ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೬೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

40 ಪಂಚತಂತ್ರ ಕಥಗಳು. ಆದರೂ ಅವರು ಮೂರ್ಖರ ಚಿತ್ತವೃತ್ತಿಯನ್ನು ತಿದ್ದಲಿಕ್ಕೆ ತಕ್ಕ ಉಪಾ ಯವನ್ನು ಮಾಡಲಾರದೆ ಹೋದರು. ಸಾಯಂಕಾಲದಲ್ಲಿ ಯುಕ್ತಾ ಯುಕ್ತವಿಚಾರಮಾಡದೆ, ತುಂಬಿಯು ಜೇನಿನ ಆಸೆಯಿಂದ ಶೀಘ್ರವಾಗಿ ಕಮಲದಲ್ಲಿ ಪ್ರವೇಶಿಸಿ, ಆಮೇಲೆ ಕಮಲವು ಮುಚಿ ಕೊಳ್ಳುತ್ತಲೇ ಹೊ ರಗೆ ಹೊರಟು ಬರುವುದಕ್ಕೆ ಹಾದಿಯಿಲ್ಲದೆ ಚಿಂತಿಸುವ ಹಾಗೆ, ಕೆಲವರು ಮುಂದಕ್ಕೆ ಬರುವುದನ್ನ ರಿಯದೆ ಲೋಭದಿಂದ ಪ್ರವರ್ತಿಸುವರು. ಕಮಲ ನೈದಿಲೆ ಮುಂತಾದ ಹೂಗಳನ್ನು ಬಿಟ್ಟು ಬಿಟ್ಟು ತುಂಬಿಗಳು ಮದಿಸಿದ ಆನೆಯ ಮಸ್ತಕದಲ್ಲಿಯ ಮದಜಲವನ್ನು ಪಾನಮಾಡಲಿಕ್ಕೆ ಹೋಗು ಇವೆ; ಆಗ ಆನೆ ಕಿವಿಗಳಿಂದ ಬೀಸಿದರೆ ಆಗಾಳಿಗೆ ಕೆಳಗೆ ಬಿದ್ದು ಅವು ತಾವರೆಯಲ್ಲಿ ತಾವು ವಿಹರಿಸುವುದನ್ನು ನೆನೆದುಕೊಳ್ಳುತ್ತವೆ. ಹಾಗೆಯೇ ಲೋಕದಲ್ಲಿ ಜನರು ಸುಲಭನಾದವನನ್ನು ಬಿಟ್ಟು ದುರ್ಜನರಲ್ಲಿ ಅನು ರಕ್ತಿಯುಳ್ಳವರಾಗಿ, ಅಲ್ಲಿ ಉಪದ್ರವವು ಸಂಭವಿಸಿದಾಗ ಸಜ್ಜನರ ಬಳಿ ಯಲ್ಲಿ ಸೇವಿಸದೆ ಹೋದೆವಲ್ಲಾ ಎಂದು ವ್ಯಸನಪಡುತ್ತಾರೆ. ಕಾಡಿ ನಲ್ಲಿಯ ಹುಲ್ಲನ್ನು ತಿಂದು ಪ್ರಭುವಿಗೆ ಹಿತವಾದ ಕೆಲಸ ಮಾಡುತ್ತಿರುವ ನನಗೀಗ ಮೃತ್ಯುವಿನ ಬಾಯಲ್ಲಿ ಬೀಳಬೇಕಾಗಿ ಬಂದಿತು. ಈ ಕಲಿ ಕಾಲದಲ್ಲಿ ಇವರು ದೊಡ್ಡವರು ಇವರು ಚಿಕ್ಕವರು ಎನ್ನದೆ ಮಾಯೊ ಪಾಯಗಳಿಂದ ವರ್ತಿಸುವವರು, ಕಾಗಿ ಮುಂತಾದ ಜಂತುಗಳಕವಾಗಿ ಒಂಟೆಗೆ ಕೇಡನ್ನು ಕೋರಿದ ಹಾಗೆ ಸಾಧುಗಳಿಗೆ ಕೇಡಬಗೆವರುಎಂದನು. ದಮನಕನು ಆಕಥೆಯನ್ನು ನನಗೆ ತಿಳಿಸೆನಲು, ಸಂಜೀವಕನು ಹೇಳುತ್ತಾನೆ. Deception-The Crow, the Tiger, and the Fox, ಮಹಾಭಯಂಕರವಾದ ಒಂದಡವಿಯಲ್ಲಿ ಮದೋತ್ರ ಟವೆಂಬ ಹೆಸ ರುಳ ಒಂದು ಸಿಂಹವು ಸಂಚರಿಸುತ್ತಿರುವುದು. ಅದಕ್ಕೆ ಕಾಗೆ ಹುಲಿ ನರಿ ಈ ಮೂವರೂ ಮಂತ್ರಿಗಳಾಗಿದ್ದರು. ಅವರು ಒಂದು ದಿನ ಆ ಕಾಡಿನಲ್ಲಿ ಒಂದೊಂಟಿಯನ್ನು ಕಂಡು-ನೀನೆಲ್ಲಿಂದ ಬಂದೆ ಎಂದು ಕೇಳಿದರು. ಆ ಒಂಟೆ ಕಾಗೆ ಮುಂತಾದ ಜಂತುಗಳಿಗೆ ಎರಗಿ, ಒಬ್ಬ