ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೭೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

51 ಮಿತ್ರಭೇದತಂತ್ರ ಸಮುದ್ರನು ಟಿಟ್ಟಿಭದ ಪ್ರತಿಜ್ಞೆಯನ್ನು ಭಂಗಪಡಿಸಬೇಕೆಂದು ನೆನಸಿ ಅಲೆಗಳ ಮೂಲವಾಗಿ ಅದರ ಮೊಟ್ಟೆಗಳನ್ನು ಅಪಹರಿಸಿದನು. ಆಗ ಆ ಹೆಣ್ಣು ಹಕ್ಕಿ ವ್ಯಸನಪಡುತ್ತಾ ತನ್ನ ಗಂಡನನ್ನು ನೋಡಿ....ನಾನು ಅಂದು ಹೇಳಿದ ಮಾತನ್ನು ಕೇಳದೆಹೋದೆ; ನಾನಿಟ್ಟ ಮೊಟ್ಟೆಗಳಲ್ಲಾ ಸಮುದ್ರದ ಪಾಲಾದವು. ಇನ್ನು ನಾನೇನುಮಾಡಲಿ--ಎಂದು ದುಃಖಿ ಸಲಾಗಿ, ಅದನ್ನು ಟಿಟ್ಟಿಭವು ಸಮಾಧಾನಪಡಿಸಿ, ನನ್ನನ್ನು ಕೈಲಾಗ ದವನೆಂದು ಎಣಿಸಬೇಡ, ಸಮುದ್ರವು ಅಪಹರಿಸಿದ ನಿನ್ನ ಮೊಟ್ಟೆಗಳ ನ್ನು ನಿನಗೆ ತರಿಸಿ ಕೊಡುವೆನು-ಎಂದು ಹೇಳಿ, ಪಕ್ಷಿಜಾತಿಗಳಿಗೆಲ್ಲಾ ಆ ಸಮಾಚಾರವನ್ನು ತಿಳಿಸಿ, ಅವುಗಳನ್ನು ಕರೆತರಿಸಿ ಅವುಗಳ ಸಂಗಡ ಆಲೋಚಿಸಿ, ಆ ಪಕ್ಷಿಗಳೂ ತಾನೂ ಗರುಡನನ್ನು ಧ್ಯಾನಿಸಿದವು, ಗರುಡನು ಪ್ರತ್ಯಕ್ಷವಾಗಿ-ಎಲೈ ಪಕ್ಷಿಗಳಿರಾ, ನಿಮ್ಮ ಭಕ್ತಿಗೆ ಮೆಚ್ಚಿ, ನಾನು ನೀವಿರುವ ಸ್ಥಳಕ್ಕೆ ಬಂದೆನು. ನಿಮ್ಮ ಕೋರಿಕೆಯನ್ನು ಇದು ಸಲ್ಪ ಇದು ಮಹತ್ತು ಎಂದು ಎಣಿಸದೆ ಹೇಳರಿ. ಅದು ಸಮಸ್ತರಿಗೂ ಅಸಾಧ್ಯವಾಗಿ ಇದ್ದರೂ, ನಾನದನ್ನು ಮಾಡುವೆನು. ನನ್ನವರು ನೀವೇ ಅಲ್ಲವೇ? ನಿಮಗಿಂತ ನನಗೆ ಬೇಕಾದವರು ಯಾರು ?-ಎಂದು ನುಡಿ ಯಲು, ಗರುತ್ಮಂತನಿಗೆ ಅವು ಈ ಸಂಗತಿಯನ್ನು ಅರಿಕೆಮಾಡಿದುವು. ಆ ಮೇಲೆ ಗುರುತ್ರಂತನು ಪ್ರತಿಜಾತಿಗಳನ್ನು ಹೀರಸಮುದ್ರದಲ್ಲಿ ಶೇಷ ಶಾಯಿಯಾಗಿ ಇರುವ ವಿಷ್ಣುವಿನ ಬಳಿಗೆ ಕರೆದುಕೊಂಡುಹೋಗಿ ಆ ಸಂಗ ತಿಯನ್ನು ಬಿಸಲಾಗಿ, ಭಕ್ತಪರಾಧೀನನಾದ ವಿಷ್ಣುವು ಗರುಡಾರೂ ಢನಾಗಿ ಸಮುದ್ರನ ಬಳಿಗೆ ಬಂದು-ಎಲೈ ಸಮುದ್ರನೇ, ನನ್ನಲ್ಲಿ ಭಕ್ತಿ ಯುಳ್ಳ ಈ ಪಕ್ಷಿಗಳ ಮೊಟ್ಟೆಗಳನ್ನು ನೀನು ಅಪಹರಿಸಿದೆಯಂತ. ಶೀಘ್ರವಾಗಿ ಅವುಗಳ ಮೊಟ್ಟೆಗಳನ್ನು ಅವುಗಳಿಗೆ ಕೊಡು-ಎಂದು ಅಪ್ಪಣೆಮಾಡಿದನು. ಆಗ ಸಮುದ್ರನು ಮಹಾ ವಿನಯಭಯಭಕ್ತಿ ಗಳಿಂದ ಭಗವಂತನಿಗೆ ಪ್ರದಕ್ಷಿಣ ನಮಸ್ಕಾರಗಳನ್ನು ಮಾಡಿ, ಪಕ್ಷಿಯು ಮೊಟ್ಟೆಗಳನ್ನು ರತ್ನ ಮಯವಾದ ತಟ್ಟೆಯಲ್ಲಿಟ್ಟುಕೊಂಡು ಬಂದು ಟಿಟ್ಟಿಭಪಕ್ಷಿಗಳಿಗೆ ಒಪ್ಪಿಸಿದನು.