ಈ ಪುಟವನ್ನು ಪ್ರಕಟಿಸಲಾಗಿದೆ



ಅಧ್ಯಾಯ ೧೨

೧೦೯


ವನ್ನು ತಿಳಿದುಕೊಂಡು, ಅವನನ್ನು ಕರೆದುಕೊಂಡು ಬರುವುದಕ್ಕೋಸ್ಕರ ಹೊರಟಳು.
  ಕಾಮಮೋಹಿನಿಗೆ ಪಿತೃವಿಯೋಗವಾದಾಗ ಹತ್ತು ವರುಷ ವಯಸ್ಸಾಗಿತ್ತು. ಆದಾಗ್ಯೂ, ಆತನ ಚಹರೆಯ ಜ್ಞಾಪಕವು ಸಂಪೂರ್ಣವಾಗಿತ್ತು. ಅವಳು ತಂದೆಯನ್ನು ನೋಡಬೇಕೆಂಬ ಕುತೂಹಲದಿಂದ ಇದ್ದಳು. ಅಷ್ಟ ರಲ್ಲಿಯೇ ಸುಮಾರು ಐವತ್ತು ವಯಸ್ಸುಳ್ಳ ಒಬ್ಬ ಮನುಷ್ಯನನ್ನು ದುರ್ಮತಿಯು ಕರೆದುಕೊಂಡು ಬಂದಳು. ಅವನು ಕಾರಾಗೃಹವಾಸದಿಂದಲೂ ವ್ಯಸನದಿಂದಲೂ ಕೃಶನಾಗಿದ್ದನು. ಇವನ ಮುಖದಲ್ಲಿ ಮೂಳೆಗಳು ಕಾಣುತಿದ್ದುವು. ಕಣ್ಣುಗಳು ಗುಣಿಬಿದ್ದಿದ್ದುವು. ಗಡ್ಡವೂ ತಲೆಯ ಕೂದಲುಗಳೂ ಬೆಳ್ಳಗಾಗಿದ್ದುವು. ಅವನು ಚಿಂದಿಬಟ್ಟೆಗಳನ್ನು ಹಾಕಿಕೊಂಡಿದ್ದನು. ಇವನ ಕೈಗೆ ಬೇಡಿ ಹಾಕಲ್ಪಟ್ಟಿತ್ತು. ಕಾಮಮೋಹಿನಿಯು, ಇವನನ್ನು ನೋಡಿದ ಕೂಡಲೇ ತನ್ನ ತಂದೆಯೆಂದು ಗೊತ್ತುಮಾಡಿಕೊಂಡು, ಮೇಲಕ್ಕೆ ಎದ್ದು ನಮಸ್ಕಾರವನ್ನು ಮಾಡಿದಳು. ಇವರಿಗೆ ಪರಸ್ಪರ ದರ್ಶನವಾದಕೂಡಲೇ ಉಭಯರ ಕಣ್ಣುಗಳಿಂದಲೂ ನೀರು ಧಾರಾಸಂಪಾತವಾಗಿ ಸುರಿಯಿತು. ತಂದೆಯ ಅವಸ್ಥೆಯನ್ನು ನೋಡಿ, ಕಾಮಮೋಹಿನಿಯು ಅವನನ್ನು ಅಪ್ಪಿ ಕೊಂಡು, ಮಾತನಾಡುವುದಕ್ಕೂ ಶಕ್ತಿಯಿಲ್ಲದೆ ಕೆಲವು ನಿಮಿಷಗಳನ್ನು ಕಳೆದಳು. ಅವನೂ ಅನಿರ್ವಚನೀಯವಾದ ಕಷ್ಟಕ್ಕೆ ಗುರಿಯಾಗಿದ್ದಾಗ್ಯೂ, ಮಗಳನ್ನು ನೋಡಿದ ಸಂತೋಷದಿಂದ ಸ್ವಲ್ಪ ಹೊತ್ತು ಪರವಶನಾಗಿದ್ದನು.
ಕಾಮಮೋಹಿನಿ- ಅಪ್ಪಾ ! ನಮಗೆ ವಿಯೋಗವಾಗಿ ಬಹಳ ಕಾಲವಾಯಿತು. ಈಗ ನಮ್ಮಿಬ್ಬರಿಗೂ ಸಮಾಗಮವಾಗಿರುವುದು ನಿಜವೋ?- ಅಥವಾ ನಾನು ಸ್ವಪ್ನ ಸುಖವನ್ನು ಅನುಭವಿಸುತ್ತಿರುವೆನೋ ?
ತಂದೆ- ವತ್ಸೇ! ಕಾಮಮೋಹಿನಿ! ಇದು ಸ್ವಪ್ನವಲ್ಲ. ನಾನೇ ನಿನ್ನ ತಂದೆ ; ನಿನ್ನನ್ನು ಪುನಃ ನೋಡಿ ಸಂತೋಷಪಡುವ ಲಾಭವು ಈ ಜನ್ಮದಲ್ಲಿ ಉಂಟಾಗುವುದೆಂದು ನಾನು ಭಾವಿಸಿರಲಿಲ್ಲ. ಏನೋ ಪುಣ್ಯ ವಿಶೇಷದಿಂದ, ದೇವರು ಈ ಭಾಗ್ಯವನ್ನು ನನಗೆ ಉಂಟುಮಾಡಿದನು. ನಿನ್ನ ತಾಯಿಯು, ನೀನು ಚಿಕ್ಕ ಮಗುವಾಗಿರುವಾಗಲೇ ಸ್ವರ್ಗಸ್ಥಳಾದಳು, ನನಗೂ ಅನಿರ್ವಚನೀಯವಾದ ದುಃಖಗಳು ಪ್ರಾಪ್ತವಾದುವು. ಇಂಥ ಕಷ್ಟ |