ಈ ಪುಟವನ್ನು ಪರಿಶೀಲಿಸಲಾಗಿಲ್ಲ.

&L ವಾಗ್ಯೂಷಣ. "/ff ** - * * * * ***** ***** www++ ಕಲಿಂದಗಿರಿನಂದಿನೀತಟಸುರದ್ರುಮಾಲಂಬಿನೀ | ಮದೀಯಮತಿಚುಂಬಿನೀ ಭವತು ಕಾಪಿಕಾದಂಬಿನೀ || ಈ ಶ್ಲೋಕದಲ್ಲಿ ಕವಿಯು ಶ್ರೀಕೃಷ್ಣಮೂರ್ತಿಯನ್ನು ಮೇಘಮಾಲೆಯೆಂದು ತಿಳಿದು ವರ್ಣಿಸಿದ್ದಾನೆ. ಮೇಘಮಾಲೆಯು ಬಿಸಿಲಿನ ತಾಪವನ್ನು ಕಳೆಯುತ್ತದೆ. ಕೃಷ್ಣನ ಮೂರ್ತಿಯು ಸ್ಮರಣಮಾಡಿದಕೂಡಲೆ ಸಾಂಸಾರಿಕ ತಾಪವನ್ನು ಹೋಗಲಾಡಿಸುವದು. ಮೇಘಮಾಲೆಯು ವಿದ್ಯುತ್ತಿನಿಂದ ವೇಷ್ಟಿತವಾಗಿರುವದು. ಕೃಷ್ಣನ ಮೂರ್ತಿಯಂತೂ ನೂರಾರು ವಿದ್ಯುಲ್ಲತೆಯಂತೆ ಚಮಕಿಸುವ ಗೋಪಾಂಗನೆಯರಿಂದ ಸುತ್ತುಗಟ್ಟಲ್ಪಟ್ಟರು ವದು. ಈ ಗೋಪಸ್ತ್ರೀಯರ ಅಂಗಕಾಂತಿಯು ಭಂಗಶೀಲವಾದುದಲ್ಲ. ಸಾರ್ವಕಾಲಿಕ ವಾದುದು. ಕಲಿಂದ ಪರ್ವತದಿಂದ ಹುಟ್ಟಿ ಹರಿಯುವ ಯಮುನಾನದಿಯ ದಂಡೆಯ ಮೇಲಿರುವ ಕಡಾಲಮರಗಳ ಆಶ್ರಯವನ್ನು ತಾಳಿದ ಇಂತಹ ಈ ಶ್ರೀಕೃಷ್ಣಮೂರ್ತಿಯು ನಮ್ಮ ಬುದ್ದಿಸ್ಥವಾಗಲಿ. ಈ ಶ್ಲೋಕದಲ್ಲಿ ವ್ಯತಿರೇಕ-ರೂಪಕ ಅತಿಶಯೋಕ್ರಲಂಕಾರಗಳ ಸಾಂಕರ್ಯ ವಿರುವದು, ಈ ಪದ್ಯದಲ್ಲಿರುವ ಪ್ರತಿಯೊಂದು ಪದಕ್ಕೆ ನಾಗೇಶಭಟ್ಟರು ಉತ್ಕೃಷ್ಟವಾದ ಸ್ವಾರಸ್ಯವನ್ನು ತೆಗೆದಿದ್ದಾರೆ. ಕವಿಯು ಗ್ರಂಥಾರಂಭದಲ್ಲಿ ಈ ತೆರದೆ ಹಾರೈಸುತ್ತಾನೆ:- ನಿಮಗೇನ ಕೇಶ್ವರ್ಮನನ ಜಲಧರಂತರುದರಂ || ಮಯೋತೋ ಲೋಕೇ ಲಲಿತರಸಗಂಗಾಧರಮಣಿ೦ || ಹರನ್ನಂರ್ತ ರ್ಧ್ಯಾಂತಂ ಹೃದಯಮಧಿರೂಢ ಗುಣವತಾಮ್ | ಅಲಂಕಾರಾನ್ ಸರ್ವಾನಪಿ ಗಲಿತಗರ್ವಾನ್ ರಚಯತು || ಚಿಂತಾರೂಪ ಸಾಗರದಲ್ಲಿ ಬಹು ಪ್ರಯಾಸದಿಂದ ಮುಳುಗಿ ನಾನು ಈ : ರಸಗಂ ಗಾಧರ 'ವೆಂಬ ರತ್ನವನ್ನು ಹೊರಗೆ ತಂದಿಟ್ಟಿರುತ್ತೇನೆ. ಅಂತಸ್ತಮಸ್ಸನ್ನು ಹೊಡೆದೋಡಿ ಸುವ ಈ ರತ್ನವು ಗುಣವಂತರ ಹೃದಯಸ್ಥಾನವನ್ನು ಅಲಂಕರಿಸಿ ಎಲ್ಲ ಆಭರಣಗಳ ಗರ್ವ ವನ್ನು ಹೆರಣಮಾಡಲಿ. ಗುಣವಂತರ ಎಂದು ಹೇಳಿರುವದರಿಂದ ಅಗುಣಜ್ಞರ ಅನಾದರವನ್ನು ಪಂಡಿತರಾ ಜನು ಗಣಿಸಲಿಲ್ಲವೆಂಬುದು ವ್ಯಕ್ತವಾಗುವದು. ಉಳಿದ ಅನೇಕ ಪಂಡಿತರು ಗ್ರಂಥಗಳನ್ನು ಬರೆದಿಟ್ಟಿರಲು ನೀನೇಕೆ ಬರೆಯುತ್ತಿ ? `ಅದರಿಂದ ಪ್ರಯೋಜನವೇನು ? ಎಂದು ಕೇಳಿದರೆ ನಿಮಗೆ ಪಂಡಿತರಾಜನು ಉತ್ತರ ಕೊಡುತ್ತಾನೆ ನೋಡಿರಿ. ( ಉಳಿದವರು ಗ್ರಂಥಗಳನ್ನು ಬರೆದರೆ ಬರೆಯಲಿ; ಅದರಿಂದ ನನ್ನ ಪರಿಶ್ರಮವು ಹೇಗೆ ನಿಷ್ಪಲವಾದೀತು ? ಆಮೇಲೆ ತಿಮಿಂಗಿಲಾದಿ ಮೀನಗಳು ಪ್ರತಿ ದಿವಸ ಸಾಗರದ ಸಂಕ್ಷಭವನ್ನು ಮಾಡಿದರೇನಾಯಿತು ? ಅದರಿಂದ ಮಂದರಪರ್ವ