ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

97

"ಖುಶಿಯಾಗಿದೀರಲ್ಲಾ ಸುನಂದಾ? ಈಗೆಲ್ಲಾ ಸರಿಹೋಯ್ತು, ಅಲ್ವೆ?
"ಒ‍ಳಗಿನ ಆಸೆಗಳು ಸಭ್ಯತನದ ಉಡುಗೆ ತೊಟ್ಟು ಹೊರಬಂದುವು:
"ಇನ್ನೂ ಯಾವುದೂ ಸರಿಹೋಗಿಲ್ಲ ರಾಧಮ್ನೋರೆ. ಆದರೆ, ಅಳು ಮೋರೆ
ಯಿಂದಿರೋ ಬದಲು ಹೀಗಿರೋದು ಮೇಲಲ್ವೆ?"
"ಓಹೋ. ಸಂಶಯವೇನು? ನಿಮ್ಮ ಸಾಹಸಕ್ಕೆ ಪ್ರತಿಫಲ ಸಿಗದೇ ಇರಲಾರದು!"
ಹಾಗೆ ರಾಧಮ್ಮ ಹಾರೈಸಿ ಹೋದರೂ, ಅಂತಹ ಯತ್ನಗಳಿಗೆಲ್ಲ ಯಶಸ್ಸು
ಸುಲಭವೆಂದು ಸುನಂದಾ ನಂಬಲಿಲ್ಲ.
...ಈಗ ಸ್ವಲ್ಪ ಸಮಯದಿಂದ ಪುಟ್ಟಣ್ಣ, ಒಮ್ಮೊಮ್ಮೆ ಆಫೀಸು ಬಿಟ್ಟೊಡ
ನೆಯೆ ಬಂದು, ಬಟ್ಟೆ ಬದಲಾಯಿಸಿ ಹೊರಹೋಗುತ್ತಿದ್ದ. ಉಳಿದ ದಿನಗಳಲ್ಲಿ ತಡ
ವಾಗಿ ಬರುತ್ತಿದ್ದ.
ಹಿಂದಿನ ಎರಡು ದಿನಗಳಲ್ಲೂ ಆತ ತಡವಾಗಿ ಬಂದಿದ್ದುದರಿಂದ ಈ ಸಂಜೆ
ಬೇಗನೆ ಬರಬಹುದೆಂದು ಸುನಂದಾ ನಿರೀಕ್ಷಿಸಿದ್ದಳು.
ನಿರೀಕ್ಷೆ ನಿಜವಾಯಿತು.
ಆತ ಬರುತ್ತಿದ್ದುದನ್ನು ದೂರದಿಂದಲೆ ನೋಡಿ ಸುನಂದಾ, ಬಾಗಿಲು ತೆರೆದಿಟ್ಟು
ಒಳಹೋದಳು. ಪುಟ್ಟಣ್ಣ ಒಳಕ್ಕೆ ಬಂದು ಕೊಠಡಿಗೆ ನಡೆದ.
ಆತ ಕನ್ನಡಿಯಲ್ಲಿ ಮುಖ ನೋಡುತ್ತಿದ್ದಂತೆಯೆ ಸುನಂದಾ ಕಾಫಿಯ ಲೋಟ
ದೊಡನೆ ಬಂದು ಬಾಗಿಲಲ್ಲಿ ನಿಂತು, ಕೈ ಬಳೆಗಳ ಸದ್ದುಮಾಡಿದಳು.
ಪುಟ್ಟಣ್ಣ ತಿರುಗಿ ನೋಡಿ, ಒಂದು ನಿಮಿಷ ದಂಗಾದ. ಮಾಟಗಾತಿಯಂತೆ
ಮೋಡಿಯ ಬಲೆ ಬೀಸಿ ನಿಂತಿದ್ದ ಆ ಹೇಣ್ಣು ತನ್ನ ಹೆಂಡತಿಯೆಂದು ನಂಬುವುದೇ
ಆತನಿಗೆ ಕಷ್ಟವಾಯಿತು.
ಆಕೆ ಲೋಟವನ್ನು ಮೇಜಿನ ಮೇಲಿಡಲಿಲ್ಲ. ಬೇಕೆಂದೇ ಕೈಯಲ್ಲೇ ಹಿಡಿದು
ನಿಂತಳು. ಆ ಗುರುತ್ವ ಆಕರ್ಷಣೆಗೆ ಬಲಿಯಾಗಿ, ಪುಟ್ಟಣ್ಣನೇ ಆಕೆಯ ಬಳಿಗೆ ಹೋಗಿ,
ಲೋಟಕ್ಕೋಸ್ಕರ ಕೈ ಚಾಚಿದ. ಲೋಟ‍ವನ್ನು ಆಕೆ ಕೊಟ್ಟಾಗ ಕೈಗೆ ಕೈತಾಕಿತು.
ಒಲಿದ ಹೆಣ್ಣಿನ ಮೊದಲ ಸ್ಪರ್ಶವೇನೋ ಎನ್ನುವ ಭ್ರಮೆಯಾಯಿತು ಪುಟ್ಟಣ್ಣನಿಗೆ.
ಅವನ ಮನಸ್ಸು ಮಂಕಾಯಿತು. ಎದೆ ಬಡಿತ ತೀವ್ರವಾಯಿತು. ಆತ ಸುನಂದೆಗೆ
ಬೆನ್ನು ಹಾಕಿ, ಕಿಟಕಿಯತ್ತ ತಿರುಗಿ, ಕಾಫಿ ಕುಡಿದ.
ಸುನಂದಾ ತನಗೆ ಸೋಲಾಯಿತೆಂದುಕೊಂಡಳು. ಅಲ್ಲಿ ನಿಲ್ಲಲಾಗದೆ ಒಳಗೆ
ನಡೆದಳು.
ಇದೇನು ಹೀಗಾಯಿತು? ಎಂದು ಖತಿಗೊಂಡು ಪುಟ್ಟಣ್ಣ, ತನ್ನ ದೌರ್ಬಲ್ಯ
ಕ್ಕಾಗಿ ತನ್ನನ್ನೇ ಜರೆದ. ಹೊರ ಹೊರಡಲೆಂದು ಉಡುಪು ಬದಲಾಯಿಸಿದ. ಆದರೆ
ಕಾಲುಗಳು ಮಾತ್ರ ಆ ಕೊಠಡಿಯಲ್ಲೇ ಸುತ್ತುಸುತ್ತಿದುವು.

13