ಈ ಪುಟವನ್ನು ಪ್ರಕಟಿಸಲಾಗಿದೆ



40

ಕನಸು

ಅದಕ್ಕೇ ಕೂತಿದೀನಿ. ನಮ್ಮವರು ಎಷ್ಟು ಚೆನ್ನಾಗಿ ಕಾಫಿ ಮಾಡ್ತಾರೆ ಗೊತ್ತೆ?”
ತನ್ನ ಗಂಡನನ್ನು ಆಕೆ ಹಾಗೆ ಹೊಗಳಿದುದು ಅದೇ ಮೊದಲಿನ ಸಲ
ವಾಗಿರಲಿಲ್ಲ.
“ಪುಣ್ಯವಂತೆಯಮ್ಮ ನೀವು"
ಎಂದು ಸುನಂದಾ ನಿಟ್ಟುಸಿರು ಬಿಟ್ಟಳು.
ಆ ನಿಟ್ಟುಸಿರು ತಮಗೆ ಕೇಳಿಸಿತೆನ್ನುವಂತೆ ರಾಧಮ್ಮ, ಅದಕ್ಕೆ ವಿವರಣೆಯನ್ನು
ಮೌನವಾಗಿಯೆ ಅಪೇಕ್ಷಿಸುತ್ತ ಸುನಂದೆಯನ್ನು ನೋಡಿದರು.
ರಾಮಯ್ಯ ಮಗನೊಡನೆ ಮನೆಯೊಳಕ್ಕೆ ಆಗಲೆ ಹೋಗಿದ್ದರು. ಶ್ಯಾಮ
ಪೆಪ್ಪರಮೆಂಟು ಚಪ್ಪರಿಸುತ್ತ ಮತ್ತೆ ಮನೆಯಿಂದ ಹೊರಬಿದ್ದು ತಾಯಿಯ ಬಳಿಗೆ
ಬಂದ.
“ಏಳಮ್ಮ. ಕರಕೊಂಡ್ಬಾ ಅಂದ ಅಪ್ಪ.”
“ನಡಿ ಬಂದೆ.”
ರಾಧಮ್ಮ ಎದ್ದು, “ಬರ್ತೀನಿ ಕಣ್ರೀ” ಎಂದು, ಮಗನೊಡನೆ ಮನೆ ಸೇರಿದರು.
....ಕಂಬನಿ ತುಂಬಿದ ಕಣ್ಣುಗಳಿಂದ ಆ ಮನೆಯನ್ನೇ ದಿಟ್ಟಿಸುತ್ತ ಸುನಂದಾ
ಕೆಲವು ನಿಮಿಷ ಅಲ್ಲೇ ನಿಂತಳು. ಬಳಿಕ ಮೆಲ್ಲನೆ ಹಜಾರಕ್ಕೆ ಹಿಂತಿರುಗಿದಳು.
ಹದಿನೆಂಟು ವರ್ಷಗಳಾಗಿದ್ದುವು ರಾಧಮ್ಮನಿಗೆ ಮದುವೆಯಾಗಿ. ಅಷ್ಟು ಕಾಲ
ವಾದಮೇಲೂ ಆ ದಂಪತಿಗಳು ಎಷ್ಟೊಂದು ಅನ್ಯೋನ್ಯವಾಗಿದ್ದರು! ತಾನು ಗಂಡನ
ಮನೆಗೆ ಬಂದಂದಿನಿಂದಲೂ ಪಕ್ಕದ ಮನೆಯ ಆ ಸಂಸಾರವನ್ನು ಸುನಂದಾ ನೋಡು
ತ್ತಿದ್ದಳು. ಒಮ್ಮೆಯೂ ಅಸಹ್ಯವೆನ್ನಿಸುವ ಜಗಳವಿಲ್ಲ; ಹೇಳಿಕೊಳ್ಳುವಂತಹ ವಿರಸ
ವಿಲ್ಲ. ತನ್ನ ಗಂಡನ ಸಂಪಾದನೆಗಿಂತ ಆತನದು ಕಡಮೆ. ಆದರೂ ರಾಧಮ್ಮ
ಗೊಣಗಿದುದನ್ನು ಒಮ್ಮೆಯೂ ಸುನಂದಾ ಕಂಡಿರಲಿಲ್ಲ. ಒಮ್ಮೊಮ್ಮೆ ಸುನಂದೆಗೆ
ಅನಿಸುತ್ತಿತ್ತು: ರಾಧಮ್ಮ ಹೆಚ್ಚು ವಿದ್ಯಾವತಿಯಾಗದೆ ಇರುವುದರಿಂದಲೇ ಅಂತಹ
ಸುಖ ಸಾಧ್ಯವಾಗಿದೆಯೇನೋ. ಸಣ್ಣ ಪುಟ್ಟ ವಿಷಯಗಳಿಗೆಲ್ಲ ಯೋಚನೆ ಮಾಡು
ವುದೇ ಆಕೆಗೆ ತಿಳಿಯದೇನೋ. ಆಕೆಯ ಮನಸ್ಸು ನೋಯುವುದೆಂದೇ ಇಲ್ಲವೇನೊ...
ಹಾಗೆ ಅನಿಸಿದಾಗ ಪ್ರತಿಯಾಗಿ ಬೇರೆಯೂ ಯೋಚನೆ ಮೂಡುತ್ತಿತ್ತು: ಹಾಗಿರ
ಲಾರದು. ಆಕೆಯಷ್ಟೇ ಆ ಗಂಡಸೂ ಒಳ್ಳೆಯವನು. ಅಂತಹ ಯೋಚನೆಗೆಲ್ಲ ಆತ
ಆಸ್ಪದ ಕೊಟ್ಟರಲ್ಲವೆ?
ತನ್ನ ಗಂಡನಿಗೂ ಆತನಿಗೂ ಎಷ್ಟೊಂದು ಅಂತರ! ಮದುವೆಯಾದ ಎರಡು
ವರ್ಷಗಳೊಳಗೇ ಅಂತಹ ಬದಲಾವಣೆ....
ತಾನು ಬೀದಿಯ ಕಡೆ ದೃಷ್ಟಿ ಹಾಯಿಸುವುದೂ ತಪ್ಪು. ಕೊಠಡಿಯ ಬಾಗಿಲ
ಬಳಿ ನಿಂತು ಆತನನ್ನು ದಿಟ್ಟಿಸುವುದೂ ತಪ್ಪು. ತಾನು ಕುಳಿತರೂ ಆತನಿಗೆ ಸಹನೆ
ಯಿಲ್ಲ; ನಿಂತರೂ ಸಹನೆಯಿಲ್ಲ. ಅವರ ಬದುಕಿನಲ್ಲಿ ಆರಂಭವಾಗಿದ್ದ ಈ ಹೊಸ