27 ಮಿತ್ರಭೇದತಂತ್ರ, ಆಮೇಲೆ ಒಂದುದಿನ ಇಂದುಮೊಲದ ಸರದಿ ಬಂದಿತು' ಎಂದು ಮೃಗ ಗಳು ಹೇಳಿದುವು. ಆ ಮಾತನ್ನು ಕೇಳುತ್ತಲೇ ಮೊಲವು ಬೆದರಿಬಿದ್ದು ಮೂರ್ಛಹೋಗಿ, ಸ್ವಲ್ಪಹೊತ್ತಿಗೆ ಮೂರ್ಛತಿಳಿದೆದ್ದು,ಧೈರವನ್ನು ತಾಳಿ ಕೊಂಡು ತನ್ನ ಮನಸ್ಸಿನಲ್ಲಿ ಹೀಗೆಂದು ವಿತರ್ಕಿಸಿತು:-ಮಹಾಬಲವುಳ್ಳ ಈ ಸಿಂಹವನ್ನು ನನ್ನ ಬುದ್ಧಿ ಚಾತುರದಿಂದ ಕೊಲ್ಲುವೆನು. ಬುದ್ದಿಗೆ ಅಶಕ್ಯವಾದ ಕೆಲಸವು ಭೂಮಿಯಲ್ಲಿಲ್ಲ. ಆದುದರಿಂದ ನಾನು ಯಾವ ಕಾರದಿಂದಲಾದರೂ ಜಯವನ್ನು ಹೊಂದುವನು-ಎಂದು ಆಲೋಚಿಸಿ ಪಯಣಹೊರಟು ಮೆಲ್ಲಮೆಲ್ಲಗೆ ನಿಂಹದ ಬಳಿಗೆ ಹೋಯಿತು. ಅಮ್ಮರಲ್ಲಿ ನಿಂಹವು ಹಸಿವುಗೊಂಡು ಕೋಪದಿಂದ ಬೆಂಕಿಯಹಾಗೆ ಉರಿದುಬೀ ೪ುತ್ತಾ ತುಟಿಗಳನ್ನು ಕಚ್ಚಿಕೊಂಡು ( ಈ ವನದಲ್ಲಿ ಮೃಗಗಳು ಪ್ರತಿದಿ ನವೂ ನನಗೆ ಕಳುಹಿಸುವ ಮೃಗವನ್ನು ಇಂದು ನನಗೆ ಕಳುಹಿಸದೆ ಇರು ವುದಕ್ಕೆ ಕಾರಣವೇನು? ನಾನೀಗ ಹೋಗಿ ಮೃಗಗಳನ್ನೆಲ್ಲಾ ಒಟ್ಟಿಗೆ ಹಿಡಿದು ಕೊಂದು ತಿನ್ನುವೆನು, ಹೀಗೆ ಮಾಡದಿದ್ದರೆ ಅವುಗಳ ಹತ್ತು ಅಡಗದು' ಎಂದು ಗುಹೆಯಿಂದ ಹೊರಗೆ ಹೊರಟಿತು, ಆಗ ಧೈರಾ ಲಿಯಾದ ಮೊಲವು ಬಹಳ ಅಂಜಿದಂತೆ ಗಡಗಡನೆ ನಡುಗುತ್ತಾ ನಿಂಹದ ಹತ್ತಿರಕ್ಕೆ ಬಂದಿತು. ಅದನ್ನು ನೋಡಿ ಸಿಂಹವು-ಎಲಾ ದುರಾತ್ಮನೇ, ನನಗೆ ವೇಳತಪ್ಪಿದ ಆಹಾರ ಹಿತವಲ್ಲವೆಂದು ನಿನಗೆ ತಿಳಿಯದೇ ? ಇಷ್ಟು ಹೊತ್ತು ಏತಕ್ಕೆ ಮಾಡಿದೆ ? ಕಾಡಿನಲ್ಲಿರುವ ಜಂತುಸಮೂಹಕ್ಕೆ ಏನಾ ದರೂ ವಿಪರೀತಬುದ್ದಿ ಹುಟ್ಟಿತೋ ?-ಎಂದು ಕೊಪವಾಗಿ ಮಾತನಾ ಡಲಾಗಿ; ಸಿಂಹಕ್ಕೆ ಮೊಲವು ಸಾಷ್ಟಾಂಗ ಪ್ರಣಾಮಮಾಡಿ ಇಂತೆಂದಿತು : * ಎಲೈ ಮೃಗರಾಜನೇ, ನನ್ನ ಅರಿಕೆಯನ್ನು ಚಿತ್ರಸು. ಇಂದು ನನ್ನಿಂದ ತಪ್ಪೇನೂ ಇಲ್ಲ. ಸೂರೋದಯಕಾಲದಲ್ಲಿ ನಾನೆದ್ದು ತಮ್ಮ ಹತ್ತಿರಕ್ಕೆ ಬರುತ್ತಿರುವಾಗ ದಾರಿಯಲ್ಲಿ ಒಂದು ಸಿಂಹವು ಅಡ್ಡಗಟ್ಟಿತು, “ ನನ್ನ ಏಕೆ ತಡೆಯುತ್ತೀಯೆ? ನನಗೆ ಪ್ರಭುವಾದ ಸಿಂಹರಾಜನ ಬಳಿಗೆ ನಾನು ಹೋಗಬೇಕು, ಬಿಡು' ಎನಲು, ಆ ಸಿಂಹಕ್ಕೆ ಬಹು ಕೋಪಬಂದು, ಅದು-ಈ ವನದಲ್ಲಿರುವ ಜಂತುಸಮೂಹಕ್ಕೆಲ್ಲಾ ಪ್ರಭು
ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೪೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.