ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ,


ಮೂಡಿದರು, ಇದರಂತೆ ಸ್ವತಃ ಶ್ರೀ ಶಂಕರಾಚಾರ್ಯ ರು ಒಬ್ಬ ಕಾಪಾಲಿಕನನ್ನು ದಾದದಲ್ಲಿ ಜಯಿಸಲು, ಆಶನು ಮುಖಭ೦ಗಿತನಾಗಿ ಮೂರಣಕ್ರಿಯೆಯಿಂದ ಶ್ರೀ ಶಂಕರಾಚಾರ್ಯರಿಗೆ ಮೂಲವ್ಯಾಧಿಯ (ಭಗಂದರ) ರೋಗವನ್ನು ಉತ್ಪನ್ನ ಮೂಡಿ ದನು, ಆಚಾರ್ಯರು ತಮ್ಮ ಈ ಕರ್ಮದ ಫಲವನ್ನು ಭೋಗಿಸದೆ ಬಿಡಲು ಸವ ರ್ಥರಾಗಿದ್ದ ರೂ, ತಮ್ಮ ನಿಜವಾದ ಸಾಮರ್ಥ್ಯವನ್ನೂ, ಪ್ರಾಮಾಣಿಕತನವನ್ನೂ ತೋರಿಸುವದಕ್ಕಾಗಿ ಕೃತಕರ್ವವಿಪಾಕದ ಶೇಷವು ಉಳಿಯದಂತೆ ೨೧ ದಿವಸಗಳ ವರೆಗೆ ಆರೋಗದ ಮಹಾವ್ಯಥೆಯನ್ನು ಭೋಗಿಸಿದರು! ಇದರಂತೆ, ಮಹಾತ್ಮನಾದ ಏಸುಕ್ರಿಸ್ತನು, ಆಗಿನ ಸಮಜದ ಪಾಷಂಡತನಕ್ಕೆ ಬಲಿಯಾಗಿ ಶೂಲಕ್ಕೇರಿಸ ಲ್ಪಟ್ಟು ಜಗತ್ತಿನ ಪಾಪಕ್ಕಾಗಿ ತನ್ನ ದೇಹವನ್ನು ಕೊಟ್ಟನು, ಮತ್ತು,'ಮಹಮ್ಮದ ಪೈಗಂಬರರು ನಾಸ್ತಿಕರಾದ ಅರಬರ ಉಪಟಲಕ್ಕೆ ಗುರಿಯಾಗಿ ಮಕ್ಕೆಯಿಂದ ಮದೀನಾಪಟ್ಟಣಕ್ಕೆ ಓಡಿಹೋಗಿ ಅಲ್ಲಿ .ದೇಹಬಿಟ್ಟ ರು ; ಆದರೆ ಅಹಂಕಾರವುಳ್ಳ ಸಾಂಸಾರಿಕರಾದ ನಮಗಾಗುವ ಕರ್ವ ಭಾದೆಗೂ, ಅಹಂಕಾರವಿಲ್ಲದ ಸಪ್ಪುರುಷರಿ ಗಾಗಿ ದೇವರಿಗಾಗಲಿ ಆಗುವಕರ್ಮಬಾಧೆಗೂ ಮಹದqತರವುಂಟು; ಯಾಕಂದರೆ, ನಾವು ಸ್ವಾರ್ಥವಲವಾಗಿ ಕರ್ಮವನ್ನು ಭೋಗಿಸುತ್ತೇವೆ, ಅವರು ಪರಾರ್ಥ ಮೂಲವಾಗಿ 'ಕರ್ಮವನ್ನು ಭೋಗಿಸುತ್ತಾರೆ; ನಾವು ಅಜ್ಞಾನದಿಂದ ಕರ್ಮವನ್ನು ಭೋಗಿಸುತ್ತೇವೆ, ಅವದು ಜ್ಞಾನದಿಂದ ಕರ್ಮವನ್ನು ಭೋಗಿಸುತ್ತಾರೆ; ನಾವು ಪರ ತಂತ್ರರಾಗಿ ಕರ್ಮವನ್ನು ಭೋಗಿಸುತ್ತೇವೆ, ಅವರು ಸ್ವತಂತ್ರರಾಗಿ ಕರ್ಮವನ್ನು ಭೋಗಿಸುತ್ತಾರೆ; ನಮ್ಮ ಕರ್ಮಾನುಭವವು ನಮ್ಮ , ಹಾಗು ಜಗತ್ತಿನ ಬಂಧ ನದ ಹೆಚ್ಚಳಕ್ಕೆ ಕಾರಣವಾಗುತ್ತದೆ, ಅವರ ಕರ್ಮಾನುಭವವು, ಸ್ವತಃ ಅವರು ಮುಕ್ತರಾದ್ದರಿಂದ ಜಗತ್ತಿನ ಉದ್ಧಾರಕ್ಕೆ, ಇಲ್ಲವೆ ಜಗತ್ತಿನ ಬಂಧನದ ಶೈಥಿಲ್ಯಕ್ಕೆ ಕಾರಣವಾಗುತ್ತದೆ! ಮೇಲೆ ವಿವೇಚಿಸಿದ ತತ್ವದಂತೆ ಪ್ರಕೃತದ ನಮ್ಮಂಥ ಪಾಪಿಗಳನ್ನು ಉದ್ಧರಿ ಸುವದಕ್ಕಾಗಿ ನಮ್ಮಲ್ಲಿ ಹುಟ್ಟಿ ಬಂದ ಶ್ರೀಶೇ ಪಾಚಲಸದ್ದು ರೂತ್ತಮನು ನಮ್ಮದುಷ್ಕರ್ಮ ರೂಪವಾದ ಪ್ರಾರಬ್ಧ ಭೋಗಕ್ಕೆ ಗುರಿಯಾಗಿ ಏಳು ತಿಂಗಳು ಬೇನೆ ಯನ್ನು ಅನುಭೋಗಿಸಬೇಕಾಯಿತು , ತನ್ನ ದೇಹವು ಸುಟ್ಟು ಹೋದರೂ ಚಿಂತೆ ಯಿಲ್ಲ, ಈ ಬೆಂಕಿ ಹತ್ತಿದ ಮನೆಯೊಳಗಿನ ಜನರನ್ನು ಹೊರಹೊರಡಿಸಿಯೇ ತೀರು ವೆನೆಂದು ಮೈ ಸುಟ್ಟುಕೊಳ್ಳುವ ಪರೋಪಕಾರಿಯಾದ ದಯಾಸರ ಲೌಕಿಕ ಪುರುಷನಂತೆ, ಜನರ ದುಷ್ಕರ್ಮದಯೋಗದಿಂದ ತನಗೆ ಪ್ರಾಪ್ತವಾಗಬಹುದಾದ