ಪಂಚತಂತ್ರ್ಯೋತ್ಸವ ಧನಧಾನ್ಯಸಮೇತ ನನ್ನ ಮನೆಯನ್ನು ಬಿಟ್ಟು ಬಿಟ್ಟು ನಿಮ್ಮ ರಾಜ್ಯಕ್ಕೆ ದೂರವಾಗಿ ಹೋಗಲುಳ್ಳವನು-ಎಂದು ಪ್ರತಿಜ್ಞೆ ಮಾಡಿದನು. ಅದಕ್ಕೆ ಅರಸನು ಬಹಳ ಸಂತೋಷಿಸಿ ವಿಷ್ಣು ಶರ್ಮನಿಗೆ ಆನೆ ಕುದುರೆ ಗಾಡಿ ಪಲ್ಲಕ್ಕಿ ಬಹಳ ಬೆಲೆಯುಳ್ಳ ವಸ್ತ್ರ ಗಳು ಒಡವೆಗಳು ಮುಂತಾದ ವಸ್ತು ಗಳನ್ನು ಪ್ರೀತಿಯಿಂದ ಬಹುಮಾನಮಾಡಿ ತನ್ನ ಕುಮಾರರನ್ನು ಕರೆ ಯಿಸಿ,-ಅಯ್ಯಾ, ಇವರನ್ನು ನಿಮ್ಮ ಕುಮಾರರಂತೆ ನೋಡಿಕೊಂಡು ಇವರಿಗೆ ವಿದ್ಯೆ ಕಲಿಸಿ ಇವರನ್ನು ಬುದ್ಧಿವಂತರಾಗಿ ಮಾಡುವಭಾರ ನಿಮ್ಮ ದು-ಎಂದು ಅವರನ್ನು ವಿಜ್ಞಾನ ವಶಕ್ಕೆ ಕೊಟ್ಟನು.
His Scheme of Education.
ಬಳಿಕ ವಿಷ್ಣು ಶರನು ಆ ರಾಜಪುತ್ರರನ್ನು ಕರೆದುಕೊಂಡು ಹೋಗಿ ತನ್ನ ಮನಸ್ಸಿನಲ್ಲಿ ಆಲೋಚಿಸಿ ಮಿತ್ರಭೇದ, ಸುಹೃಲ್ಲಾಭ, ಸಂಧಿವಿಗ್ರಹ, ಲಬ್ಬನಾಶ, ಅಸಂಪ್ರೇಕ್ಷಕಾರಿತ್ರ್ಯ, ಎಂಬ ಐದು ತಂತ್ರಗಳುಳ್ಳ ಪಂಚ ತಂತ್ರವೆಂಬ ಗ್ರಂಥವನ್ನು ರಚಿಸಿ ಅವರ ಸಂಗಡ ಇಂತೆಂದನು:-ಮಿತ್ರ ಭೇಧ ಎಂದರೆ ಸ್ನೇಹಿತರಿಗೆ ವಿರೋಧವನ್ನು ಹುಟ್ಟಿಸೋಣ ; ಸುಹೃಲ್ಲಾಭ ಎಂದರೆ ಸ್ನೇಹಿತರನ್ನು ಸಂಪಾದಿಸೋಣ ; ಸಂಧಿವಿಗ್ರಹ ಎಂದರೆಮೊದಲಲ್ಲಿ ಸ್ನೇಹಮಾಡಿ ತರುವಾಯ ವಿರೋಧಿಸೋಣ ; ಲಬ್ದನಾಶ ಎಂದರೆ ಸಿಕ್ಕಿದ ಧನವನ್ನು ಹೋಗಲಾಡಿಸಿಕೊಳ್ಳೋಣ ; ಅಸಂಹಕಾರಿತ್ರ ಎಂದರೆ ಯಾವ ಕಾರೈವನ್ನಾದರೂ ಚೆನ್ನಾಗಿ ವಿಚಾರಿಸದೆ ಮಾಡೋಣ. ಪಂಚ ತಂತ್ರವೆಂದರೆ ಈ ಐದು ತಂತ್ರಗಳನ್ನು ಗ್ರಂಥವು.