ಈ ಪುಟವನ್ನು ಪರಿಶೀಲಿಸಲಾಗಿಲ್ಲ.

14 ಪಂಚತಂತ್ರ ಕಥೆಗಳು , ತಮಗೆ ನನ್ನಿಂದ ಪ್ರಯೋಜನವೇನು ? ಅದರೂ ಸಮಯಬಂ ದಾಗ ಚೆನ್ನಾಗಿ ಆಲೋಚನೆ ಹೇಳಬೇಕೆಂದು ಬಂದೆನು. ಆಪದ್ಯುನ್ಮಾರ್ಗಗಮನೇ ಕಾಠ್ಯಕಾಲಾತ್ಯದೇವ ಚ | ಅಪ್ಪನಾಪಿ ವಕ್ತವ್ಯಂ ವೃಕ್ಕೇನೆ ಹಿತಮಿಚ್ಛತಾ|| ಮಂತ್ರಿಯಾದವನು ತನ್ನ ಅರಸನಿಗೆ ಸಮಯಬಂದಾಗ ಕಾರಾಕಾ ರೈಗಳನ್ನು ತಿಳಿಸುವುದಕ್ಕಾಗಿ ತನ್ನ ಕರೆಯದೆ ಇದ್ದರೂ ಅರಸನ ಬಳಿಗೆ ಬರಬೇಕು. ನಾನೇ ಅಲ್ಲ, ಎಂಥ ಮನುಷ್ಯನಾದರೂ ಅರಸುಗಳಿಗೆ ಬಂದಾ ನೊಂದುವೇಳೆ ಕೆಲಸಕ್ಕೆ ಬರುವನು. ದಂತ ನಿರ್ಘಪ್ರಣಕ್‌ನ ರಾರ್ಜ ಕಣಸ್ಯ ಕಂಡೊಯನಕೇನ ವಾಪಿ | ತೃಣೇನ ಕಾಡ್ಯಂ ಭವತೀಶ್ವರಾಣಾಂ ಕಿಮಂಗ ವಾಗ್ದಾಣಿಮತಾ ನರೇಣ || ಅಚೇತನವಾದ ಕಡ್ಡಿಗಳು ಸಹ ಕಿವಿಯ ನವೆಯನ್ನು ಹೋಗಲಾ ಡಿಸಿಕೊಳ್ಳೋಣ ಹಲ್ಲುಚುಚ್ಚಿಕೊಳ್ಳೋಣ ಮುಂತಾದ ಕೆಲಸಕ್ಕೆ ಬರು ತಿರಲಾಗಿ, ಬಾಯಿ ಕೈಗಳು ಮೊದಲಾದ ಅವಯವಗಳುಳ್ಳ ಮನುಷ್ಕನು ಕೆಲಸಕ್ಕೆ ಬಾರದೆ ಹೋದನೇ ? ಧೈರ್ಯವಂತನಿಗೆ ಒಂದುವೇಳೆ ಆಪತ್ತು ಬಂದರೂ ಅವನು ಮುಂಚಿನ ಧೈರ್ಯವನ್ನು ಬಿಡನು. ದೀವಟಿಗೆ ಯನ್ನು ತಲೆಕೆಳಗಾಗಿ ಹಿಡಿದರೂ ಅದರ ಜ್ವಾಲೆಯು ಊರ್ಧ್ವಮುಖ ವಾದೀತೇ ಹೊರತು ಎಂದಿಗೂ ಅಧೋಮುಖವಾಗಲಾರದು. ಮತ್ತು ವಿಶೇಷಜ್ಞನಾದ ಅರಸನಿಗೆ ಸಮಸ್ತವೂ ತಿಳಿವುದು. ಪೈರಿಡುವವನು ಸಮಸ್ತವಾದ ಬೀಜಗಳನ್ನು ಯುಕ್ತವಾದ ಸಮಯದಲ್ಲಿ ಬಿತ್ತಿ ಮೇಳ ಬಿಟ್ಟಕೂಡಲೇ ನೋಡಿ ಈ ಪೈರಿಂದ ಇಷ್ಟು ಮಾತ್ರ ಹುಟ್ಟುವಳಿಯಾದೀ ತೆಂದು ತಿಳಿದುಕೊಳ್ಳುವಹಾಗೆ, ಬುದ್ಧಿವಂತನಾದವನು ಮನುಷ್ಯರ ಆಕಾ ರವನ್ನು ನೋಡಿ ಅವರ ಮನೋವೃತ್ತಿಯನ್ನು ನಿಶ್ಚಯಿಸುವನು. ಅರ ಸನಾದವನು ತನ್ನ ಕೃತ್ಯರ ಯೋಗ್ಯತಾಯೋಗ್ಯತೆಗಳನ್ನು ಅರಿಯದೆ ಅವರಿಗೆ ಉದ್ಯೋಗಗಳ ಕೊಟ್ಟರೆ, ತಲೆಯಲ್ಲಿ ಧರಿಸುವ ಮಾಣಿಕ್ಯವನ್ನು ಕಾಲಿನಲ್ಲಿ ಕಾಲಿನಲ್ಲಿ ಧರಿಸತಕ್ಕೆ ಅಂದುಗೆಯನ್ನು ತಲೆಯಲ್ಲಿ ಧರಿಸಿದ ಹಾಗೆ ಅಪಹಾಸ್ಯಕ್ಕೆ ಆಸ್ಪದವಾಗುವನು. ಕುಂದಣದಲ್ಲಿ ಕೆತಕ್ಕೆ ಶ್ರೇಷ್ಠ