ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಿರ್ಮಲೆ ೧೧ ಬಂದೆನು, ಆ ಕೋಣನಾದ ದುರ್ಮತಿಯನ್ನು , ಇ೦ದ್ರ, ಚಂದ್ರ, ದೇವೇಂ ದ್ರನೆಂದು ನನ್ನ ಮುಂದೆ ಹೊಗಳಿ ಬೇಸರಪಡಿಸಿದಳು, ನನ್ನ ಭಾವನೆಯಲ್ಲಿ ಅವನಂತಹ ಮತಿಹೀನನು ಬೇರೊಬ್ಬನಿಲ್ಲ. ಆದರೆ, ನಿಮ್ಮಮ್ಮನ ಪಾಲಿಗೆ ಅವನು ಪೂರ್ಣಪ್ರಜ್ಞನು, ಅವನಂತಹ ಬುದ್ದಿವಂತರು ಜಗತ್ತಿನಲ್ಲೇ ಯಾರೂ ಇಲ್ಲ ನಂತೆ ! ನಿರ್ಮ-ಅವಳ ಅಭಿಮಾನವನ್ನು ಏನೆಂದು ಹೇಳಲಿ ? ಬಾಯಲ್ಲಿ ಹೇಳುವುದು ಮಾತ್ರವಲ್ಲ; ಮನಸಾ, ದುರ್ವತಿಯನ್ನು ಸರ್ವಜ್ಞನೆಂದೇ ತಿಳಿ ದುಕೊಂಡಿರುವಳು. ನಿನ್ನ ಐಶ್ವರ್ಯವನ್ನು ನೋಡಿದರೆ ಯಾರಿಗೆ ತಾನೆ ದುರ್ಬುದ್ದಿ ಯು ಹುಟ್ಟುವುದಿಲ್ಲ ? ಜತೆಗೆ, ನಿನ್ನ ಐಶ್ವರ್ಯವೆಲ್ಲವೂ ನನ್ನ ತಾಯಿಯ ಸರ್ವಾಧಿಕಾರದಲ್ಲೇ ಇರುವುದು. ಆದುದರಿಂದ ಅದು ಮನೆ ಯನ್ನು ಬಿಟ್ಟು ಹೋಗಕೂಡದೆಂದು ಅವಳು ಪ್ರಯತ್ನ ಪಡುವಳು. ಅದ ರಲ್ಲಿ ಆಶ್ಚರ್ಯವೇನು ? ಕಮ:-ನನ್ನ ಆಸ್ತಿಯೆಲ್ಲವೂ ಜವಾಹಿರಿಯ ರೂಪದಲ್ಲಿದೆ. ಆದುದ ರಿಂದ ವಿಶೇಷ ದುರ್ಬುದ್ಧಿಯು ಹುಟ್ಟುವಂತಿಲ್ಲ, ಆದರೇನು? ನನ್ನ ಪ್ರಿಯ ಸೇನನು ಸತ್ಯವಂತನಾಗಿದ್ದರೆ ನಿನ್ನ ತಾಯಿಗೆ ಮೋಸಮಾಡುವುದೇನೂ ಕಷ್ಟವಲ್ಲ, ಅವಳಿಗೆ ನಾನು ನುಂಗಲಾರದ ತುತ್ತೇ ಆಗುವೆನು. ಅದುವ ರೆಗೂ ದುರ್ಮತಿಯನ್ನು ಪ್ರೀತಿಸುವಂತೆಯೇ ನಟಿಸುತ್ತಿರುವೆನು. ಮತ್ತೊ ರ್ವಯುವಕನಲ್ಲಿ, ನನ್ನ ಪ್ರೀತಿ, ನನ್ನ ಪ್ರಾಣ, ನನ್ನ ಸತ್ವವನ್ನು ನೆಲೆಸಿರುವೆ ನೆಂಬ ಅನುಮಾನವು ನಿನ್ನ ತಾಯಿಗೆ ಹುಟ್ಟಲು ಸ್ವಲ್ಪವೂ ಅವಕಾಶವನ್ನು ಕೊಡುವುದಿಲ್ಲ. ನಿಮ್ಮ-ನಮ್ಮ ದುರ್ಮತಿ ಕೇವಲ ಹಟವಾದಿ, ನಿನ್ನನ್ನು ಈರೀತಿ ಯಾಗಿ ದ್ವೇಷಿಸುತ್ತಿರುವುದಕ್ಕಾಗಿಯೇ, ನಾನು ಅವನನ್ನು ಮೆಚ್ಚುತ್ತೇನೆ. ಕಮ:-ದುರ್ಮತಿಯು ಹೃದಯದಲ್ಲೇನೋ ಸಾಧುಸ್ವಭಾವವುಳ್ಳ ವನು, ಅವನಿಗಲ್ಲದೆ ಮತ್ತಾರಿಗಾದರೂ ನನ್ನ ನ್ನು ಕೊಟ್ಟು ವಿವಾಹವಾ