ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೯೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಹೃಲಾಭವು. 13 ಲಘುಪತನಕನು ಆಗಾಗ್ಗೆ ಮಹಾರಣ್ಯದಲ್ಲಿ ಸಿಂಹ ಶಾರ್ದೂಲಾದಿಗಳಿಂದ ಕೊಲ್ಲಲ್ಪಟ್ಟ ಮೃಗಗಳ ಮಾಂಸವನ್ನು ತಂದು ಹಿರಣ್ಯಕನಿಗೆ ಕೊಟ್ಟು ತಾನೂ ತಿನ್ನುತ್ತಿದ್ದಿತು. ಈ ರೀತಿಯಲ್ಲಿ ನಿರಂತರಸ್ನೇಹದಿಂದ ಸ್ವಲ್ಪ ಕಾಲ ಕಳಯಿತು. ಬಳಿಕ ಒಂದು ದಿನ ಲಘುಪತನಕನು ಹಿರಣ್ಯಕನನ್ನು ನೋಡಿಎಲೈ ಸ್ನೇಹಿತನೇ, ಈಗ ಇಲ್ಲಿ ಆಹಾರವನ್ನು ಸಂಪಾದಿಸುವುದು ಬಹಳ ಕಸ್ಮವಾಗಿದೆ. ಆದುದರಿಂದ ಈ ಕಾಡನ್ನು ಬಿಟ್ಟು ಮತ್ತೊಂದು ಸ್ಥಳಕ್ಕೆ ಹೋಗಬೇಕೆಂದಿದ್ದೇನೆ. ನನಗೆ ಅಪ್ಪಣೆ ಕೊಡು. ಇಲ್ಲಿಗೆ ಎತ್ತರವಾಗಿ ಹತ್ತುಗಾವುದ ದೂರದಲ್ಲಿ ರಾಜಹಂಸಗಳು ಮೊದಲಾದ ಪಕ್ಷಿಗಳಿಂದ ಪ್ರಕಾಶಿಸುತ್ತಿರುವ ಒಂದು ಕೊಳವುಂಟು. ಅಲ್ಲಿ ನನ್ನ ಸ್ನೇಹಿತನಾದ ಪಿತ್ರಮಂದಿರನೆಂಬ ಕರ್ಮರಾಜನಿದ್ದಾನೆ. ಆತನು ಪ್ರೀತಿಯಿಂದ ನನಗೆ ತಾನು ಮುಂತಾದ ಆಹಾರವನ್ನು ಕೊಟ್ಟು ನಾನಾ ವಿಧವಾದ ಉಪಚಾರಗಳಿಂದ ನನ್ನನ್ನು ಉಪಚರಿಸುವನು-ಎಂದು ಹೇಳಿದನು. ಅದಕ್ಕೆ ಹಿರಣ್ಯಕನು ಎಲೈ ಮಿತ್ರನಾದ ಲಘುಪತನ ಕನೇ, ನಾನು ನಿನ್ನ ಬಿಟ್ಟು ಒಂದು ನಿಮಿಷವಾದರೂ ನಿಲ್ಲಲಾರೆನು. ನಿನ್ನ ಹಿಂದೆಯೇ ಬರುತ್ತೇನೆ, ನನ್ನನ್ನೂ ಕರೆದುಕೊಂಡು ಹೋಗು. ಸಂಪ್ರಾಪ್ತವಾದ ದು ಖವು ದೇಶಾಂತರಗಮನದಿಂದಲ್ಲದೆ ಶಾಂತಿಯಾಗ ದು-ಎನಲು, ಲಘುಪತನಕನು ಬೆದರಿಬಿದ್ದು ನನ್ನೊಡನೆ ಈವರೆಗೆ ಎಂದಿಗೂ ನೀನು ಇಂಥ ಮಾತನ್ನು ಹೇಳಲಿಲ್ಲ. ದುಃಖಪ್ರಾಪ್ತಿಗೆ ಕಾರ ಣವೇನು ?- ಎಂದು ಕೇಳಿದನು. ಅದನ್ನೆಲ್ಲಾ ಅಲ್ಲಿ ತಿಳಿಸುತ್ತೇನೆ, ನನ್ನನ್ನು ಕರೆದುಕೊಂಡು ಹೋಗು ಎಂದು ಹಿರಣ್ಯಕನು ನುಡಿ ಯಲು, ಹಾಗೆಯೇ ಆಗಲಿ ಎಂದು ಕಾಗೆ ಇಲಿಯನ್ನು ತನ್ನ ಮಗಿ ನಲ್ಲಿ ಕಚ್ಚಿ ಕೊಂಡು ಆಕಾಶಮಾರ್ಗದಲ್ಲಿ ಹಾರಿ ತಾನು ಮುಂಚೆ ಹೋಗ ಬೇಕೆಂದಿದ್ದ ಕೊಳದ ಹತ್ತಿರ ಬಿಟ್ಟು ನಿಂತಿತು. ಆಗ ಮಿತ್ರಮಂದಿರನು ಕೊಳದಿಂದ ಹೊರಗೆ ಬಂದು-ಎಂದೂ ಬಾರದ ನಂಟರು ಇಂದು ಇಲ್ಲಿಗೆ ಬಂದುದರಿಂದ ನಾನು ಕೃತಾರ್ಥನಾದೆನು-ಎಂದು ಸಂತೋ K