ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೮೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚ ಮಿತ್ರಭೇದತಂತ್ರ. 63 ದುರ್ಗುಣಗಳು ಉಂಟಾಗುವುವು. ಬುದ್ದಿಶಾಲಿಯಾದವನು ಮಾಡಬಾ ರದ ಕೆಲಸವನ್ನು ಮಾಡಲಪೇಕ್ಷಿಸನು. ಬಹಳ ದಾಹವಾಗಿದ್ದರೂ ಚಾತ ಕಪಕ್ಷಿಗಳು ಬೀದಿಯಲ್ಲಿ ಹರಿವ ನೀರನ್ನು ಕುಡಿವುವೇ?-ಎಂದು ಬಹು ಪ್ರಕಾರವಾಗಿ ಹೇಳಲು, ಕೇಳ ದಮನಕನು-ನಮ್ಮ ಸ್ವಾಮಿ ಸಂಜೀ ವಕನನ್ನು ಕೊಂದ ಬಗೆಯನ್ನು ತಿಳಿದುಕೊಳ್ಳಬೇಕು, ಹೋಗೋಣ ಬಾ ಎಂದು ಕರಟಕನನ್ನು ಕರೆದುಕೊಂಡು ವಿಂಗಳಕನ ಸವಿಾಪಕ್ಕೆ ಹೋದನು. ವಿಂಗಳಕನು ಅದಕ್ಕೆ ಮುಂಚೆಯೇ ಸಂಜೀವಕನನ್ನು ಕೊಂದು ಪಶ್ಚಾತ್ತಾಪಪಡುತ್ತಾ ಇದ್ದ ದಮನಕನನ್ನು ನೋಡಿ ಇಂತೆಂದನು:- ಪಾಲಿಸತಕ್ಕವನನ್ನು ನೋಡಿ ಪಾಲಿಸಿ ಅವನಿಗೆ ಸಕಲಸಂಪತ್ತು ಗಳನ್ನು ಉಂಟುಮಾಡುವುದು ರಾಜಧರ್ಮವೇ ಹೊರತು ಅಂಥವನನ್ನು ಕೊಲ್ಲುವುದು ರಾಜಧರ್ಮವಲ್ಲ. ನಾನೆಷ್ಟುಮಾತ್ರವೂ ಹಿಂದು ಮುಂದು ವಿಚಾರಿಸದೆ ಏಕೆ ಸಂಜೀವಕನನ್ನು ಕೊಂದನು ? ತಾನು ಇಟ್ಟ ವಿಷ ವೃಕ್ಷವನ್ನಾದರೂ ತಾನೇ ಕಡಿದುಹಾಕುವುದು ಯುಕ್ತವಲ್ಲ. ಒಳ್ಳೆಯ ಗುಣವಂತನಾದ ನೃತ್ಯವನ್ನು ಅರಸನು ಬಿಟ್ಟುಬಿಟ್ಟರೆ ಉಳಿದವರು ಆತ ನಿಗೆ ದೂರವಾಗುವರು. ಅಂಥ ಕೆಲಸ ಮಾಡುವುದು ಅರಸನಿಗೆ ಹಾನಿ ಕರವು, ಪರರ ಪಾಲಾದ ಭೂಮಿಯನ್ನಾದರೂ ತಂದುಕೊಳ್ಳಬಹುದು ; ಒಳ್ಳಯ ನೃತ್ಯನನ್ನು ಮಾತ್ರ ಸಂಪಾದಿಸುವುದು ಕಷ್ಟ್ಯ. ಭೂಮಿ ಯಲ್ಲಿ ಇರುವತನಕ ನನಗೆ ಇದೊಂದು ದೊಡ್ಡ ಅಪಕೀರ್ತಿ ಬಂದಿತು. ಇದನ್ನು ಹೋಗಲಾಡಿಸುವ ಬಗೆ ಹೇಗೆ ?-ಎಂದು ಪ್ರಲಾಪಿಸಿದನು. Damauaka comforts Pingalaka. ಪಿತಾ ವಾ ಯದಿ ವಾ ಭ್ರಾತಾ ಪುತ್ರೋ ವಾ ಯದಿ ವಾ ಸುಹೃತಿ| ಪ್ರಾಣಚ್ಛೇದಕರಾ ರಾಜ್ ಹಂತವ್ಯಾ ಭೂತಿ ಮಿಚ್ಚತಾ | ಅದನ್ನು ಕೇಳಿ ದಮನಕನಿಂತೆಂದನು :-ಸ್ವಾಮಿಾ, ಶತ್ರುಸಂ ಹಾರ ಮಾಡಿದ ತರುವಾಯ ಹೀಗೆ ಸಂತಾಪಿಸುವುದು ಯುಕ್ತವಲ್ಲ. ತನ್ನ ತಂದೆಯಾದರೂ ಮಗನಾದರೂ ಅಣ್ಣನಾದರೂ ತಮ್ಮನಾದರೂ ಮಿತ್ರನಾದರೂ ತನಗೆ ದ್ರೋಹಮಾಡಿದರೆ ಭೂಮಿಯಮೇಲೆ ಆಕೆಯುಳ್ಳ