ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೮ ನಿರ್ಮಲೆ [ಕಮಲಾವತಿ ಚಂಡಿಯರು ಪ್ರವೇಶಿಸುವರು.] ಚಂಡಿ:-ಕಮಲೆ, ನಿನ್ನ ಮಾತುಗಳನ್ನು ಕೇಳಿದರೆ ನನಗೆ ನಗುವು ಬರುವುದು, ನಿಮ್ಮಂತಹ ಹುಡುಗಿಯರಿಗೆ ಒಡವೆಗಳೇಕೆ ? ನಾಚುಕೆಗೇಡು! ಒಡವೆಗಳನ್ನು ಇಟ್ಟು ಕೊಳ್ಳುವ ಕಾಲವು ಬೇರೆಯಿದೆ. ಇನ್ನಿ ಪ್ಪತ್ತು ವರ್ಷ ಗಳು ಕಳೆಯಲಿ, ಆಗ ನಿನ್ನ ರೂಪವು ಸ್ವಲ್ಪ ಕಡಮೆಯಾಗುವುದು. ಆಗ ಒಡವೆಗಳನ್ನಿಟ್ಟು ಕೊಂಡರೆ ಚೆನ್ನಾಗಿ ಕಾಣುವಿ. ತಿಳಿಯಿತೆ ? ಕಮ: ನಲ್ವತ್ತು ವರ್ಷಗಳಾದ ಮೇಲೆ ಒಡವೆಗಳು ಸೌಂದರವನ್ನು ಹೆಚ್ಚಿಸುವುದಾದರೆ, ಇಪ್ಪತ್ತು ವರ್ಷ ಪ್ರಾಯದವಳಾದ ನನ್ನ ಸೌಂದರ್ಯವು ಒಡವೆಗಳಿಂದ ಮತ್ತಷ್ಟು ಹೆಚ್ಚಬೇಡವೆ ? ನನ್ನ ಸೌಂದರ್ಯವು ಅವುಗಳಿಂದ ಹೆಚ್ಚುವುದೊ ಇಲ್ಲವೊ ? ಚಂಡಿ:-ನಿನ್ನ ರೂಪರಾಶಿಯು ಪೂರ್ಣವಾಗಿರುವಾಗ ಅದನ್ನು ಹೆಚ್ಚಿ ಸಬೇಕಾದ ಆವಶ್ಯಕತೆಯೇ ಇಲ್ಲ, ನಿನ್ನ ಕಪೋಲಗಳನ್ನು ನೋಡಿಕೊ. ಎಂತಹ ಮನೋಹರವಾದ ಎಳೆ ಕೆಂಪುವರ್ಣವುಳ್ಳವ, ಅವಕ್ಕೆ ಯಾವ ಒಡ ವೆಗಳನ್ನು ತಾನೆ ಹೋಲಿಸಬಹುದು ? ನಿನ್ನ ವಯಸ್ಸಿನ ಯುವತಿಯರು ಒಡ ವೆಗಳನ್ನು ಧರಿಸುವ ವಾಡಿಕೆಯಿಲ್ಲ - ನೆರೆಯವರನ್ನು ನೋಡಬಾರದೆ ? ಕಮ: ನಾನೇಕೆ ಹೇಳಲಿ ? ನಾನು ನನ್ನ ಒಡವೆಗಳನ್ನೆಲ್ಲ ಧರಿಸಿ ಕೊಂಡರೇ, ಯಾರೋ ಒಬ್ಬರಿಗೆ-ಅವರ ಹೆಸರನ್ನು ಈಗ ಏಕೆ ಹೇಳಲಿನನ್ನಲ್ಲಿ ಪ್ರೇಮವು ಹೆಚ್ಚುವುದಾದರೆ ?

  • ಚಂಡಿ :-ಕನ್ನಡಿಯಲ್ಲಿ ನೋಡಿಕೋ, ಥಳಥಳಿಸುತ್ತಲಿರುವ ಸೊಗ ಸಾದ ಕಣ್ಣುಗಳುಳ್ಳ ನಿನಗೆ ವಜ್ರವೈಢರಗಳೇಕೆ ? (ದುರ್ಮತಿಯನ್ನು ಉದ್ದೇಶಿಸಿ) ಮಗು, ನೀನೇ ಹೇಳು. ಒಡವೆಗಳನ್ನು ಧರಿಸದಿದ್ದರೆ ಕಮಲೆಯು ಸುಂದರಳಾಗಿ ಕಾಣುವಳಲ್ಲವೆ? ಒಡವೆಗಳಿಂದ ಪ್ರಯೋಜನವೇನು?

ದುರ್ಮ:-ಅದನ್ನು ನಾನು ಈಗಲೇ ಹೇಳುವಹಾಗಿಲ್ಲ. ಕಮ:-ಅಮ್ಮ, ಒಡವೆಗಳನ್ನು ಕೊಟ್ಟರೆ ನೀನೆಂತಹ ಉಪಕಾರ