ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೪೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

21 ಸಿ.ಎಪ್ರಭೇದತಂತ್ರ ವಿಟ್ಟು ಹೊಲಿದ ಬೊಂತೆಯನ್ನು ಅವನು ಅಪಹರಿಸಿಕೊಂಡು ಹೋದ ನೆಂದು ತಿಳಿದು, ಈ ನರಿ ಮೆಪ್ರಯುದ್ಧದಲ್ಲಿ ಹಾನಿಯಾದಹಾಗೆ ಆಪಾ ಢಭೂತಿಯಿಂದ ನಾನು ಮೋಸಹೋದೆನು-ಎಂದು ಬಹಳ ಚಿಂತಾ ಕ್ರಾಂತನಾಗಿ ಪ೪ಾಪಿಸುತ್ತಾ ಹೋದನು. ಎಂದು ನುಡಿಯಲಾಗಿ, ಕರಟಕನು ದಮನಕನನ್ನು ನೋಡಿನೀನಿನ್ನು ಮಾಡನೆನಸಿದ ಕಾರಣವೇನು ಎಂದು ಕೇಳಲು, ದಮನಕ ನಿಂತೆಂದನು:- ಕೆಟ್ಟುಹೋದ ಕೆಲಸವನ್ನು ನೆಟ್ಟಗೆ ಮಾಡುವು ದಕ್ಕೂ ಇನ್ನು ಮೇಲಾಗತಕ್ಕ ಪ್ರಯೋಜನವನ್ನು ಸಂಗ್ರಹಿಸುವುದಕ್ಕೂ ಅನರ್ಥಗಳನ್ನು ಹೋಗಲಾಡಿಸುವುದಕ್ಕೂ ತಕ್ಕ ಆಲೋಚನೆಯೇ ನುಂಟೋ ಅದೇ ಶ್ರೇಪ್ಪ ವಾದ ಆಲೋಚನೆ. ಆದುದರಿಂದ ನಾವು ಚೆನ್ನಾಗಿ ಆಲೋಚಿಸಿ ಸಂಜೀವಕ ಪಿಂಗಳಕರಿಗೆ ಭೇದ ಹುಟ್ಟಿಸುವು ವಕ್ಕೆ ಉಪಾಯವನ್ನು ಹುಡುಕದೆ ಸುಮ್ಮನೆ ಇದ್ದಲ್ಲಿ ನಾವು ಏಂಗಳಕನ ಹತ್ತಿರಕ್ಕೆ ಸೇರಿಲೇ ಕೂಡದು ಎಂದನು. ಕರಟಕನು-ಇದು ಹೇಗೆ ಸಾಧ್ಯವಾದೀತು-ಎನಲು, ದಮನಕನು ನುಡಿಯುತ್ತಾನೆ :- ಉಪಾಯೇನ ಹಿ ಯಚ್ಛಕ್ಯಂ ನ ತಚ್ಛಕ್ಯಂ ಪರಾಕ್ರಮೈಃ | ಕಾಕೀ ಕನಕಸೂತ್ರೇಣಿ ಕೃಷ್ಣಸರ್ಪವಘಾತಯತಿ || ಉಪಾಯದಿಂದ ಯಾವುವನ್ನು ಸಾಧಿಸಶಕ್ಯವೋ ಅದನ್ನು ಪರಾ ಕ್ರಮದಿಂದ ಸಾಧಿಸಲಿಕ್ಕೆ ಶಕ್ತವಾಗದು. ಅರಸನ ಚಿನ್ನದ ಹಾರವನ್ನು ಎತ್ತಿಕೊಂಡು ಕಾಗೆ ಉಪಾಯದಿಂದ ತನಗೆ ಶತ್ರುವಾದ ಸರ್ಪವನ್ನು ಜಯಿಸಿತು ; ಉಪಾಯದಿಂದ ಸಾಧ್ಯವಾಗದ ಕೆಲಸವ್ರಂಟೇ ? ಎನು, ಕರಟಕನು-ಆ ಕಥೆಯ ಕೇಳಬೇಕು, ಹೇಳ-ಎನಲು ದಮನಕನು ಹೇಳಲಾರಂಭಿಸಿದನು. ಒಂದು ಆಲದ ಮರದ ಕೊಂಬೆಯಮೇಲೆ ಬಂದು ಕಾಗೆ ಗೂಡು ಕಟ್ಟಿಕೊಂಡು ತನ್ನ ಹೆಂಡತಿಯೊಂದಿಗೆ ಒಕ್ಕಲಿದ್ದಿತು. ಆ ಮರದ ಪೊಟ್ಟರೆಯಲ್ಲಿ ಒಂದು ಕೃಷ್ಣಸರ್ಪವಿದ್ದು ಆ ಕಾಗೆ ಯಿಟ್ಟ ಮೊಟ್ಟೆಗಳ ನ್ನೆಲ್ಲಾ ಆಗಾಗ್ಗೆ ತಿನ್ನುತ್ತಿದ್ದಿತು. ಅದಕ್ಕೆ ಆ ಕಾಗೆ ಬಹಳ ವ್ಯಸನ ಛ ಗೆ ೧ | ದಿ