೧೩೪ ಸತೀಹಿತೈಷಿಣಿ (ತ್ರೈಮಾಸಿಕ - ರಕ್ತಾಕ್ಷಿ--ನೀನು ನನ್ನಲ್ಲಿ ಮಾತನಾಡಬೇಡ-ನನ್ನ ಇಷ್ಟ, ಹೊರಟು ಹೋಗು. ಅಜ್ಜಿ-ಚನ್ನಾಗಿದೆ-ನಾನು ಹೇಳಬೇಡವೇ ಚಂಡಾಳಿ!ನನ್ನ ಮೇಲೆಯೇ ತಿ ರುಗಿ ಬೀಳುವೆಯಾ? ಕುಲಕ್ಕೆ ಮೃತ್ಯುವಾಗಿ ಹುಟ್ಟಿದೆಯಲ್ಲವೇ? ರಕ್ತಾಕ್ಷಿ-ಮಂಚದಮೇಲೆ ಕೈಕಾಲುಗಳನ್ನು ಬಡಿದು ರೋಷದಿಂದ 'ಸಾಕು, ಬಾಯಿಮುಚ್ಚು! ನನ್ನ ಮನೆಯಲ್ಲಿ, ನನ್ನ ಹಣದಲ್ಲಿ, ಇದ್ದು-ತಿಂದು-ತೇಗಿ ನನ್ನನ್ನೇ ಹೇಳುತ್ತಿರುವೆಯಾ? ಯಾರುಕುಲಕ್ಕೆ ಮೃತ್ಯು? ಈ ದಾರಿಯಲ್ಲಿ ನಡೆಯಲು ಪ್ರೇರಿಸಿದವ ರಾರು ? ಮೊತ್ತ ಮೊದಲು ಇದಕ್ಕಾಗಿ ಅಣಿಮಾಡಿಕೊಟ್ಟವ ರಾರು ? ನೀನಲ್ಲವೇ? ಆಗ ನಿನಗೆ ಬೇಕಾಗಿತ್ತಲ್ಲವೆ? ಸದ್ದೆ ತುವೆ? ಜೋಕೆ! ಹೊರಟುಹೋಗು, ನನ್ನ ಮನೆಯಲ್ಲಿದ್ದು ಕ್ಷಣವೂ ನಿಲ್ಲ ಕೂಡದು. ಅಜ್ಜಿಯ ನೂರೆಂಟು ಬಗೆಯಾಗಿ ರಕ್ತಾಕ್ಷಿಯನ್ನು ಬಯ್ಯುತ್ತ ನಿಲ್ಲದೆ ಮನೆಯನ್ನು ಬಿಟ್ಟು ಹೊರಟು ಹೋದಳು. ನಿಶೆ ಪಾಪ! ಮತ್ತೂ ಹೆಚ್ಚಿದ ಭಯದಿಂದ ಗಡಗಡನೆ ನಡುಗುತ್ತ ಒಂದು ಕಡೆಯ ಮೂಲೆ ಯಲ್ಲಿ ನಿಂತಳು. ರಕ್ತಾಕ್ಷಿ ಆಗ್ರಹದಿಂದ ಮಂಚವನ್ನುಳಿದು, ಕೆಳಗಿಳಿದು - ಮಹ ಡಿಯಿಂದ ಕೆಳಗಿಳಿಯಲು ಹಂತದ ಬಳಿಗೆ ಬಂದಳು; ನೋಡಿದಳು.-ಮಹ ಡಿಯಮೇಲಿನ ಬಾಗಿಲಿಗೆ ಅಡ್ಡಲಾಗಿ ನಳಿನೀಕಾಂತನ-ಅವನಹಿಂದೆ, ಮರೆಯಾಗಿ ಮಧುಮಿತ್ರನೂ ಸಿಂತಿದ್ದುದನ್ನು ಕಂಡಳು; ಕಿಡಿಕಿಡಿಯಾಗಿ ಕೇಳಿದಳು. “ಇಲ್ಲಿಗೇಕೆ ಬಂದಿರಿ ? ನಿಮ್ಮನ್ನು ಬರಹೇಳಿದವರಾರು? ಒಳಗೆ ಬಿಟ್ಟವರಾರು?'
ಪುಟ:ಪೂರ್ಣಕಲಾ.djvu/೧೫೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.