ಈ ಪುಟವನ್ನು ಪ್ರಕಟಿಸಲಾಗಿದೆ

24

ಕನಸು

“ನನ್ನ ಒಪ್ಗೇನ ಸುಡ್ತು. ನಾನಾ ಮದುವೆ ಮಾಡ್ಕೊಳ್ಳೋದು? ನಾಳೆ ನನ್ನ
ಬಯ್ಬಾರದು ನೀನು. ನೀನು ಬೇಡ ಅನ್ನೋ ಹಾಗಿದ್ದರೆ ಕಳಿಸ್ಬಿಡೋಣ.”
ತಾಯಿ ಔಪಚಾರಿಕವಾಗಿ ಹಾಗೆ ಆಡುತ್ತಿದ್ದಳೆಂದು ಪುಟ್ಟಣ್ಣನಿಗೆ ಗೊತ್ತಿತ್ತು.
ಆತ ಸ್ವರವೇರಿಸಿ ಅಂದಿದ್ದ:
“ಹೋಗಮ್ಮ. ಒಪ್ಗೆ. ಇನ್ನೇನು ಬೇಕಾದರೂ ಮಾಡ್ಕೊ.”
ತಾಯಿಯ ಮುಖ ಅಷ್ಟಗಲವಾಗಿತ್ತು.
ಆದರೆ ಮದುವೆಯಾಗಿ ಸೊಸೆ ಮನೆಗೆ ಬಂದಮೇಲೆ ಆ ತಾಯಿಯೇ ಬದ
ಲಾಗಿದ್ದಳು.
... ಅದನ್ನೆಲ್ಲ ಈಗ ಯೋಚಿಸುತ್ತ ಪುಟ್ಟಣ್ಣ ಅಂದುಕೊಂಡ:
'ಅಷ್ಟು ವರ್ಷ ಕಾದು ಮದುವೆಯಾದ ಮೇಲೂ ಇಂಥ ಗತಿ ಒದಗಿತಲ್ಲ!'
ಮನೆಗೆ ಬಂದ ಆ ಹೆಣ್ಣು ಮಹಾ ವಿದ್ಯಾವಂತೆಯ ಹಾಗೆ, ಸಾಹಿತ್ಯ-ಕಲೆ-
ಸಂಸ್ಕೃತಿ ಎಂದು ಮಾತನಾಡಿದಳು. ಕಾಲೇಜಿನಲ್ಲಿ ಓದುತ್ತಿದ್ದಾಗಲೂ ಅಷ್ಟೆ, ಅನಂತ
ರವೂ ಅಷ್ಟೆ, ಪುಟ್ಟಣ್ಣನಿಗೆ ಅಂಥದರಲ್ಲೆಲ್ಲ ಆಸಕ್ತಿ ಇರಲಿಲ್ಲ. ಆತನಿಗೆ ಬೇಕಾದು
ದೊಂದೇ, ಹೆಣ್ಣಿನ ಒಡನಾಟ. ಮನಸ್ಸು ಮಾಡಿದ್ದರೆ ಅದನ್ನು ಪಡೆಯುವುದು
ಅಷ್ಟೇನೂ ಕಷ್ಟವಾಗುತ್ತಿರಲಿಲ್ಲ. ಆದರೆ ಆತ ಬೆಳೆದು ಬಂದಿದ್ದ ವಾತಾವರಣ ಆ
ರೀತಿಯ ಚೆಲ್ಲಾಟಕ್ಕೆ ಅನುಕೂಲವಾಗಿರಲಿಲ್ಲ. ಮದುವೆಯಾದಮೇಲೆ ಸಾಮಾನ್ಯವಾಗಿ
ಅಂತಹ ಅವಶ್ಯಕತೆಗಳೆಲ್ಲ ನಿರ್ದಿಷ್ಟ ರೂಪು ತಳೆಯುತ್ತವೆ. ಆದರೆ ಪುಟ್ಟಣ್ಣನಿಗೆ
ಸಂಬಂಧಿಸಿ ಆ ಸಾಮಾನ್ಯ ನಿಯಮ ಸರಿಹೋಗಲಿಲ್ಲ. ಗಂಡ ಹೆಂಡಿರ ಸಂಬಂಧ
ಒಂದು ಘಟ್ಟಕ್ಕೆ ಬಂದುದು ಮುಂದೆ ಅವರಿಬ್ಬರೇ ಉಳಿದಾಗ. ಆದರೆ ಸ್ವಲ್ಪ ಕಾಲ
ದಲ್ಲೇ ಅಂತಹ ವೈವಾಹಿಕ ಜೀವನದಿಂದ ಆತನಿಗೆ ಬೇಸರ ತಲೆದೋರಿತು.
...ಪುಟ್ಟಣ್ಣ ಅಂಗವಸ್ತ್ರವನ್ನು ಮೈಮೇಲೆ ಹಾಕಿಕೊಂಡು, ತೊಳೆಯಲೆಂದು
ಮುಖ ಕ್ಷೌರದ ಸಾಮಗ್ರಿಗಳನ್ನೂ ಕೈಲೆತ್ತಿಕೊಂಡು ಸ್ನಾನದ ಮನೆಗೆ ಹೊರಟ.
ಹೋಗುತ್ತ, ಹಜಾರವನ್ನು ದಾಟುತ್ತಿದ್ದಂತೆ, ತೊಟ್ಟಿಲಲ್ಲಿ ಮಲಗಿದ್ದ ಮಗುವಿನ
ಆತನ ದೃಷ್ಟಿ ಹರಿಯಿತು.
ಆತನಿಗೆ ಇಷ್ಟವಿಲ್ಲದೆಯೇ ಭೂಮಿಗೆ ಇಳಿದು ಬಂದಿತ್ತು ಆ ಮಗು. 'ಹಿಂದೆ
ಏನೂ ಆಗಿಲ್ಲ. ಈಗಲೂ ಏನೂ ಆಗಲಾರದು' ಎಂದು ಆತ ಭಾವಿಸಿದ್ದುದು ಸುಳ್ಳಾ
ಗಿತ್ತು. ಪ್ರಾಯಶಃ ಆ ಮಗುವಿಲ್ಲದೇ ಹೋಗಿದ್ದರೆ ಈ ವಿರಸ ಏರ್ಪಡುತ್ತಿರಲಿಲ್ಲವೋ
ಏನೋ. ತಾನು ತಂದೆಯಾಗುವುದು ಖಂಡಿತವೆಂದು ಗೊತ್ತಾದಾಗ, ಮಗು ಗಂಡಾ
ಗಲಿ ಎಂಬೊಂದು ಆಸೆ ಮೊಳೆತಿತ್ತು. ಆ ಮೊಳಕೆ ಮುರಿದು ಬಿದ್ದಾಗ, ತನ್ನನ್ನೂ
ಆ ಹೆಣ್ಣನ್ನೂ ಜತೆಯಾಗಿ ಬಂಧಿಸಿದ್ದ ಸೂತ್ರವೂ ಕಡಿದು ಬಿದ್ದಂತೆ ಪುಟ್ಟಣ್ಣನಿಗೆ
ಅನಿಸಿತ್ತು.
...ನೀರು ಸುಡುತ್ತಿತ್ತು. ಕರೆದು ಹೇಳಬೇಕೆಂದು ಬಾಯಿ ತೆರೆದ ಪುಟ್ಟಣ್ಣ