ಮಿತ್ರಭೇದತಂತ್ರ: 29 ವನ್ನು ನೀವು ತಾಳಿಕೊಳ್ಳಬೇಕು. ಪದವಿಯುಳ್ಳ ಮಂತ್ರಿ ಅರಸನ ಬಳಿ ಯಲ್ಲಿ ಏನು ಹೇಳಿದರೂ ಸಾಗುತ್ತದೆ ; ಪದವಿಯಿಲ್ಲದವನು ಹತ್ತು ವಿರ ಹೇಳಿದರೂ ಅರಸನಿಗೂ ಸರಿಬೀಳುವುದಿಲ್ಲ ಪ್ರಜೆಗಳಿಗೂ ಸರಿಬೀ ಳುವುದಿಲ್ಲ ಎಂದು ನುಡಿದನು. ಪಿಂಗಳಕನು ಆ ಮಾತನ್ನು ಕೇಳಿ, ಎಲೆ ದಮನಕಾ, ನೀನೇನು ಹೇಳಬೇಕೋ ಅದನ್ನು ಹೆದರದೆ ಹೇಳು, ನಿನಗಿಂತ ನನಗೆ ಹಿತನುಂಟೇ ?-ಎಂದು ಬಹುಪ್ರೀತಿಯಾಗಿ ಮಾತನಾ ಡಿದನು. ಆಗ ದಮನಕನು ಕೈಗಳನ್ನು ಮುಗಿದುಕೊಂಡು ವಿನಯಭ ಕಿಗಳಿಂದ ನಿಂತು ನಿಂಹವನ್ನು ನೋಡಿ-ಈ ಸಂಜೀವಕನು ನನ್ನ ಬಳಿಯಲ್ಲಿ ನಿಮ್ಮ ಮೇಲೆ ತಪ್ಪುಗಳನ್ನೆಣಿಸುತ್ತಾ ಯಾವಾಗಲೂ ನಿಮ್ಮ ನ್ನು ಹಾಸ್ಯವಾಡುತ್ತಾ ಇದ್ದಾನೆ. ಯಾವ ಕೆಲಸಕ್ಕೂ ನಿಮ್ಮನ್ನು ಅಹಮಾಡುವುದಿಲ್ಲ. ಅದೂ ಅಲ್ಲದೆ ಸ್ವಲ್ಪಕಾಲದಲ್ಲಿ ನಿಮ್ಮ ಮಾತಿಗೆ ದಿರಿಸಿ ನಿಮ್ಮನ್ನು ಮೂಲೆಗೆ ಒತ್ತರಿಸಿ ನಿಮ್ಮ ರಾಜ್ಯವನ್ನು ತಾನು ಅಪ ಹರಿಸಬೇಕೆಂಬ ಮನಸ್ಸುಳ್ಳವನಾಗಿ ಯಿದ್ದಾನೆ. ಈ ಸಂಗತಿಯನ್ನು ನಾನರಿತು ನಿಮಗೆ ತಿಳಿಸಲಿಕ್ಕೆ ಬಂದನು-ಎನಲು, ಪಿಂಗಳಕನು ಭಯ ವಿಸ್ಮಯಗಳಿಂದ ಏನೂ ನುಡಿಯದೆ ಸುಮ್ಮನಿದ್ದನು. ಅದನ್ನು ನೋಡಿ ಮರಳಿ ದಮನಕನಿಂತೆಂದನು. ಎಲೈ ಮಹಾರಾಜನೇ, ಇವನೊಬ್ಬನು ನಿನ್ನ ಮಂತ್ರಿಗಳಲ್ಲಿ ಮಿಂಚಿದವನು. ಈ ಲೋಕದಲ್ಲಿ ಲಕ್ಷ್ಮಿ ಅತ್ಯುಚ್ಚಾ ಲಯವನ್ನು ಹೊಂದಿದ ಮಂತ್ರಿಯ ಮೇಲೆ ಒಂದು ಪಾದವನ್ನೂ ಅರಸನ ಮೇಲೆ ಒಂದು ಪಾದವನ್ನೂ ಇಟ್ಟು ನಿಂತಿರುವಳು, ಆ ೩ ಸಭಾ ವದವಳಾದುದರಿಂದ ಕೆಲವು ದಿನಕ್ಕೆ ಅವರಲ್ಲಿ ಒಬ್ಬರನ್ನು ಬಿಟ್ಟುಬಿಡು. ವಳು. ಅರಸನು ರಾಜ್ಯದಲ್ಲಿ ದೊಡ್ಡ ಮಂತ್ರಿಯನ್ನು ನಿಲ್ಲಿಸಿದರೆ ಅವನು ರಾಜ್ಯಭಾರವನ್ನೆಲ್ಲಾ ಸಿರಹಿಸಿ ವಿಷಯಾಸಕ್ತನಾಗುವನು, ವಿಷಯಾಸಕ್ತಿ ಯಿಂದ ಮೋಹವು ಮಿಂಚುವುದು, ಮೋಹದಿಂದ ಗರ್ವವುಂಟಾಗುವುದು. ಅವನು ಗರ್ವದಿಂದ ಕಣ್ಣು ಕಾಣದೆ ಅಕಾರ್ಯಗಳನ್ನು ಮಾಡಿ, ಅರಸ ನನ್ನೆ ಹಾಕಿ, ದಂಡನ್ನು ತನ್ನ ವಶಪಡಿಸಿಕೊಂಡು, ಅರಸನ ಪಕ್ಷದಲ್ಲಿ
ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೪೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.