ಈ ಪುಟವನ್ನು ಪರಿಶೀಲಿಸಲಾಗಿಲ್ಲ.

.%y. ನೋವು ಗೋವಿಂದ ಬಾಯಿ ತೆರೆಯುವುದಕ್ಕೆ ಮುಂಚೆಯೇ ದೊಡ್ಡಮ್ಮ ಕೇಳಿದರು: "ನಿನ್ನೆ ಹೆಂಡತಿ ಎಲ್ಲಾ ಹೇಳಿದ್ದೇನೋ ?" । - " ಇಲ್ಲ, ದೊಡ್ಡಮ್ಮ." "ಭಾಗೀರಥಿಗೆ ತಿಂಗಳ ರಜಾ. ಒಂದಿಷ್ಟು ಕೆಲಸ ಮಾಡನೂಂತ ನಿನ್ನ ಹೆಂಡತೀನ ಕರೆದೆ. ಬಂದವಳು ಪಾತ್ರೆಗಳನ್ನು ಎತ್ತಿ ಎತ್ತಿ ಕುಕ್ಕೋಕೆ ಶುರು ಮಾಡಿದ್ದು, ಹಾಗಾಡ್ಯಾಶ್ವಮ್ಮ ಅಂದೆ. ಶ್ರೀಪಾದ ಹತ್ತಿರಕ್ಕೆ ಬಂದ ಅಂತ ಅವನಿಗೆರಡು ಗುದ್ದಿದ್ದಪಾ, ನಾನು ಎದ್ದು ಅವಳ ಜಡೆ ಹಿಡಿದು ಎಳೆದು ನಿಲ್ಲಿಸ್ಬೇಕಾಯು, ಹೋಗಿ ಬಿದೊಂಡಿದ್ದಾಳೆ." గేJ8చిందె నిట్చసిరేు బిట్చ. " ಅಣ್ಣಯ್ಯ ಮನೇಲಿದ್ರೆ ?" * " ಇದ್ದ. ನಿನ್ನೆ ಹೆಂಡತಿಗೆ ನಾವು ఎని ಹೇಳೋಕಾಗುತ್ತೇನಪ್ಪ ? ಅವನಾದರೂ ಎಷ್ಟೂಂತ ಸಹಿಸೋತಾನೆ? ಗಂಗಾಧರಶಾಸ್ತ್ರಿ ಮನೆಕಡೆ ಹೋದಾಂತ ಕಾಣುತ್ತೆ, ಬೇಜಾರು ಪಟ್ಟೊಂಡು.. ನೀನು ಸಾನ ಮಾಡು. ಹೇಗಾದರೂ ಈ ಅಡುಗೆ ಒಂದು ಮುಗಿಸಿಬಿಡಿ.ನಿ." " ಆಗಲಿ, ದೊಡ್ಡಮ್ಮ." ಗೋವಿಂದ ಕೊಠಡಿಗೆ ಮರಳಿ, ಕದ ಮುಚ್ಚಿ ಅಗಣಿ ಹಾಕಿ, ಕಾಮಾಕ್ಷಿಯ ಬಳಿಸಾರಿದ, ಮುಗುಳ್ನಗುತ್ತ, ಆಕೆಯ ಪಿಳಿಪಿಳಿ ಕಣ್ಣುಗಳು ಆತನನ್ನೇ ನೋಡಿದುವು. " ಇನ್ನಂದೆ ಹೀಗಾಡ್ಬೇಡ ಅಂತ ಆ ಅಜ್ಜಿಗೆ ಹೇಳಿದೀನಿ.." ಎಂದ, ಸರಕ್ಕನೆ ರಗ್ಗನ್ನೆಳೆದು. ಅವಳು ಉಟ್ಟಿದ್ದ ಸೀರೆ ಅಸ್ತವ್ಯಸ್ತವಾಗಿತು, ತಲೆಗೂದಲು ಕೆದರಿತು, ಎದೆ ಏರಿಳಿ ಯುತ್ತಿತು, ಗೋವಿಂದ ಬಾಗಿ, ಅವಳ ಬೆನ್ನಿನತ್ತ ತನ್ನ ಕೈಗಳನ್ನು ತುರುಕಿ ಬಾಯಿಗೆ ಬಲವಾಗಿ ಮುತ್ತಿಟ್ಟ, ಆಕೆ ಚಡಪಡಿಸಿದಳು. ಅವಳ ಉಗುರುಗಳು ಅವನ ಜುಬ್ಬವನ್ನು ಸೀಳಿ ಬೆನ್ನನ್ನು ಕೆರೆದುವು. ಆಕೆಯ ಗಂಡ ಬಿಟ್ಟುಕೊಡಲಿಲ್ಲ. .ಗೋವಿಂದ ಸಾನೆ ಮಾಡುತ್ತಿದ್ದಾಗ, ಹೊಲದಿಂದ ಗೋಪಾಲ ಬಂದ. ಇನ್ನು ಮೂರು ದಿನ ಅವನ ಶಯನ ಪಡಸಾಲೆಯಲ್ಲಿ, ಶ್ರೀಪಾದ ಬರಿಮೈಯಲ್ಲಿ ಓಡಾಡಬೇಕು. ಬೆಳಗ್ಗೆ ಏನಾಯಿತೆಂಯಿ ಗಂಡನಿಗೆ ತಿಳಿಸಬೇಕೆಂದು ಭಾಗೀರಥಿ ಆತನಿಗೆ ಕೈಸನ್ನೆ ಮಾಡಿ ಕರೆದಳು, ಕೊಠಡಿಯ ಬಾಗಿಲ ಬಳಿಗೆ ಬರಲು.. ಅದು ಕಂಡಾ ಕಾಣಿಸದವನಂತೆ ಗೋಪಾಲ ಜಗಲಿಗೆ ಹೋಗಿ, ಮೆಟ್ಟಲ ಮೇಲೆ ಕುಳಿತ. .. ಶ್ರೀನಿವಾಸಯ್ಯ ಗಂಗಾಧರಶಾಸ್ತ್ರಿಗಳ ಮನೆಗೆ ಹೋದವರು ಅಲ್ಲಿ ತಮ್ಮ ಅಳಲನ್ನು ತೋಡಿಕೊಂಡರು. " కింగిగాయిప్పల్లి, లెనిస్ట్రిగణి. " ಜಾತಕಗಳ ಮಾತನಾಡಿ ಶ್ರೀನಿವಾಸಯ್ಯನವರ ಮನಸ್ಸನ್ನು ನೋಯಿಸಲು ಗಂಗಾಧರ తాస్మిగళు ఇచ్చెబెడాలిల్ల. " ದೊಡ್ಡ ಸಂಸಾರ ಅಂದ್ರೋಲೆ ಇಂಥದೆಲ್ಲ ಇದ್ದೇ ಇರುತ್ತಲ್ಲ, ಶ್ರೀನಿವಾಸಯ್ಯ, ಅದಕ್ಕೇ ನಾನು ಹೇಳೋದು ವಯಸ್ಸಾದ ಹಾಗೆ ಈ ಐಹಿಕ ಯೋಚನೆಗಳನ್ನ ಕಡಮೆ ಮಾಡ್ಬೇಕೂಂತ." " ಅಂದರ, ಕಾಡಿಗೆ ಹೋಗ್ಲೆ ಶಾಸ್ತ್ರಿಗಳೇ ?" " ಮನುಷ್ಯ ಹೋಗೊಲ್ಲ, ಮನಸ್ಸು ಹೋಗುತ್ತೆ."