ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೬೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

. 48 ಪಂಚತಂತ್ರ ಕಥೆಗಳು. ಹೋಗುವುದು ಮೇಲು ಹೆರುವ ಕಾಲವು ಬಂದಾಗ ಇನ್ನೊಂದು ಸ್ಥಳಕ್ಕೆ ಹೋಗುವುದು ಕಷ್ಟವು ಎಂದು ಹೆಣ್ಣು ಹಕ್ಕಿ ನುಡಿಯಿತು. ಅದಕ್ಕೆ ಗಂಡುಹಕ್ಕಿ ನಕ್ಕು- ತಣ್ಣಗಿರುವ ಕಿರಣಗಳುಳ್ಳ ಚಂದ್ರನು ನೈದಿಲೆಗಳಿಗೆ ರಕ್ಷಕನು, ಸೋರುವ ಸ್ವಚ್ಛವಾದ ನೀರುಳ್ಳ ಮೇಘವು ಚಾತಕಗಳಿಗೆ ರಕ್ಷಕನು, ಲೋಕವೆಂಬ ಮನೆಗೆ ದೀಪವಾದ ಸೂರನು ತಾವರೆಗಳಿಗೆ ರಕ್ಷಕನು, ಪಕ್ಷಿಗಳಿಗೆ ವಿಷ್ಣು ವಾಹನನಾದ ಗರುಡನು ರಹ ಕನು, ನಮಗೆ ಇಂಥ ರಕ್ಷಕನಿರುವಲ್ಲಿ ನಮ್ಮ ಸಂಗಡ ಸಮುದ್ರನು ವಿರೋಧಿಸಿಕೊಳ್ಳುವನೇ ?-ಎಂದಿತು. ಹಿತರ ಮಾತನ್ನು ಕೇಳದ ಮೂಢನು ಕಟ್ಟಿಗೆಯನ್ನು ಬಿಟ್ಟು ಬಿದ್ದ ಆಮದು ಹಾಗೆ ನಶಿಸುವನುಎಂದು ಹೆಣ್ಣು ಹಕ್ಕಿ ನುಡಿಯಿತು, ಆ ಕಥೆಯನ್ನು ಹೇಳಂತ ಗುಂಡು ಹಕ್ಕಿ ಕೇಳು ಹೆಣು ಹಕ್ಕಿ ಹೇಳುತ್ತದೆ. A fool not following the advice of his friends will be ruined.The Tortoise and the Swan. ಬಂದು ಸರೋವರದಲ್ಲಿ ಕಂಬುಗ್ರಿವವೆಂಬ ಹೆಸರುಳ್ಳ ಒಂದು ಆಮೆಯು ಬಹುಕಾಲದಿಂದ ಮಹಾಸಂತೋಷದಿಂದ ವಾಸಮಾಡುತ್ತಿ ದ್ವಿತು. ಆ ಕೂರ್ಮಕ್ಕೆ ವಿಕಟಸಂಕಟಗಳಂಬ ಹೆಸ: ... ಎರಡು ಹಂಸಗಳು ಸ್ನೇಹವಾಗಿ ಆ ಸರೋವರದಲ್ಲಿ ಒಕ್ಕಲಿದ್ದು ವು. ತರು ವಾಯು ಸ್ವಲ್ಪಕಾಲಕ್ಕೆ ಮಳೆಯಿಲ್ಲದೆ ಕೊಳವೆಲ್ಲಾ ಒಣಗಿ ಹೋಗುತ್ತಿ ದ್ದಿತು . ಆಗ ಆ ಹಂಸಗಳು ಮತ್ತೊಂದು ಸ್ಥಳಕ್ಕೆ ಹೋಗಬೇಕೆಂದು ಯೋಚಿಸಿ, ಕಂಬುಗ್ರೀವನ ಬಳಿಗೆ ಹೋಗಿ ನಾಸ್ಥಳವನ್ನು ಬಿಟ್ಟು ಬೇರೆ ತಾವಿಗೆ ಹೋಗುತ್ತೇವೆ; ಅಪ್ಪಣೆ ಕೊಡು..-ಎಂದು ಕೇಳಿದುವು. ಅದಕ್ಕೆ ಆಮೆ ವ್ಯಸನಪಟ್ಟು--ನಾವು ಬಹು ಕಾಲದ ಸ್ನೇಹಿತರು, ರಕ್ಕೆ ಗಳುಳ್ಳವರಾಗಿರುವುದರಿಂದೆ ಹೋಗಬೇಕೆಂಬ ಸ್ಥಳಕ್ಕೆ ಹೋಗುವ ಶಕ್ತಿ ನಿಮಗುಂಟು. ರೆಕ್ಕೆಗಳಿಲ್ಲದ ನಾನು ಎಲ್ಲಿಗೆ ಹೋಗಬಲ್ಲೆನು ? ನಾನೇ ನುಮಾಡುವೆನು ? ನಿಮ್ಮನ್ನು ಬಿಟ್ಟು ನಿಮಿಷವಾದರೂ ಬದುಕಲಾ ರೆನು-ಎಂದು ಬಹಳ ದೈನ್ಯದಿಂದ ಮಾತನಾಡಿತು. ಆ ದುಃಖವನ್ನು