಕುಶಲಬುದ್ಧಿಯುಳ್ಳವರೆಂದಾ `ಡುವರಷ್ಟ ? ಭಗ:-ನನಗೂ ಹಾಗೆಯೇ ತೋರುವುದು, ಇಲ್ಲವಾದರೆ, ಸಾಧ್ಯವೆ? ಅದೂ ಅಲ್ಲದೆ ನೀನು ಆವಾಗಲೂ ಓದುತಲೇ ಇರುತ್ತೀಯೆ. ನಭಾ:- ಅದಕ್ಕೂ ಸ್ತ್ರೀಯರು ಹಠವಾದಿಗಳೂ, ದೃಢಸಂಕಲ್ಪ ರೂ ಆದವರೆನ್ನ ಬಹುದು, ಅವರು ತಮ್ಮ ಹಠಸಾಧನೆಗಾಗಿ ಪ್ರಾಣವನ್ನಾ ದರೂ ತರಬಲ್ಲರು; ಕಾರಸಿದ್ಧಿಗೆ ಮೊದಲು, ಅವರ ಮನಸ್ಸು ಇತರ ವಿಷಯ ಗಳನ್ನು ಗಮನಿಸದು. ಪುರುಷರಲ್ಲಿ ಅಂತಹ ಹಠಸಾಧನೆಯ ಶಕ್ತಿಯು ಅಷ್ಟು ಸ್ಥಿರವಾಗಿ ಇರಲಾರದು. ಸೀಚಿತ್ರದಲ್ಲಿ ಉಂಟಾಗಬಹುದಾದ ಕಾಠಿಣ್ಯ-ಸ್ಪಿರ್ಯಾದಿಗಳು ಪುರುಷರ ಹೃದಯದಲ್ಲಿ ಒಮ್ಮಿಂದೊಮ್ಮೆ ಯೇ ಉಂಟಾಗಲಾರದು. ಏಕೆಂದರೆ, ಪುರುಷರ ಹೃದಯದಲ್ಲಿ ಬಹುವಾಗಿ ಕುಲಗೌರವ, ಸ್ವಾಭಿಮಾನ, ಅಹಂಕಾರ ಕ್ರೋಧಾದಿಗಳೇ ತುಂಬಿರು ವುವು; ಅವುಗಳಿಗೆ ಅಧೀನರಾದವರು ಹೇಗೆ ತಾನೆ ವಿದ್ಯಾಭ್ಯಾಸಮಾಡಬಲ್ಲ ರು? ವಿದ್ಯಾರ್ಥಿಗಳು ಲಕ್ಷಾಧಿಕಾರಿಗಳಾಗಿದ್ದರೂ, ವಿದ್ಯಾಭಿಮಾನಿದೇವ ತೆಗೆ ನಮ್ರತೆ ತೋರಿದಲ್ಲದೆ, ಪ್ರಸನ್ನಳಾಗಳು.

  • ಭಗ:- ಅಹುದು, ನಿನ್ನ ಮಾತು ನಿಜ, ಇದೇ ಊರಿನಲ್ಲಿಯೇ ನೋಡು, ನಮ್ಮ ಶಾಲೆಯಲ್ಲಿ ನಮ್ಮೊಡನೆಯೇ ಓದುತಿರುವ ಇಬ್ಬರು