ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ನೋವು ೧೯೭

ಇಹ್ಹಿ ಇಹ್ಹಿ ಹ್ಹೀ..." ಅಳತೊಡಗಿದರು ಗೋವಿಂದನೆ ಅತ್ತೆ.

   " ಸುಮ್ನೆ ಯಾಕಳ್ತೀಯಾ ? ನನ್ನ ಮಾತಿಷ್ಟು ಕೇಳು." ಎಂದರು ವಿಷ್ಣುಮೂತಿ೯. 
   "ನಿಮ್ಮ ಮಾತಿಗೆ ಬೆಂಕಿ. ಕಳ್ಳರಿರೋ ಮನೇಲಿ ನನ್ನ ಮಗು ಹ್ಯಾಗೆ ಜೀವನ ಮಾಡು

ತ್ತೇ೦ದ್ರೇ..."

   ಅಲ್ಲಿಗೆ ಬಂದ ದೊಡ್ಡಮ್ಮ, ಪರಿಸ್ಥಿತಿ ಮತ್ತಷ್ಟು ಕೆಡುತ್ತಿದ್ದುದನ್ನು ಕಂಡು, "ನೀವು 

ಹಾಗೆಲ್ಲ ಅನಬಾರ್ದಮ್ಮಾ. ನಮ್ಮ ಯಜಮಾನರ ಕಾಲದಿಂದ ಈ ಮನೇಲಿ ಒಂದು ಸೊತ್ತೂ ಕಳವಾగిల్ల." ಎ೦ದರು.

    "ಈಗ ಆಗಿದೆಯಲ್ರೀ, ಒಬ್ಬೊಬ್ಬರನ್ನೂ ಕರೆಸಿ ಝಡ್ತಿ ಮಾಡೀಂತ ಹೇಳ್ತಿದೀನಿ." 

ಕಾಮಾಕ್ಷಿಯ ತಾಯಿ ಪಟ್ಟು ಹಿಡಿದರು.

   "ನೀವು ಬೇಜಾರು ಮಾಡ್ಕೋಬೇಡಿ, ದೊಡ್ಡಮ್ಮ. ಎಲ್ಲಾ ಸರ್ಹೋಗುತ್ತೆ," ಎ೦ದರು

ವಿಷುಮೂತಿ೯.

     "ಸರ ಹೋಗ್ಬಿಟ್ಟಿದೆ ಆಗ್ಲೇ. ಸರ್ಹೋಗುತ್ತೆ ಅಂತೆ! ಸರ್ಹೋಗೋದು, ಪಿಂಡ..." 
        -ಧ್ವನಿ ಏರಿಸಿದರು ಅವರ ಸಹಧರ್ಮಿಣಿ. 
     ಕೈಲಾಗದವನ ಸಿಟ್ಟಿನಿಂದ ವಿಷ್ಣುಮೂರ್ತಿಯವರ ಮುಖ ಅದುರಿತು. ಅವರು 

ಮೋಹನರಾಯರ ಬಳಿ ಸಾರಿ, "ಈಗೇನ್ರೀ ಮಾಡೋದು ?” ಎಂದು ಕೇಳಿದರು.

    ತಮ್ಮ ಪತ್ನಿಯೊಡನೆ ಮಾತನಾಡುತ್ತ, ಆರತಿಯ ಕೊಠಡಿಯಲ್ಲಿದ್ದ ಮೋಹನರಾಯರು, ಈಚೆ ಬಂದು, ಪಿಸುದನಿಯಲ್ಲಿ,"ಇಂಥಾದ್ದರಲ್ಲೆಲ್ಲ ಹೆಂಗಸರ ಬಾಯಿ ಮುಚ್ಚಿಸೋದಕ್ಕಾಗುತ್ಯೆ? ಸುಮ್ನಿದ್ಬಿಡಿ. ಸರಕ್ಕೆ ಸರ ಕೊಡ್ತೀವೀ೦ತ ಶ್ರಿನಿವಾಸಯ್ಯ ಹೇಳಿದಾರಲ್ಲ ?" ಎಂದು ನುಡಿದು, ಕೈಗಡಿಯಾರದತ್ತ ನೋಡಿ, " ಇನ್ನು ಹೊರಡ್ತೀವಿ.  ನೀವೂ ತಡ ಮಾಡ್ಬೇಡಿ. ಹನ್ನೆರಡು ಗಂಟೆಗೆಲ್ಲಾ ಎದ್ಬಿಡಿ. ಎಲ್ಲಿ ಗೋವಿಂದರಾವ್ ? ರಸ್ತೆ ತನಕ ಬರ್ತಾರೋ, ಅಥವಾ..." 

ಎಂದು ಅತ್ತಿತ್ತ ನೋಡಿದರು ಮೋಹನರಾಯರು.

       ತಂದೆಯೊಡನೆ ಗೋವಿoದ ಬಂದ. 
       ದೊಡ್ಡಮ್ಮನಿಗೆ ಹೇಳಿ ಬರಲೆಂದು ಮೋಹನರಾಯರು ಒಳಗೆ ಹೋದರು. 
       "ನೀವು ಹೊರಡೋ ಹೊತ್ತಿಗೆ ಸರಿಯಾಗಿ ಇದೊಂದಾಯ್ತು," ಎಂದರು ದೊಡ್ಡಮ್ಮ. 
       "ಸಣ್ಣ ವಿಷಯ. ಮದುವೆ ಮನೇಲಿ ಇಂಥಾದ್ದೆಲ್ಲ ಸವೇ೯ಸಾಮಾನ್ಯ. ನಾನು ಹೋಗ್ಬ ರ್ತೀನಿ," ಎಂದರು ಮೋಹನರಾಯರು.
     "ಆಗಲಪ್ಪ.” 
     ಹೊರಡುತ್ತಲಿದ್ದ ತಂದೆಯ ಬಳಿಗೆ ಆರತಿ ಬಂದಳು. 
     "ಅಮ್ಮನ ಜತೆ ನಾನೂ ಬಂದ್ಬಿಡ್ತೀನಿ, ಅಣ್ಣ..." 
     "ಏನವಸರ ? ನಾಳೆಯೋ ನಾಡಿದ್ದೋ ನಿನ್ನ ಗಂಡ ಹೊರಡ್ತಾರೆ..." 
     "ಆಗ ಇವರು ಬಿಡ್ತಾರೋ ಇಲ್ವೋ... ಸ್ವಲ್ಪ ಹೇಳ್ಬಿಟ್ಟು ಹೋಗಣ್ಣ." 
     ಮೋಹನರಾಯರು ನಕ್ಕು, ಮಗಳ ತಲೆಯನ್ನು ಒಂದು ಬೆರಳಿನಿಂದ ತಟ್ಟಿದರು. 
     "ಏನೆಂತೆ ? ಏನಂತೆ ?” ಎಂದರು ಶ್ರಿನಿವಾಸಯ್ಯ, ಅವರನ್ನು ಸಮಿಾಪಿಸಿ. 
     ಆರತಿ ನಾಚಿಕೊಂಡು ತನ್ನ ಕೊಠಡಿಗೆ ಓಡಿದಳು.