ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

127

"ಇರ್ಬೇಕು. ನೋಡಿ ಸುನಂದಮ್ಮ, ಹಸಿವು-ಉಪವಾಸ-ಬಡತನ ಅಂದರೇ
ನೂಂತ ನನಗೆ ಗೊತ್ತಿಲ್ಲ. ಆದರೆ ಅಂಥ ಬಡಪಾಯಿಗಳನ್ನು ಕಂಡಾಗ, 'ಯಾರೂ
ಹೀಗಿರಬಾರದು' ಅನಿಸುತ್ತೆ."
ಸುನಂದೆಯ ಒಳದನಿ 'ಮಾತನಾಡು, ಇದೇ ಅವಕಾಶ' ಎಂದು ಪ್ರೇರೇಪಿಸಿತು.
'ಆದರೆ ಹುಷಾರಾಗಿರು, ಗುಟ್ಟು ಬಿಡಬೇಡ' ಎಂದು ಎಚ್ಚರಿಸಿತು. 'ಬೆಣ್ಣೆಯ ಹಾಗೆ
ಕರಗಿ ಅಳೋಕೆ ಶುರುಮಾಡ್ಬೇಡ' ಎಂದು ನಗೆಯಾಡಿತು.
“ಅಲ್ಲ ಕುಸುಮಾ, ನೀವು ಡೈವೋರ್ಸ್ ಅಂದರಲ್ಲಾ. ಎಂಥ ತಮಾಷೆ! ಆ
ಬಡಪಾಯಿಗಳಿಗೆ ವಿವಾಹವಿಚ್ಛೇದನ ಅಂದರೇನು ಅನ್ನೋದೇ ಗೊತ್ತಿಲ್ಲ. ಈ
ವಿಷಯದಲ್ಲೆಲ್ಲ ಸರಕಾರ ಕಾನೂನು ಮಾಡಿಟ್ಟಿದೆ ಅನ್ನೋದೂ ಗೊತ್ತಿಲ್ಲ. ಆದರೆ
ಸುಲಭವಾಗಿ ಡೈವೋರ್ಸ್ ಮಾಡ್ಕೊಂಡ್ರು!"
ಕುಸುಮಳಿಗೆ ಅದು ಸ್ವಾಭಾವಿಕವಾಗಿಯೇ ತೋರಿತು.
"ಅಲ್ಲದೆ ಇನ್ನೇನಂತೆ? ದುಡಿದು ಬದುಕೋ ಜನರಲ್ಲೆಲ್ಲ ಇಷ್ಟೆ. ಸರಿಹೋಗ
ದಿದ್ದರೆ ಬೇರೆಯಾಗ್ತಾರೆ. ಬೇರೆಯವರ್ನ ಕಟ್ಕೊಳ್ತಾರೆ. ಇಬ್ಬರೂ ದುಡಿದು
ಸಂಪಾದಿಸೋರು ನೋಡಿ. ಇಬ್ಬರಲ್ಲೂ ಸಮಾನತೆ!"
ತನಗೆ ಈಗಾಗಲೇ ತಿಳಿದಿದ್ದ ಸತ್ಯ ಸಂಗತಿಯೊಂದಕ್ಕೆ ರೂಪು ಗೊಟ್ಟಿತು ಕುಸು
ಮಳ ನುಡಿ. ಇಬ್ಬರೂ ದುಡಿದು ಸಂಪಾದಿಸುವಾಗ, ವಿರಸದ ವಿಷಮದಾಂಪತ್ಯವನ್ನು
ಮುಕ್ತಾಯಗೊಳಿಸುವುದು ಸಾಧ್ಯ. ಆದರೆ ಹೆಣ್ಣು ಗಂಡಿನ ಮೇಲೆ ಅವಲಂಬಿಸಿರು
ವಷ್ಟೂ ಕಾಲ ಅದು ಸಾಧ್ಯವಲ್ಲ....
“ಹಾಗಾದರೆ ವಿವಾಹ ವಿಚ್ಛೇದನ ತೀರ ಕೆಳತರಗತಿ ಜನರಲ್ಲಿ ಮಾತ್ರ ಸಾಧ್ಯ
ಅಂತೀರಾ?"
ಮಾತುಕತೆ ಗಂಭೀರವಾಗುತ್ತಿದ್ದುದನ್ನು ಕಂಡು ಕುಸುಮಳಿಗೆ ಸಂತೋಷ
ವಾಯಿತು. ತನ್ನ ಗೆಳತಿಯ ಮನೋವೇದನೆಯನ್ನು ತಿಳಿಯದೆಯೇ ಆಕೆ ಮಾತ
ನಾಡಿದಳು:
"ಇಲ್ಲ ಅತ್ಯಂತ ಮೇಲಿನ ತರಗತಿ ಜನರಲ್ಲೂ ಸಾಧ್ಯ. ಹೋದ ವರ್ಷ
ಬೊಂಬಾಯಿಯಲ್ಲಿ ನನ್ನ ಪರಿಚಯದ ಕುಟುಂಬದಲ್ಲೇ ಹೀಗಾಯ್ತು. ಆಗರ್ಭ
ಶ್ರೀಮಂತರು-ಕೋಟ್ಯಧೀಶ್ವರರು. ಅವರಿಗೆ ಇಬ್ಬರೇ ಮಕ್ಕಳು-ಹುಡುಗ ಮತ್ತು
ಹುಡುಗಿ. ಅತಿ ಸಲಿಗೆ ಕೊಟ್ಟದ್ದರಿಂದ ಮಕ್ಕಳು ಕೆಟ್ಟು ಹೋದರು. ಹುಡುಗಿಯ
ಸ್ವೇಚ್ಛಾಚಾರಕ್ಕೆ ಮಿತಿ ಇರ್ಲಿಲ್ಲ. ಅಂತೂ ಅವಳಿಗೆ ಮದುವೆ ಮಾಡಿದರು. ವರ
ಅವರಷ್ಟು ಶ್ರೀಮಂತನಲ್ಲ. ಆದರೆ ತುಂಬಾ ಸ್ವಾಭಿಮಾನಿ. ಆತನನ್ನು ಗುಲಾಮ
ನಾಗಿ ಇಟ್ಟುಕೊಳ್ಳೋಕೆ ಆಕೆ ಪ್ರಯತ್ನ ಪಟ್ಟಳು. ಅವನಿಗದೊಂದೂ ಸರಿಹೋಗಲಿಲ್ಲ.
ಹ್ಯಾಗೆ ಸರಿಹೋಗುತ್ತೆ ಹೇಳಿ? ವಿರಸವಾಯ್ತು. ಆಕೆ ಅವನಿಗೆ ಬಯ್ದು ಅವಮಾನ
ಮಾಡಿದಳು. 'ನೀನು ನನಗೆ ತಕ್ಕವನಲ್ಲ' ಅಂತ ಜರೆದಳು. ಕೊನೆಗೆ ವಿಚಿತ್ರ ಕಾರಣ