ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೯೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಹೃಲಾಭವು. ಕನು-ನಾನಂಥವನೆಂದು ಏರಸದ ಮಾತುಗಳನ್ನು ಏಕೆ ಆಡುತ್ತೀಯೆ? ನಾನು ನಿನ್ನನ್ನು ಭಕ್ಷಿಸುವೆನೆಂಬ ಶಂಕೆಯನ್ನು ಬಿಟ್ಟು ಅವಶ್ಯವಾಗಿ ನನ್ನಲ್ಲಿ ಮಿತ್ರಭಾವವನ್ನು ವಹಿಸು. ಒಂದಾನೊಂದು ವೇಳಯಾದರೂ ನನ್ನಲ್ಲಿ ಕೆಟ್ಟ ಗುಣಗಳು ಉಂಟಾದಾವೆಂದು ನೆನಸಬೇಡ ಎನಲು, ಹಿರ ಇಕನು ನೀನು ಶತ್ರುಪಕ್ಷದಲ್ಲಿ ಸೇರಿದವನು. ನಿನಗೂ ನನಗೂ ಸ್ನೇಹವುಂಟಾಗಲಾರದು-ಎಂದು ಮರಳಿ ಇಂತೆಂದನು. ಬುದ್ದಿವಂತನಾದವನು ತನ್ನ ಶತ್ರುವನ್ನು ಹತ್ತಿರಕ್ಕೆ ಸೇರಲೀ ಯನು ; ಸೇರಲಿತ್ತರೆ ಕಾದ ನೀರಿನಿಂದ ಬೆಂಕಿ ಆರಿದ ಹಾಗೆ ತಾನು ಕೆಟ್ಟು ಹೋಗುವನು. ತಕ್ಷವಾದ ಕಾರವನ್ನು ಮಾಡಬಹುದೇ ಹೊರತು ಅಶಕ್ಯವಾದ ಕಾರಣವನ್ನು ಮಾಡಲಿಕ್ಕಾದೀತೆ ? ಸಮುದ್ರದ ಮೇಲೆ ಬಂಡಿಗಳನ್ನೂ ನೆಲದಮೇಲೆ ಹಡಗುಗಳನ್ನೂ ಸಾಗಿಸಬಹುದೇ ? ಬುದ್ದಿವಂತರು ದುರ್ಜನನೊಡನೆ ಸ್ನೇಹಿಸಬೇಕೆಂದು ಅಪೇಕ್ಷಸರು. ಇವನು ನನಗೆ ಬಹಳ ವಿಹಿತನು, ನನ್ನಿಂದ ತುಂಬ ಮೇಲು ಹೊಂದಿ ದನು, ನನಗೆ ದೋಡಮಾಡಲೊಲ್ಲನು- ಎಂದು ವಂಚಕನನ್ನು ನಂಬಿ ದವನು ಕೆಟ್ಟು ಹೋಗುವನು. ಸಜ್ಜನನೆಂಬ ಮಾತು ಪೂರ್ವಕಾಲದಲ್ಲಿ ದ್ದಿತು. ಈಗ ಲೋಕವೆಲ್ಲಾ ಧನಮೂಲಕವಾದ ಸ್ನೇಹವುಳ್ಳದಾಗಿದೆ. ದುರ್ಜನನು ಇನಾದರೂ ಉಪಕಾರವನ್ನು ಹೊಂದಿದವನಾದರೂ, ಅವನನ್ನು ಮಡುವಿನಲ್ಲಿ ನಿದ್ರಿಸುತ್ತಿರುವ ಹಾವಿನ ಹಾಗೆ ಒಂದಾ ನೊಂದು ವೇಳೆಯಾದರೂ ನಂಬಕೂಡದು. ಬಹಳ ಧನವನ್ನು ಕೊ ಟ್ಟರೂ ಶತ್ರುವಿನ ಮೇಲೂ, ತನ್ನ ಮೇಲೆ ಮನಸ್ಸಿಲ್ಲದ ಹೆಂಡತಿಯ ಮೇಲೂ ನಂಬುಗೆ ಇಡಬಾರದು; ಅಂಥವರ ಮೇಲೆ ನಂಬುಗೆಯಿಟ್ಟವ ನಿಗೆ ಅದು ಅವಸಾನಕಾಲವೆಂದು ಎಣಿಸಬೇಕು. ಒಂದು ಸಲ ದುಪ್ಪ ನಾಗಿ ಕಾಣಿಸಿದ ಸ್ನೇಹಿತನೊಡನೆ ಯಾವನು ತಿರುಗಿ ಸ್ನೇಹಮಾಡು ವನೋ ಅವನು, ಬಸಿರಾದ ನಳ್ಳಿಯಹಾಗೆ ನಾಶವನ್ನು ಹೊಂದುವನು. ತಾನು ಅವನಿಗೆ ಅಪಕಾರಮಾಡಿದವನಲ್ಲವಲ್ಲಾ ಎಂದು ದುಘ್ನನನ್ನು ನಂಬಿ ಇರಕೂಡದು ; ಬುದಿವಂತರಾದಮಗೆ ಸಹ ಪ್ರಮಾದವು