ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

29

ಹಣವನ್ನೂ ಹೆಚ್ಚಿಗೆ ಐವತ್ತು ರೂಪಾಯಿಗಳನ್ನೂ ಪಡೆದ.
ಹಣವನ್ನೆಲ್ಲ ಕೋಟಿನ ಒಳಜೇಬಿನಲ್ಲಿರಿಸಿದಾಗ ಆತನಿಗೆ ನಗುಬಂತು. ಅಂತೂ
ಸರಿಯಾದ ರೀತಿಯಲ್ಲೇ ಹೆಂಡತಿಗೆ ಪಾಠ ಕಲಿಸಲು ಮೊದಲು ಮಾಡಿದ್ದೇನೆ-ಎಂದು
ಕೊಂಡ.
ಹಣವಿದ್ದರೂ ಯಾಕೆ ಹಾಗೆ ವರ್ತಿಸಬೇಕು? ಹಲವರಿಗೆ ಇದು ಸ್ವಾರಸ್ಯಕರ
ಪ್ರಶ್ನೆ ಯಾಗುವುದೆಂದು ಪುಟ್ಟಣ್ಣನಿಗೆ ಗೊತ್ತಿತ್ತು. ಆತನ ದೃಷ್ಟಿಯಲ್ಲಿ ಅಂಥವರೆಲ್ಲ,
ಲೋಕದ ರೀತಿ ನೀತಿಗಳನ್ನು ತಿಳಿಯದವರು. ಪುಟ್ಟಣ್ಣ ಮಗುವಲ್ಲ ಈಗ. ಆತನಿಗೆ
ಲೋಕದ ಅನುಭವವಿದೆ. ಹಣವಿದ್ದಾಗ ಇಲ್ಲದವನಂತಿರುವುದು; ಹಣವಿಲ್ಲದಾಗ
ಇದ್ದವನಂತಿರುವುದು-ಒಂದು ನಾಣ್ಯದ ಎರಡು ಮುಖಗಳೆಂದು ಅವನ ಅಭಿಪ್ರಾಯ.
ಆತನ ದೃಷ್ಟಿಯಲ್ಲಿ ಎರಡೂ ಸರಿಯೆ. ಹೊನ್ನು-ಹೆಣ್ಣು-ಮಣ್ಣು ಎಂದು ಜತೆ
ಯಾಗಿ ಆಡುವ ರೂಢಿಯ ಮಾತೊಂದಿದೆ. ಅದು ಈಗಿನ ಕಾಲಕ್ಕೆ ಅನ್ವಯಿಸದ
ಬರಡು ವೇದಾಂತ-ಎಂಬುದು ಪುಟ್ಟಣ್ಣನ ತೀರ್ಪು. ಈ ಕಾಲದಲ್ಲಿ ಮುಖ್ಯವಾದುದು
ಹಣ ಮಾತ್ರ. ಹಣವೊಂದಿದ್ದರೆ ಹೆಣ್ಣಿಗೂ ಸ್ವಾಮಿಯಾಗಬಹುದು, ಮಣ್ಣಿಗೂ
ಸ್ವಾಮಿಯಾಗಬಹುದು. ಕಾಂಚಾಣವಿಲ್ಲದ ವ್ಯಕ್ತಿ ಕಸಕ್ಕೆ ಸಮ...
ವಿಧ ವಿಧದ ಜನರನ್ನು ಪುಟ್ಟಣ್ಣ ನೋಡಿದ್ದ. ಕಾಂಚನವನ್ನು ಲಕ್ಷ್ಮಿದೇವಿ
ಯಾಗಿ ಕಂಡು ಪೂಜೆಮಾಡುವ ಶ್ರೀಮಂತರಿದ್ದರು. ಮಹಡಿ ಮನೆಯಿಂದ ಗುಡಿಸಲಿ
ಗಿಳಿದವರು ಕಾಂಚನವನ್ನು ಸೂಳೆಯೆಂದು ಜರೆಯುತಿದ್ದರು. ಪುಟ್ಟಣ್ಣನ ದೃಷ್ಟಿ
ಯಲ್ಲಿ ಅದೆಲ್ಲ ಅರ್ಥವಿಲ್ಲದ ಭಾವವಿಕಾರ. ಆತನ ಪಾಲಿಗೆ ಹಣ ಎಂಬುದೊಂದು
ಮಹಾ ಶಕ್ತಿ. ಆ ಶಕ್ತಿಯೊಂದೇ ಸತ್ಯ; ಉಳಿದುದೆಲ್ಲ ಮಿಥ್ಯ. ಅದಕ್ಕೆ ಸಂಬಂಧಿಸಿ
ಭಕ್ತಿಯ ಪ್ರೇಮದ ತತ್ವಜ್ಞಾನವಿಲ್ಲ; ಹಣದ ಗಳಿಕೆಯ ಯತ್ನದಲ್ಲಿ ನೀತಿ ನಿಯಮ
ಗಳೆಂಬುದಿಲ್ಲ....
ಹಾಗೆ ತಿಳಿದ ಪುಟ್ಟಣ್ಣ ಹೊಸ ಮನುಷ್ಯನಾಗಿದ್ದ. ಅರ್ಥವಾಗದೇ ಉಳಿದಿದ್ದ
ಎಷ್ಟೋ ವಿಷಯಗಳು ಆತನಿಗೀಗ ಸ್ಪಷ್ಟವಾದುವು. ಸಂಸಾರ ಸಂತಾನ ಎಂಬ
ಮೋಹವೆಲ್ಲ ಬರಿಯ ಭ್ರಮೆ. ಸಹಧರ್ಮಿಣಿ, ಬದುಕಿನ ಒಡನಾಡಿ, ಎಂದೆಲ್ಲ ಕೈ
ಹಿಡಿದ ಹೆಣ್ಣನ್ನು ಕಾಣುವುದು ತಿಳಿವಳಿಕೆಯಿಲ್ಲದ ಪೆದ್ದುಗಳ ಲಕ್ಷಣ. ಪ್ರಾಮಾಣಿಕತೆ,
ಋಜುಮಾರ್ಗ, ಎನ್ನು ವುದೆಲ್ಲ ಉಳ್ಳವರು ಇಲ್ಲದವರಿಗೆ ಬೋಧಿಸುವ ವೇದಾಂತ.
ಪಾಪ-ಎಂಬುದು ಅರ್ಥಹೀನ ಕಲ್ಪನೆ. ಶಕ್ತಿಯುಳ್ಳ-ಹಣದ ಶಕ್ತಿಯುಳ್ಳ-ಹುಲಿ
ಯಾಗಿ ಬಾಳುವುದಾಗದೇ ಹೋದರೆ ಉಳಿಯುವ ಹಾದಿಯೊಂದೇ,-ಬಡ ಹುಳವಾಗಿ
ನರಳುವುದು.... ಪುಟ್ಟಣ್ಣ, ತಾನು ಹುಳವಾಗದೆ ಹುಲಿಯಾಗಬೇಕೆಂದು ತೀರ್ಮಾ
ನಿಸಿದ್ದ.
ಹುಲಿ ಸಾಧು ಪ್ರಾಣಿಗಳನ್ನು ತಿನ್ನುತ್ತದೆ. ಆ ಪಾತ್ರವನ್ನು ವಹಿಸಲು
ಪುಟ್ಟಣ್ಣನೂ ಸಿದ್ಧನಾಗಿದ್ದ. ಅದಕ್ಕೆ ಮೊದಲ ಹೆಜ್ಜೆ-'ಹೃದಯಹೀನ' ಎನ್ನಿಸಿ