ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೭೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಿ . 'ಮಿತ್ರನ ಹತಂತ್ರ ಅವರಿಬ್ಬರೂ ವಿಪಾದಿಸುತ್ತಾ ಆ ಪಟ್ಟಣದ ಅರಸನ ಬಳಿಗೆ ಹೋಗಿ ತಮ್ಮ ವಿದ್ಯಮಾನಗಳನ್ನೆಲ್ಲ ತಿಳಿಸಿದರು. ಅರಸನು ಧರಾಧಿಕೃತರನ್ನು ಕರೆ ಯಿಸಿ, -ಈ ವ್ಯಾಜ್ಯವನ್ನು ತೀರಿಸಿರಿ ಎಂದು ಅಪ್ಪಣೆ ಮಾಡಿದನು. ಅವರು ವ್ಯಾಜ್ಯಗಾರರನ್ನು ನೋಡಿ ಐದು ದಿವಸದಲ್ಲಿ ನಿಮ್ಮೊಳಗೆ ನೀವು ಬಗೆ ಹರಿಸಿಕೊಂಡರೆ ಸರಿ, ಇಲ್ಲದ ಪಕ್ಷದಲ್ಲಿ ಆರನೆಯ ದಿನ ಸಮಬಗೆ ಬರಬೇಕು ಎಂದು ಹೇಳಿದರು. ತರುವಾಯ ಅವರು ಆನೆಯ ಜನ ವ್ಯಂಜಗಳ ತೀರಿಸುವವರ ಬಳಿಗೆ ಬಂದು ನಿಂತರು. ಆಗ ಧರಾಧಿಕೃತರು ಇವರ ವಾಡ್ಯೂಲಗಳನ್ನು ಕೇಳ-ನಿಮಗೆ ಸಾಕ್ಷಿ ಗಳು ಯಾರಾದರೂ ಉಂಟೋ ? ಎಂದು ಕೇಳಿದರು. ಅದಕ್ಕೆ ದುಪ್ಪ ಬುದ್ದಿಯು ಎಲೈ ಪುಣ್ಯಾತ್ಮರೇ, ಈ ಧನವನ್ನು ನಿಜವಾಗಿ ಸುಬುದ್ದಿ ಅಪಹರಿಸಿದನು. ಇದಕ್ಕೆ ನೀವು ಸಂಶಯಿಸ ಕೆಲಸವಿಲ್ಲ. ನಾವೀಧನ ವನ್ನು ಯಾವ ಮರದ ಕೆಳಗೆ ಹೂತಿಟ್ಟೆವೋ ಆ ಮರವೇ ಸಾಕ್ಷಿ. ಆ'ವರದ ಕೈಯಲ್ಲಿಯೇ ಹೇಳಿಸುತ್ತೇನೆ. “ನೋಡಿ : ನನ್ನ ಸುಳ್ಳು ದಿಟ ಆಗ ನಿಮಗೆ ಮಂದಟ್ಟಾಗುತ್ತದೆ ಎಂದು ನುಡಿದನು. ಅದನ್ನು ಕೇಳಿ ಇವರು ಬಹಳ ಆಶ್ಚ ರಪಟ್ಟು, ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಾ ಈ ವರೆಗೆ ನಾವೆಂದೂ ಇಂಥ ಪ್ರಮಾಣವನ್ನು ಕೇಳಿದವರಲ್ಲ; ಇದೇ ನೋ, ವಿಚಿತ್ರವಾಗಿದೆ, ನೋಡೋಣ ಎಂದುಕೊಂಡು-ಒಳ್ಳೆಯದು, ಈ ದಿವಸ ಬಹಳ ಹೊತ್ತು ಹೋಯಿತು. ನಾಳ ಹೊತ್ತಿಗೆ ಮುಂಚೆ ಬನ್ನಿ -ಏಂದು ಅವರಿಗೆ ಅಪ್ಪಣೆಕೊಟ್ಟು ಕಳುಹಿಸಿದರು. ಆ ಮೇಲೆ ದುಷ್ಟಬುದ್ದಿ ತನ್ನ ಮನೆಗೆ ಹೋಗಿ ತಂದೆಯನ್ನು ನೋಡಿ ಅಪ್ಪ, ಈ ಹಸ್ತಗತವಾದ ಧನವನ್ನು ಅನ್ಯರಿಗೆ ಏಕೆ ಹಂಚಿ ಕೊಡಬೇಕು ? ನೀನೊಂದು ಮಾತು ನುಡಿದರೆ ನಮಗೆ ದಕ್ಕುತ್ತದೆ. ನನ್ನ ಮಾತನ್ನು ತೆಗೆದು ಹಾಕದೆ ನಡೆಯಿಸಿಕೊಡು. ಅದೇನೆಂದರೆ, ಮರದ ಪೊಟ್ಟರೆ ಯಲ್ಲಿ ನೀನೀರಾತ್ರಿ ಪ್ರವೇಶಿಸಿ ಕಾಣಿಸಿಕೊಳ್ಳದೆ ಇದ್ದರೆ, ನಾಳೆ ಬೆಳಿಗ್ಗೆ ಧರಾಧಿಕೃತರು ಬಂದು ಆ ಮರವನ್ನು ಕೇಳುತ್ತಲೇ ನೀನು ತಾಮಸ ಪಡಿಸದೆ ಈ ಧನವನ್ನು ಸುಬುದ್ದಿ ಹೊತ್ತು ಹಾಕಿದನೇ ಹೊರತು H