ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೩೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

16 ಪಂಚತಂತ್ರ ಕಥೆಗಳು, ಏತರಿಂದೆಂದರೆ, ಪ್ರಳಯಕಾಲದಲ್ಲಿಯ ಸಿಡಿಲಿನಹಾಗೆ ಒಂದು ಶಬ್ದವು ನನ್ನ ಕಿವಿಗಳಿಗೆ ಕೇಳಿಸಿತು. ಅದಕ್ಕೆ ನಾನು ಹೆದರಿ ಶಬ್ದ ಕೇಳಿಸಿದ ಸ್ಥಲದಲ್ಲೇ ನಿಂತೆನು. ನಾನು ಏನು ಹೇಳುವೆನು ! ನನಗೆ ನೋಡಿದರೆ ಅದು ದೊಡ್ಡ ಜಂತುವಿನ ಶಬ್ದ ವಾಗಿ ತೋರುತ್ತದೆ; ಚಿಕ್ಕ ಜಂತುವಿಗೆ ಅಂಥಾ ಶಬ್ದ ವುಂಟೇ? ಇನ್ನು ನಾನೇನುಮಾಡಲಿ-ಎನಲು; ವಿಂಗಳಕನಿಗೆ ದಮ ನಕನು ಅಡ್ಡ ಬಿದ್ದು, ಗ್ರಾಮಾ, ಶಬ್ದ ಮಾತ್ರಕ್ಕೆ ಅಂಜಬಾರದು. ಅಂಭಾ ಭಿದ್ಯತೇ ಸೇತುಸ್ತಥಾ ಮಂತೋಷ್ಯರಕ್ಷಿತಃ || ಪೈಶುನ್ಯಾದ್ಯತೇ ಸ್ನೇಹೋ ವಾಗ್ಧರ್ಭಿದ್ರೋಹಿ ಕಾತರಃ | ಬಹಳ ನೀರಿನಿಂದ ಕಟ್ಟೆ ಒಡೆದು ಹೋಗುವುದು; ಗುಟ್ಟುಪಡಿಸದೆ ಇದ್ದರೆ ಆಲೋಚನೆ ಹೊರಗೆ ಬೀಳುವುದು ; ಚಾಡಿಯಿಂದ ಸ್ನೇಹವು ನಶಿಸುವುದು; ಮಾತುಗಳಿಗೆ ಹೆದರಿದವನು ಕೆಟ್ಟು ಹೋಗುವನು. ಆದಕಾರಣ ಅಧ್ಯೆ ದಿಂದ ರೆಪಟ್ಟರೆ ಕೆಲಸ ಕೆಟ್ಟುಹೋದೀತು. ಧೈರವನ್ನವಲಂಬಿಸಿ ನಿಧಾನವಾಗಿ ವಿಚಾರಿಸಬೇಕು. ಇದಕ್ಕೆ ಒಂದು ಪೂರ್ವಕಥೆ ಹೇಳುತ್ತೇನೆ ಕೇಳ್ರಿ ಎಂದು ಮರಳಿ ಇಂತೆಂದನು. Judge patiently. The Fox and the field of battle. ಪೂರ್ವ ಕಾಲದಲ್ಲಿ ಒಂದು ನರಿ ಒಂದು ವನದಲ್ಲಿ ಸಂಚರಿಸುತ್ತಾ ಎಲ್ಲ ಆಹಾರ ಸಿಕ್ಕದೆ ಬಹಳ ಹಸಿವಿನಿಂದ ಕಂಗೆಟ್ಟಿದ್ದಿತು. ಹೀಗಿರಲು ಅದರ ಅದೃಷ್ಮದಿಂದ ಒಂದು ದಿಕ್ಕಿನಲ್ಲಿ ಕುಪ್ಪೆಗಳಾಗಿ ಬಿದ್ದಿದ್ದ ತೇರುಗ ಇನ್ನೂ ಸುಂಡಲುಗಳು ಕೊಂಬುಗಳು ತೊಡೆಗಳು ತಲೆಗಳು ಕಡಿದುಬಿ ದ್ವಿದ್ದ ಆನೆಗಳನ್ನೂ, ಕುತ್ತಿಗೆಗಳು ಕಾಲುಗಳು ಪಕ್ಕಗಳು ತುಂಡಾಗಿ ಬಿದ್ದಿದ್ದ ಕುದುರೆಗಳನ್ನೂ, ಮೂಗುಗಳು ಕೆನ್ನೆಗಳು ಬೆಟ್ಟುಗಳು ಕೈಕಾ ಲುಗಳು ಮುಖಗಳು ತುಂಡಿಸಿ ನೆಲದಮೇಲೆ ಬಿದ್ದಿದ್ದ ಕಾಲಾಳುಗಳನ್ನೂ ಉಳ್ಳ ಭಯಂಕರವಾದ ಒಂದು ಯುದ್ಧ ಭೂಮಿ ಅದಕ್ಕೆ ಕಾಣಿಸಿತು. ಆಸ್ಥಳವು ನಿರ್ಜನ ಪ್ರದೇಶವಾಗಿದ್ದುದರಿಂದ ಆನರಿ ಅಲ್ಲಿಗೆ ಪ್ರವೇಶಿಸಿ ಬಳಿಕ ಒಂದು ಧ್ವನಿಯನ್ನು ಕೇಳಿ ಎದೆಗುಂಡಿಗೆ ಅದುರಿ ಬಹಳ ಭಯದಿಂದ ಅಕ್ಕಿ ತ್ರ ಕದಲಲಾರದೆ ಕಣ್ಣುಗಳ ಮುಚ್ಚಿಕೊಂಡು ಮೂರ್ಛಹೋಗಿ ಸ್ವಲ್ಪ -