ಈ ಪುಟವನ್ನು ಪ್ರಕಟಿಸಲಾಗಿದೆ

22

ಕನಸು

ನೆಂಬುದನ್ನು ಸುನಂದಾ ಖಚಿತವಾಗಿ ತಿಳಿದಿದ್ದಳು.
ಆದರೆ ಬೇಟದ ಆ ಸುಖ ಸದಾ ಕಾಲವೂ ಆ ರೀತಿಯಾಗಿಯೇ ಇರುವುದು
ಸಾಧ್ಯವಿತ್ತೆ?
ಸಂತಾನವೆನ್ನುವುದು ಗಂಡು ಹೆಣ್ಣಿನ ಸಂಬಂಧವನ್ನು ಸ್ಥಿರವಾಗಿ ಬೆಸೆಯುವ
ಸಾಧನವೆಂದು ಸುನಂದಾ ತಿಳಿದಿದ್ದಳು. ಆದರೆ ಬಡಪಾಯಿಯಾದ ಆಕೆಯ ಪಾಲಿಗೆ
ಹಾಗಾಗಲೇ ಇಲ್ಲ.
...ಈಗ ಎಷ್ಟು ಹೊತ್ತಾದರೂ ಆಕೆ ಕತ್ತಲಲ್ಲಿ ಕುಳಿತಿರಬಹುದು. ಆದರೆ
ಗಂಡ ಬಂದು ಮುದ್ದಿಸಿ ಮೈದಡವಿ ಮಾತನಾಡುವುದು ಮಾತ್ರ ಇರಲಿಲ್ಲ. ಆಕೆ
ಹಾಸಿಗೆಯುದ್ದಕ್ಕೂ ಕಾಲು ಚಾಚಿ ಕಣ್ಣು ಮುಚ್ಚಬಹುದು ಆದರೆ 'ನಿದ್ದೆ ಬಂತೇನೆ?'
ಎಂಬ ಸ್ವರ ಮಾತ್ರ ಕೇಳುತ್ತಿರಲಿಲ್ಲ.
ಅದೆಲ್ಲಾ ಕಾಮದ ಸಾಮ್ರಾಜ್ಯದಲ್ಲಿ ಪ್ರೇಮ ನಡೆಸುವ ಚೆಲ್ಲಾಟವೆಂದು
ಸುನಂದಾ ತಿಳಿದಿದ್ದಳು. ಎಷ್ಟೋ ಸಾರೆ ಆ ಚೆಲ್ಲಾಟವಿಲ್ಲದೆಯೇ ಇರುಳು ಹಗಲಾಗು
ತ್ತದೆ ಎಂಬುದೂ ಆಕೆಗೆ ಗೊತ್ತಿತ್ತು. ಅದು ಸಿದ್ಧಾಂತ. ಆದರೆ ಪ್ರಯೋಗ ತೋರಿಸಿ
ಕೊಡುತ್ತಿದ್ದುದೇ ಬೇರೆ. ಹೆಣ್ಣು ಗಂಡಿಗೂ ಗಂಡು ಹೆಣ್ಣಿಗೂ ನೀಡುವ ಒಲವಿನ
ಭವ್ಯ ಲೋಕವನ್ನು ಆಕೆ ಕಾಣಬಯಸಿದ್ದಳು ನಿಜ; ಆದರೆ ಅದು ಕಂಡು ಬಂದಿರಲಿಲ್ಲ.
....ಹೀಗೆ ಯೋಚಿಸುತ್ತ ಮೌನವಾಗಿ ಕುಳಿತ ಸುನಂದಾ ನಿದ್ದೆಗಾದರೂ ಮೊರೆ
ಹೋಗಲು ನಿರ್ಧಾರ ಮಾಡಿದಳು. ಅದಕ್ಕೆ ಸಿದ್ಧತೆಯೆಂದು, ಕುಳಿತಲ್ಲಿಂದೆದ್ದು
ಬಚ್ಚಲು ಮನೆಗೆ ಹೋಗಿಬಂದಳು. ತೊಟ್ಟಿಲನ್ನೊಮ್ಮೆ ಮೆಲ್ಲನೆ ಮುಟ್ಟಿ, ನಡು
ರಾತ್ರಿಯಲ್ಲಿ ಮಗು ಎದ್ದು ಅಳುವವರೆಗಿನ ನಿದ್ದೆಗೋಸ್ಕರ, ಹಾಸಿಗೆಯ ಮೇಲೆ ಒರಗಿ
ಕೊಂಡಳು.
ಆದರೆ ಯೋಚನೆಗಳ ಇನ್ನೊಂದು ಸರಮಾಲೆ ಮೊದಲಾಯಿತು. ಬಾಕಿ ವಸೂ
ಲಿಗೆ ಬರುವವರೆಲ್ಲ ಕಣ್ಣೆದುರು ಕುಣಿಯತೊಡಗಿದರು. ಅವರನ್ನೆಲ್ಲ ಕೈಬೀಸಿ ತಳ್ಳಿ,
ಸುನಂದಾ ಹೊದಿಕೆ ಎಳೆದುಕೊಂಡಳು. ಆ ಮುಸುಕಿನ ಒಳಗೂ ಒಂದು ವಿಚಾರ
ಮೂಡಿ ಬಂದು, ಬಲವಾಗಿ ಬೇರುಬಿಟ್ಟು, ದೃಢವಾಯಿತು.
'ನಾಳೆ ಇದರ ಇತ್ಯರ್ಥವಾಗಲೇಬೇಕು-ನಾಳೆ ಆಗಲೇಬೇಕು!'

ಬೆಳಗ್ಗೆ ಎದ್ದು ಪುಟ್ಟಣ್ಣ ಮುಖಕ್ಷೌರ ಮಾಡಿಕೊಂಡ, ಎಂದಿನಂತೆ. ಆ ಕಾರ್ಯ
ದಲ್ಲಿ ನಿರತನಾದಾಗ ಕನ್ನಡಿಯಲ್ಲಿ ಮುಖ ಕಾಣಿಸುತ್ತಿತ್ತು, ಯಾವಾಗಲೂ. ಈ ದಿನ