ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9C85 నేJణశివు ಆರತಿ ಮಾವನಿಗೆ ವಂದಿಸಿ ಬ೦ದಳು. ಅವರು ಹೊರಡುವುದು ನಿಶ್ಚಿತವಾದೊಡನೆಯೇ ತನ್ನ ಸಾಮಾನುಗಳನ್ನು ಆ ಎದುರು ಕೊಠಡಿಗೆ ಕಾಮಾಕ್ಷಿ ಸಾಗಿಸತೊಡಗಿದ್ದಳು. ಆರತಿ ಓರಗಿತ್ತಿಯರನ್ನು ಮಾತನಾಡಿಸುವ ಗೊಡವೆಗೆ ಹೋಗಲಿಲ್ಲ. ಬೀರ ಟ್ರಂಕ್ ಹೋಲಾಲ್ಗಳನ್ನು ಹೊತುಕೊಂಡ. ಕಾಮಾಕ್ಷಿ ಕಿಟಿಕಿಯ ಬಳಿ ನಿಂತು, ಹೋಗುತ್ತಲಿದ್ದ ಅವರನ್ನೇ ಸ್ವಲ್ಪ ಹೊತು ನೋಡುತ್ತ ಲಿದ್ದು, ಥರೂ ಎಂದು ಅಂಗಳಕುಗುಳಿ, ಮುಖ ತಿರುಗಿಸಿದಳು. ಭಾಗೀರಥಿ ಶ್ರೀಪಾದನನ್ನೆತ್ತಿಕೊಂಡು ಮತ್ತೆ ತನ್ನೆ 'ಮನೆ'ಗೆ ಕಾಲಿರಿಸಿ, ಬರಿದು ಗೋಡೆ ಗಳನ್ನು ನೋಡಿ, ತನ್ನೆಷ್ಟಕ್ಕೆ ನಕ್ಕಳು. $3°o - - ಹೊರಗಿನ ಆ ದೃಶ್ಯಗಳನ್ನು ದೊಡ್ಡಮ್ಮ ಕಾಣಲಿಲ್ಲ, ಆದರೆ ಕಾಮಾಕ್ಷಿ ಬಂದು ಎದುರಲ್ಲಿ ನಿಂತಾಗ, ಏನಾಗಿರಬಹುದು-ಎಂಬುದನ್ನು ಅವರು ಊಹಿಸಿಕೊಂಡರು. " ఆణ్ణి." " ಏನಮಾ?" " ಹೋಗೃರಿಡ್ತೀನೀಂತ ಒಂದು ಮಾತು ಕೂಡಾ ಹೇಳ್ವಿಲ್ವಲ್ಲ ಅವಳು ?" " ಪಾಪ, ಇನ್ನೂ ಎಳೇ ಹುಡುಗಿ." " ಓ ಹೋ ಹೋ ಗಂಡಂದಿರನ್ನ ಅರೆದು ಆಪೋಶನ ತಗೋಳೋಕೆ ಗೊತ್ತಿರುತ್ತೆ ಇಂಥ ಎಳೇ ಹುಡುಗೀರಿಗೆ ! ಗೊತಾ ?" " ಹೋಗಲಿ, ಬಿಡು. ಮನಸ್ಸಿಗೆ ಹಚೊಬೇಡ ." " ನಾನು ಹಚೊಳ್ಳೋದಿಲ್ಲ, ಅವಳು ಎಂಥವಳೂನ್ನೋದು ನಿಮಗೆ ತಿಳಿದಿದ್ದೀಂತ ಹೇಳ್ವೆ.” ದೊಡ್ಡಮ್ಮ ನೆಲ ನೋಡಿ ನೀಳವಾಗಿ ಉಸಿರು ಬಿಟ್ಟರು. 牡 ಅಂದಿನಿಂದ ನಿಟುಸಿರೊಂದೇ ಅವರ ಸಂಕಟಗಳ ಗಂಟನ್ನು ಸಡಿಲಿಸುವ ಸಾಧನವಾಯಿತು. .ದಾರಿಯುದ್ದಕ್ಕೂ ಗೋವಿಂದ ಹೆಂಡತಿಯೊಡನೆ ತಾನು ಆಡುವ ಮಾತುಗಳನ್ನು ಮತ್ತೆ ಮತ್ತೆ ರೂಪಿಸಿದ. ಜಲಜೆ–ಗಜಾನನರ ಎದುರಲ್ಲೇ ಕಾಮಾಕ್ಷಿಗೆ ಭೀಮಾರಿ ಹಾಕಬೇಕು. ತನ್ನ ಗಂಡಸುತನವನ್ನು ತೋರಿಸಿ ಕೊಡಬೇಕು. ಅವಳ ಜಡೆ ಹಿಡಿದು ಎಳೆಯುವುದಕ್ಕೂ ಹಿಂಜರಿಯಬಾರದು. ಆ ಯೋಚನೆಯ ಬಳಿಕ ತೋರಿತು ಅಲ್ಲಿ ಮಾತನ್ನೇ ಆಡದೆ ಹೊರಗೆ ಕರೆದುಕೊಂಡು ಬಂದು, ಎಲ್ಲಾದರೂ ನಿರ್ಜನ ಪ್ರದೇಶದಲ್ಲಿ ಮರದ ಕೆಳಗೆ ಚೆನಾಗಿ ಉಗುಳು ವುದಲ್ಲವೆ ಮೇಲು ?..ಅದೂ ಯಾಕೆ ? ಮನೆಗೇ ಕರೆದುಕೊಂಡು ಬಂದು ಎಲ್ಲರೆದುರಲ್ಲಿಅಥವಾ ಕೊಠಡಿಯ ಬಾಗಿಲು ಹಾಕಿ- ಮೈಕೈ ಮುದ್ದೆಯಾಗುವ ತನಕ ಒದೆದು, ಹೊಡೆದು. ಕುದಿಯುತ್ತ ಗೋವಿಂದ ವಿಫೆಕ್ಷ್ಮೀಶ್ವರ ಭವನದೊಳಕ್ಕೆ ಕಾಲಿರಿಸಿದ. ಅಲ್ಲಿ ಕುಳಿತಿದ್ದ, ಕೃಷ್ಟೇಗೌಡ,

  • ಬಾ, ಗೋವಿಂದಪ್ಪ," ಎಂದ ಆತ ಸಲಿಗೆಯಿಂದ.

ಏಕವಚನ ಗೋವಿಂದನೆನ್ನು ಕುಟುಕಿತು. ಆದರೂ ಅದನ್ನು ತೋರ್ಪಡಿಸದೆ, "ಹೆಪ್ಟೆ ! ణ్చు డేూక్నెల్లి, నివు- ఇల్లి-" ఎంది.