ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೨೮

ಈ ಪುಟವನ್ನು ಪರಿಶೀಲಿಸಲಾಗಿದೆ

ಗುಡುಗಿಗೆ ಸಮಾನವಾದ ಸಂಜೀವಕನ ಗುಟರೆಯನ್ನು ಕೇಳಿ ದಿಗಿಲು ಪಟ್ಟು-ಇದು ಏನು? ಇಲ್ಲಿ ಯಾರಿದ್ದಾರೆ?-ಎಂದು ತನ್ನಲ್ಲಿ ತಾನು ಆಲೋಚಿಸುತ್ತಾ ಮುಂದಕ್ಕೆ ಹೋಗದೆ ನಿಂತಿತು.

The first Council of Jackals Karataka and Dinanaka.

ಆಗ ವಿಂಗಳಕನ ಮಂತ್ರಿ ಕುಮಾರರಾದ ಕರಟಕ ದಮನಕರೆಂಬ ಹೆಸರುಳ್ಳ ನರಿಗಳಲ್ಲಿ ದಮನಕನು ತಮ್ಮ ಪ್ರಭುವಾದ ಪಿಂಗಳಕನೆಂಬ ನಿಂಹರಾಜನು ಗೂಳಿಯ ಗುಟರೆಯನ್ನು ಕೇಳಿ ಬೆದರಿದುದನರಿತು, ಕರಟಕ ನನ್ನು ನೋಡಿ-ಎಲೈ ಕರಟಕನೇ, ಇಷ್ಟು ದೊಡ್ಡವನಾದ ನಮ್ಮ ಅರಸನು ಅಪೂರ್ವವಾದ ಶಬ್ದವೆ ಕೇಳಿ ಹೊಳಗೆ ನೀರು ಕುಡಿಯಹೋಗಲಿಕ್ಕೆ ಹೆದರಿ ದಳು. ನಾವು ಆತನ ಮಂತ್ರಿ ಕುಮಾರರಾಗಿದ್ದು ಉಪೇಕ್ಷಿಸುವುದು ಯುಕ್ತ ವಲ್ಲ. ಆತನ ಅಂಜಿಕೆಯ ತೀರಿಸೋಣವೇ...ಎನಲು, ಕರಟಕ ನಿಂತೆಂದನು. ಎಲೈ ಹುಚ್ಚನೇ, ದಾರಿಯಲ್ಲಿ ಹೋಗುವ ವ್ಯಜ್ಞವ ಕೊಂಡುಕೊಂಡ ಹಾಗೆ ನಮಗೆ ಇಂಥ ಕೆಲಸವೇಕೆ? ದೇವರು ಕೊಟ್ಟನ್ನು ಊಟ ಮಾಡಿ ಸುಖವಾಗಿರೋಣ, ಇಂಥ ಕೆಲಸಗಳಿಗೆ ಹೋದರೆ ನಮಗೇನು ಮೋಸ ಬಂದೀತೋ ತಿಳಿಯದು,

ಅವ್ಯಾಪಾರೇಷು ವ್ಯಾಪಾರಂ ಯೋ ನರಃ ಕರ್ತುವಿಚ್ಛತಿ | -

ಸ ಭೂಮಿ ನಿಹತ್ತೇ ಕೀಲೋತ್ಪಾಟವ ವಾನರಃ |

ಎಂಬಂತೆ ಅಧಿಕ ಪ್ರಸಂಗಗಳಿಗೆ ಹೋಗುವವನಿಗೆ ಕೀಲನ್ನು ಕಿತ್ತ ಕೋ ತಿಯ ಹಾಗೆ ನಿಜವಾಗಿ ಹಾನಿ ಬಂದೀತು. ಅದು ಹೇಗೆಂದರೆ :-

ಒಂದು ಪಟ್ಟಣದ ಹತ್ತಿರ ಒಂದು ದೊಡ್ಡಗುಡಿ ಜೀರ್ಣವಾಗಿ ಅರ್ಧ ನೆಲಕ್ಕೆ ಕುಸಿದಿರಲಾಗಿ, ದೇವಭಕ್ತಿಯುಳ್ಳ ಒಬ್ಬ ವೈಶ್ಯನು ಅದನ್ನು ಮುಂಚಿನಹಾಗೆ ನೆಟ್ಟಗೆ ಮಾಡಹೇಳ ಶಿಲ್ಪಗಾರರಿಗೆ ಸಲ್ಪ ಧನವನ್ನು ಕೊಟ್ಟನು. ಅವರು ಆ ಧನವನ್ನು ತೆಗೆದುಕೊಂಡು ಗುಡಿಯನ್ನು ಕಟ್ಟುತ್ತಾ ಇರುವ ಸಮಯದಲ್ಲಿ, ಒಂದು ತೇಗಿನ ತೊಲೆಯನ್ನು ಹಲಗೆಗ ೪ಾಗಿ ಕೊಯ್ಯುತ್ತಾ ಅದನ್ನು ಸೀಳುವುದಕ್ಕಾಗಿ ಅಲ್ಲಲ್ಲಿ ಬೆಣೆಗಳನ್ನ ಇಳಿಯ