ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೮೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

60 ಪಂಚತಂತ್ರ ಕಥೆಗಳು. ದುದನ್ನು ಹೇಳಿ ಅವನು ಪ್ರಾಣವನ್ನು ಬಿಟ್ಟನು. ಆ ಮೇಲೆ ಅವರು ಈ ಸಮಾಚಾರವನ್ನೆಲ್ಲಾ ಅರಸನಿಗೆ ತಿಳಿಸಿದರು. ಅರಸನು ದುಷ್ಯ ಬುದ್ದಿಯ ಕಡೆಯಿಂದ ಎಲ್ಲ ಹಣವನ್ನೂ ಸುಬುದ್ದಿಗೆ ಕೆಡಿಸಿ ಅವನಿಗೆ ತಕ್ಕ ಶಿಕ್ಷೆಯನ್ನು ಸಹ ಮಾಡಿಸಿದನು --ಎಂದು ಹೇಳಿ ಕರಟಕನು ಮರಳಿ ಇಂತೆಂದನು. ನದಿಗಳು ಸಮುದ್ರ ಸಂಗಮವಾಗುವವರೆಗೆ ನಿಲ್ಲುವುವು, ಸ್ನೇಹವು ಭೇದ ಹುಟ್ಟುವ ತನಕ ನಿಲ್ಲುವುದು, ರಹಸ್ಯವು ಚಾಡಿಗಾರನ ಕಿವಿಗೆ ಬೀಳುವ ಪರಂತವು ನಿಲ್ಲುವುದು, ವಂಶವು ದುಷ್ಟ ಪುತ್ರನು ಉಂಟಾಗು ವತನಕ ನಿಲ್ಲುವುದು, ಆ ಮೇಲೆ ಅವು ನಿಲ್ಲಲಾರವೆಂದು ನೀತಿಶಾಸ್ತ್ರ ) ಜ್ಞರು ಹೇಳುವರು. ನೀನು ಕುಲವನ್ನು ಕೆಡಿಸುವಷ್ಟು ಕೆಟ್ಟ ನಡತೆ ಯುಳ್ಳವನಾಗಿ ಇದ್ದೀಯೆ, ನಿನ್ನ ನಡತೆಯನ್ನು ನೋಡಿದರೆ ನನಗೆ ಅಂಜಿಕೆಯಾಗುತ್ತದೆ. ಚಾಡಿಠೋರನ ಸಂಗಡ ಸ್ನೇಹಮಾಡುವ ವನು ಕೆಟ್ಟು ಹೋಗುವನು. ಹಾವಿನ ಮರಿಗಳನ್ನು ಬಹುಕಾಲ ಸಾಕಿದರೂ ಅವು ಕಚ್ಚದೆ ಬಿಟ್ಟಾವೇ ? ತಿಳಿದವನ ಸಹವಾಸ ಸಿಕ್ಕಿದರೆ ಒಳ್ಳಯದು; ಅದೇ ಅವನು ಕಪಟಿಯಾಗಿದ್ದರೆ ಒಳ್ಳೆಯದಲ್ಲ. ತಿಳ ಯದವನು ಗುಣವಂತನಾಗಿ ಇದ್ದರೆ ಅವನ ಸಹವಾಸದಿಂದ ಸಜ್ಜನರಿಗೆ ಎಂದಿಗೂ ಕೊರತೆಯಿಲ್ಲ. ನೀನು ಧಣಿಯನ್ನೇ ಇಷ್ಟು ದುರವಸ್ಥೆ ಹೊಂದಿಸಿದೆ; ಅನೃರು ನಿನಗೆ ತೃಣಪ್ರಾಯರೇ ಸರಿ. “ಒಬ್ಬನನ್ನು ತಾನು ವಂಚಸಬೇಕೆಂದು ಎಣಿಸಿದರೆ ತನ್ನನ್ನು ದೈವವು ವಂಚಿಸು ತದೆ. ಐವತ್ತು ಭಾರ ಲೋಹವನ್ನು ಇಲಿಗಳು ತಿಂದುವೆಂದು ಒಬ್ಬ ವರ್ತಕನು ಹೇಳಿದರೆ, ಇನ್ನೊಬ್ಬನು ಹುಡಗನನ್ನು ಹದ್ದು ಎತ್ತಿ ಕೊಂಡು ಹೋಯಿತೆಂದು ನುಡಿದನು. ಈ ವಿಚಿತ್ರವಾದ ಕಥೆಯನ್ನು ನೀನು ಕೇಳಿರುವೆಯಾ? ಎಂದು ಹೇಳಲಾಗಿ, ಇದನ್ನು ನಾನೆಂದೂ ಕೇಳಲಿಲ್ಲ ಹೇಳು ಎಂದು ದಮನಕನೆಂದನು. ಕರಟಕನು ಹೇಳಲಾ ರಂಭಿಸಿದನು.