ಈ ಪುಟವನ್ನು ಪರಿಶೀಲಿಸಲಾಗಿಲ್ಲ.

44 ಸಂಚತಂತ್ರ ಕಥೆಗಳು. ತೇವೆ ಎಂದುದನ್ನು ಕೇಳಿ ಸಿಂಹವು ಸುಮ್ಮಗಿದ್ದಿತು. ಆಗ ಕಾಗೆಯು ಸಂದು ತಿಳಿದುಕೊಂಡು ಮಾಯೋಸಾಯುವಾಡಿ ಎಲ್ಲರನ್ನೂ ಕರೆದು ಕೊಂಡು ನಿಂಹಗೆ ಹತ್ತಿರಕ್ಕೆ ಬಂದು, -ಸಾಮಿ, ನೀವು ಬಹಳ ಹಸಿ ವಿನಿಂದ ಬಳಲಿ ಇದ್ದೀರಿ; ನನ್ನ ಕೊಂದು ಭಕ್ಷಿಸಿರಿ. ನೀವು ದಾಕ್ಷಿಣ್ಯ ದಿಂದ ನನ್ನ ಕೊಲ್ಲಲಾರದೆ ಇದ್ದರೆ ನಾನೇ ಸಾಯುತ್ತೇನೆ. ನನ್ನ ತಿಂದು ನಿಮ್ಮ ಹಸಿವನ್ನು ತೀರಿಸಿಕೊಳ್ಳಿರಿ, ಇದು ನನಗೆ ಬಹಳ ಸಮ್ಮತ. ಸಾವಿರ ವರ್ಷ ಬಾಳಿದರೂ ಒಂದು ದಿನ ಸಾಯಬೇಕು. ಹೀಗೆ ಸ್ವಾಮಿ ಕಾರಕ್ಕಾಗಿ ಪ್ರಾಣಬಿಡುವುದರಿಂದ ಜನ್ಮವು ಸಫಲವಾಗುವುದು ಎಂದು ನುಡಿಯಲು, ಕೇಳಿ ಸಿಂಹವು-ನನಗೆ ಈಗಿರುವ ಹಸಿವು ಹೇಳ ತೀರದು ; ನಿನ್ನ ದೇಹವು ಬಲು ಚಿಕ್ಕದು. ಇದರಿಂದ ನನ್ನ ಹಸಿವು ತೀರದು, ವ್ಯರ್ಥವಾಗಿ ಜೀವಹಿಂಸೆ ಮಾಡಿದ ಪಾಪಮಾತ್ರ ಸಂಭವಿಸುತ್ತದೆಎಂದು ಹೇಳಿತು. ಬಳಿಕ ನರಿ ಮುಂದೆ ಬಂದು ನಿಂತು ನನ್ನ ದೇಹ ವನ್ನು ನಿಮಗೆ ಕೊಟ್ಟೆ. ನೀವು ಭುಜಿಸಿರಿ-ಎಂದು ಸಿಂಹದೊಂದಿಗೆ ಹೇಳಿತು, ನಿಂಹವು ಕಾಗೆಗೆ ಹೇಳಿದಂತೆ ನರಿಗೂ ಉತ್ತರಕೊಟ್ಟಿತು. ಆ ಮೇಲೆ ವ್ಯಾಘ್ರವು ನಿಂಹಕ್ಕೆ ನಮಸ್ಕರಿಸಿ ನನ್ನನ್ನು ತಿಂದು ನಿಮ್ಮ ಹಸಿವನ್ನು ತೀರಿಸಿಕೊಳ್ಳಬೇಕು ಎಂದು ಹೇಳಿತು. ಅದಕ್ಕೆ ನೀನು ದುಪ್ಪ, ಜಂತು, ನಾನಿದುವರೆಗೆ ಇಂಥ ದುಷ್ಕಜಂತುವಿನ ಮಾಂಸವನ್ನು ತಿಂದವನಲ್ಲ. ನಿನ್ನ ತಿಂದರೆ ನನಗೆ ಬಹುದೋಪಬಂದೀತು ! ಈ ದಿನ ಹೇಗಾದರೂ ಉಪವಾಸವಿರುತ್ತೇನೆ, ಹೋಗು ಎಂದು ನುಡಿ ಯಿತು. ಆ ಮಾತಿಗೆ ಹುಲಿ ನಾಚಿಕೆಪಟ್ಟಂತೆ ತಲೆಬಗ್ಗಿಸಿಕೊಂಡು ಆಚಗೆ ಹೋಯಿತು. ಬಳಿಕ ಒಂಟಿ ಸಿಂಹಕ್ಕೆ ಪ್ರದಕ್ಷಿಣೆ ಮಾಡಿ ವಿನ ಯದಿಂದೆರಗಿ-ನನ್ನದು ಬಹಳ ದೊಡ್ಡ ದೇಹ, ನನ್ನನ್ನು ತಿಂದರೆ ನಿಮ್ಮ ಹಸಿವು ತೀರುವುದು. ನನ್ನ ಮನಃಪೂರ್ವಕವಾಗಿ ಹೇಳುತ್ತೇನೆ, ಕೈಕೊಳ್ಳಬೇಕು ಎಂದಿತು. ಈ ಮಾತು ಕೇಳುತ್ತಲೇ ನಿಂಹವು ಒಂಟೆಯ ಮೇಲೆ ಬಿದ್ದು, ಕುತ್ತಿಗೆಯನ್ನು ಹಿಡಿದು ಕಚ್ಚಿ ನೆಲಕ್ಕೆ ಕೆಡವಿ, ತನಗೆ ಬೇಕಾದಷ್ಟು ಮಾಂಸವನ್ನು ಭಕ್ಷಿಸಿತು. ಆದುದ ರಿಂದ ಹೊಸತಾಗಿ ಊಳಿಗಕ್ಕೆ ಬಂದ ಸೇವಕನು ಎಷ್ಟು ಗುಣವಂತನಾ