ಈ ಪುಟವನ್ನು ಪ್ರಕಟಿಸಲಾಗಿದೆ



116

ಕನಸು

ಆತ ಅನಾಥಾಶ್ರಮಕ್ಕೆ ದಾಟಿಸಬಹುದು. ಇಲ್ಲವೆ, ಎಲ್ಲಿಗಾದರೂ ಒಯ್ದು ರಾತ್ರೆ
ಹೊತ್ತು ಬೀದಿಯ ಬದಿಯಲ್ಲಿ ಬಿಟ್ಟು ಬರಬಹುದು. ತಾನಿಲ್ಲದೆ ಅದು ಕೊರಗಿ ಸಾಯ
ಬಹುದು...
ಅಥವಾ, ಮಗುವನ್ನೂ ಎತ್ತಿಕೊಂಡು ಇಲ್ಲಿಂದ ತಾನು ಓಡಿಹೋಗಿ, ಅದರ
ಜತೆಯಲ್ಲೇ ಯಾವುದಾದರೂ ಕೆರೆಗೋ ಬಾವಿಗೋ ಹಾರಿದರೆ?
—ಸುನಂದಾ ಮುಂದೆ ಯೋಚಿಸಲಾರದೆ, ಮೊಣಕಾಲುಗಳ ಮೇಲೆ ತಲೆ
ಇಟ್ಟು ಬಲವಾಗಿ ಕಣ್ಣುಗಳನ್ನು ಮುಚ್ಚಿಕೊಂಡಳು. ಬಹಳ ಹೊತ್ತು ಹಾಗೆಯೇ
ಕುಳಿತಳು.
ತಪ್ಪು-ತಾನು ಯೋಚಿಸುತ್ತಿದ್ದುದು ತಪ್ಪು. ವಿದ್ಯಾವತಿಯಾದ ತಾನು ಹೀಗೆ
ಮಾಡಿದರೆ ಲೋಕ ಏನೆಂದೀತು? ಕುಸುಮ ಏನೆಂದಾಳು? ರಾಧಮ್ಮ ಏನೆಂದಾರು?
ತಾನು ಹೇಡಿಯೆ ಹಾಗಾದರೆ? ಕೈಲಾಗದ ದುರ್ಬಲಳೆ? ಹೆತ್ತ ಮಗುವನ್ನು
ಕೈಯಾರೆ ಕೊಲ್ಲುವ ಪಾಪಿಯೆ? ತಾಯಿ ತಂದೆಯರು ಕೆಟ್ಟವರೆಂದು ಆ ಎಳೆಯ
ಕಂದಮ್ಮ ಕಷ್ಟ ಪಡಬೇಕೇನು? ಇಷ್ಟೊಂದು ಸಾಹಿತ್ಯ ಓದಿ, ಇಷ್ಟೊಂದು ಸಂಸ್ಕಾರ
ಹೊಂದಿ, ಇಷ್ಟೊಂದು ಒಳ್ಳೆಯವಳೆನ್ನಿಸಿಕೊಂಡ ತಾನು, ಇಂತಹ ಯೋಚನೆಯನ್ನು
ಮಾಡಿದ್ದಾದರೂ ಹೇಗೆ?
ಮನುಷ್ಯತ್ವವೆಲ್ಲವನ್ನೂ ಕಳೆದುಕೊಂಡಿದ್ದ ಆ ಗಂಡಿನ ಭೋಗದ ಆಟಿಗೆಯಾಗು
ವುದು, ಮನೆಗೆಲಸದ ತೊತ್ತಾಗುವುದು, ದುಸ್ಸಹವಾಗಿತ್ತು. ನಿಜ. ಆದರೆ ಈ ಮಗುವಿ
ಗೋಸ್ಕರ, ತಾನು ಈಗ ಅದನ್ನೆಲ್ಲ ಸಹಿಸಬೇಕು. ಮಗುವೊಂದರ ಸಲುವಾಗಿಯೇ
ತಾನು ಬದುಕಬೇಕು....
ಅಲ್ಲದೆ ಹೊಟ್ಟೆಯಲ್ಲೇ ತಾನು ಹೊತ್ತಿರಬಹುದಾದ ಇನ್ನೊಂದು ಸಂತಾನ?
ಅದು ಅಲ್ಲಿದೆ ಎನ್ನುವುದಕ್ಕೆ ಆಧಾರವಿರಲಿಲ್ಲ. ಇಲ್ಲದಿದ್ದರೆ ಮೇಲು. ಇದ್ದರೆ ಮಾತ್ರ
ಅದೂ ತನ್ನ ಜವಾಬ್ದಾರಿಯೇ.....
ಇಷ್ಟೆಲ್ಲ ಇದ್ದೂ ತಾನು ಸಾವನ್ನಪ್ಪಲು ಯೋಚಿಸುವುದು ಹೇಡಿತನವಲ್ಲದೆ
ಬೇರೇನು?
ತನ್ನ ಬದುಕು ಹೀಗಾಯಿತು. ಆದರೆ ನಾಳೆ-ಭವಿಷ್ಯತ್ತಿನಲ್ಲಿ-ತನ್ನ ಕಂದಮ್ಮನ
ಬದುಕು ಹೀಗಾಗಬಾರದಲ್ಲವೆ? ತನ್ನ ಮೇಲಲ್ಲವೆ ಹಾಗಾಗದಂತೆ ನೋಡುವ ಭಾರ?
...ರಾತ್ರೆಯ ನೀರವತೆಯನ್ನು ಭೇದಿಸುತ್ತ ಮೋಟಾರು ಲಾರಿಯೊಂದು
ಮೇಲಿನ ರಾಜಬೀದಿಯಲ್ಲಿ ಸಾಗಿತು. ಇನ್ನೂ ರಾತ್ರೆ ಇರುವಾಗ ಬೆಳಗಾಗುವುದಕ್ಕೆ
ಮುಂಚೆಯೇ ವಾಹನಗಳ ಸಂಚಾರ....
ಆ ಲಾರಿಯ ಸದ್ದಿಗೆ ಮಗು ಎಚ್ಚರಗೊಂಡಿತೇನೋ ಎಂದು ಸುನಂದಾ ತೊಟ್ಟಿ
ಲಿನೊಳಕ್ಕೆ ಬಾಗಿನೋಡಿದಳು. ಮಗು ಮಲಗಿಯೇ ಇತ್ತು. ಅದಕ್ಕೆ ಹೊದಿಸಿದ್ದ
ತೆಳುವಾದ ಉಣ್ಣೆಯ ಬಟ್ಟೆಯ ಮೇಲೆ ಕೈ ಇಟ್ಟಳು...ಬಳಿಕ ಮೆಲ್ಲನೆ ಮಗುವನ್ನು