ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಗನ್ನಾಥ ಪಂಡಿತನು. ಈ ಜಗತ್ತಿನಲ್ಲಿ ಎಷ್ಟೋ ಜನರು ಹುಟ್ಟುತ್ತಾರೆ. ಮರಣಹೊಂದುತ್ತಾರೆ. ಅವ ರನ್ನು ಗಣಿಸುವದು ಸಹ ಅಸಾಧ್ಯವು, ಜನನಿಯ ಜಠರದಿಂದ ಹೊರಹೊರಟ ಮಾತ್ರ ದಿಂದ ಹುಟ್ಟಿದ ಹಾಗಾಯಿತೇ? ಇಂಥ ಜನ್ನವನ್ನು ಮನುಷ್ಯರೇಕೆ ? ತಿರ್ಯಗ್ಧಂತು ಗಳಾದರೂ ಪಡೆಯುವವು. ಭರ್ತೃಹರಿಯು ಹೇಳಿದಂತೆ ತಾಯಿಯ ಯೌವನಕ್ಕೆ ಕುಠಾ ರದಂತಿರುವ ಈ ಜನ್ಮವನ್ನು ತೆಗೆದುಕೊಂಡು ಮಾಡುವದೇನು? ಶರತ್ಕಾಲದ ಚಂದ್ರನ ಚಂದ್ರಿಕೆಯಂತೆ ಭಾಸ್ವರವಾದ ಯಾವನ ಕೀರ್ತಿ ದಶದಿಗಂಗನೆಯರ ಮುಖವನ್ನು ಚುಂಬಿ ಸುವದೊ, ಯಾವನಿಗೆ ಪ್ರಣಯಿನಿಯಂತೆ ಸಾಕ್ಷಾತ್ ಸರಸ್ವತೀದೇವಿ ಅಧೀನಳಾಗಿರು ವಳೋ, ಯಾವನು ತನ್ನ ಸುಧಾಮಧುರವಾದ ಅಭಿರದಿಂದ ವಿಭುಧರ ಮನಸ್ಸನ್ನು ರಂಜಿಸುವನೊ, ಅವನು ಮಾತ್ರ ಹುಟ್ಟಿದನೆಂದು ಪಂಡಿತರು ಬಗೆಯುವರು. ಇಂಥವರ ಲ್ಲಿಯೇ ನಮ್ಮ ಚರಿತ್ರನಾಯಕನಾದ ಜಗನ್ನಾಥ ಪಂಡಿತನೊಬ್ಬನಾಗಿದ್ದಾನೆ. ಜಗನ್ನಾ ಧನ ಜನನ ಸಮಯವು ಇನ್ನೂ ನಿಶ್ಚಯವಾಗಿ ತಿಳಿದಿಲ್ಲ. ಆದರೆ ಬಹು ವಿಧ ಪ್ರಮಾಣಗಳಿಂದ ಇವನು ದಿಲ್ಲಿ ಅರಸನನ್ನು ಆಶ್ರಯಿಸಿದ್ದನೆಂದು ಗೊತ್ತಾಗುವದು. ಅದರಿಂದ ಅವನ ಅವಸ್ಥಿ ತಿಕಾಲವು ತಿಳಿಯುವಂತಿದೆ. ಇವನು ಭಾಮಿನೀ ವಿಲಾಸ 'ದ ಅಂತಿಮೋಲ್ಲಾಸದಲ್ಲಿ ಈ ದಿಲ್ಲೀವಲ್ಲಭ ಪಾಣಿಪಲ್ಲವತಲೇ ನೀತಂ ನವೀನಂ ವಯಃ ” ಎಂದು ತನ್ನ ತಾರುಣ್ಯವನ್ನು ದಿಲೀಶ್ವರನ ಆಶ್ರಯದಲ್ಲಿಯೇ ಕಳೆದನೆಂದು ಪ್ರತಿಪಾದಿಸಿ ರುವನು. ಆ ದಿಲೀಶ್ವರನು ಯಾರು? ಅಕಬರನೆಂದು ಕೆಲವರು; ಶಹಾಜಹಾನನೆಂದು ಕೆಲವರು ಹೇಳುವರು. ಜನರಲ್ಲಿ ಪ್ರಥಿತವಾದ ಮೊದಲನೆಯ ವಾರ್ತೆ ನಿರ್ಮೂಲವಾ ದದ್ದು. ಜಗನ್ನಾಥನು ತನ್ನಿಂದ ರಚಿಸಲ್ಪಟ್ಟ ಅಸಷ ವಿಲಾಸ 'ವೆಂಬ ಕಾವ್ಯದಲ್ಲಿ ತನ್ನ ಶಹಾಜಹಾನನ ಪ್ರಿಯತ್ವವನ್ನು ವರ್ಣಿಸಿದ್ದಾನೆ, ಅಂದ ಬಳಿಕ ಶಹಾಜಹಾನನ ಕಾಲದಲ್ಲಿ ಇವನು ಇದ್ದನೆಂಬಂತಾಯಿತು. ಜಗನ್ನಾಥನಿಂದ ವರ್ಣಿಸಲ್ಪಟ್ಟ ಮೈಚಭೂಪಾಲ ವರ್ಣನಾತ್ಮಕ ಕಾವ್ಯಗಳಲ್ಲಿ ದಿಲೀಪತಿಯಾದ ಔರಂಗಜೇಬನ ಚರಿತ್ರವು ಕಾಣಿಸುವದಿಲ್ಲ. ಆದ್ದರಿಂನ ಇವನು ಔರಂಗಜೇಬನನ್ನು ಆಶ್ರಯಿಸಲಿಲ್ಲೆಂಬಂತೆ ತೋರುವದು. ಔರಂಗ ಜೇಬನು ಪಟ್ಟಕ್ಕೆ ಬರುವವರೆಗೆ ಇವನು ದಿಲ್ಲಿಯಲ್ಲಿ ಇರಬಹುದು. ಅಂತು ಕ್ರಿ. ಶ. ೧೭ನೆಯ ಶತಮಾನವೆ ಇವನ ಅವಸ್ಥಿತ ಸಮಯವು ಎಂದರೆ ತಪ್ಪಾಗಲಾರದು. ಈ ಪಂಡಿತೋತ್ತಂಸನ ಅಭಿಜನಸ್ಥಳವು ಯಾವದು? ತೈಲಂಗವೆಂಬ ಎರಡನೇ ಹೆಸ ರುಳ್ಳ ಆಂಧ್ರದೇಶವೇ ಆಗಿರಬಹುದು. ಯಾಕದಂರೆ ಇವನು ಅಸಸವಿಲಾಸಕಾವ್ಯದ ಅವ ಸಾನದಲ್ಲಿ “ ತೈಲಂಗಕುಲಾವತಂಸೇನ ಪಂಡಿತರಾಜಿ ಜಗನ್ನಾಥೇನ ” ಎಂದು ಹೇಳಿರುವ