ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೬ ಸತೀಹಿತೈಷಿಣಿ (ತ್ರೈಮಾಸಿಕ

- rs. ಅಕ್ಷಯ-ಗುರುದೇವ ! ಮಧುಮಿತ್ರಕುಮಾರನು ಸ್ವಚ್ಚಾ ಪ್ರಕೃತಿಯ ವನಾಗಿದ್ದರೂ ಅವನಿಗೆ ಅಗಮ್ಯಗಮನದ ವಿಷಮಸನ್ನಿ ಪಾತರೋ ಗವನ್ನು ಉಂಟುಮಾಡಿದವನು ನಳಿನೀಕಾಂತನು ! ಆ ಧೂರ್ತನು ನಮ್ಮ ಹಿತವಚನವೆಳ್ಳಷ್ಟನ್ನೂ ಗಣಿಸದೆ ತಾನು ಕೆಟ್ಟುದಲ್ಲದೆ ಇವನನ್ನೂ ಹೀಗೆ ಹಾಳುಮಾಡುತ್ತಿರುವನು. ತಾರಾ-ಭಾಸ್ಕರಾಚಾರ್ಯರಿಗೆ ನಮಸ್ಕರಿಸಿ ಎದ್ದು ನಿಂತು --- ಭ್ರಾತ ! ಈವರೆಗಿನ ನನ್ನ ತಪ್ಪು ತಿಳಿವಳಿಕೆಗಳೆಲ್ಲವನ್ನೂ ದಯೆಯಿ ಟ್ಟು ಕ್ಷಮಿಸಿರಿ. ನೆನಗೆ ಪೂರ್ಣ ಪಶ್ಚಾತ್ತಾಪವುಂಟಾಗಿದೆ. ಈ ನನ್ನ ಪಶ್ಚಾ ತಾಪಕ್ಕೆ ಕಾರಣರಾದವರಲ್ಲಿ ತಮ್ಮ ಶಿಷ್ಯವರ್ಗಿಯನಾದ ಕುಮುದವಿ ತ್ರನೇ ಮುಖ್ಯನೆನ್ನಬಲ್ಲೆನು. ಏಕೆಂದರೆ ತಾವು ನನಗೆ ಹೇಳಿದಂತೆ ನಾನು ವಿಚಾರಶೂನ್ಯತೆಯಿಂದ ಅವನು ಕುಮಾರ್ಗಕ್ಕೆ ಬೀಳಲು ಬೇಕಾದಷ್ಟು ಅವಕಾಶವನ್ನು ಕಲ್ಪಿಸಿಕೊಟ್ಟಿದ್ದರೂ ಸುವಿಚಾರಪರನಾದಾತನು ಅದನ್ನು ಸನ್ಮಾರ್ಗಕ್ಕೆ ವಿನಿಯೋಗಿಸಿಕೊಂಡಿರುವುದಲ್ಲದೆ ಆತನು ವಿವೇಕದಿಂದ ನನ ಗೂ ಎಚ್ಚರವಿತ್ತನು, ಮತ್ತು ತಮ್ಮ ವಿಷಯದಲ್ಲಿ ವಿರೋಧಾರ್ಥವನ್ನು ಕಲ್ಪಿಸಿಕೊಂಡು ಪಯಣಸನ್ನಾ ಹದಲ್ಲಿದ್ದ ನನ್ನನ್ನು ತಡೆದವರಲ್ಲಿ ಕೂಡ ಅವನೇ ಮೊದಲನೆಯವನು, ಮಧುಮಿತ್ರನ ವಿಷಯದಲ್ಲಿ ನಾವು ಇಬ ರೂ ಅತ್ಯಂತ ವ್ಯಾಕಲಹೃದಯರಾಗಿದ್ದೇವೆ. ಅವನು ಇಷ್ಟು ದು ಮಾ೯ಗಿ೯ಯಾಗಿದ್ದಾನೆಂದು ತಿಳಿದಿರಲಿಲ್ಲ, ಭಾಸ್ಕರಾ-ತಲೆಯೆತ್ತಿ ನಿಟ್ಟುಸಿರಿಟ್ಟು ' ತಾರಾಕಾಂತಬಾಬು ! ಈಗ ಹೆಚ್ಚು ಹೇಳಿ ಫಲವಿಲ್ಲ. ಬಂದುದನ್ನು ಅನುಭವಿಸಲೇ ಬೇಕು. ಮುಖ್ಯ ವಾಗಿ ಸತೀಮಣಿಯ ಸತ್ಸಂಕಲ್ಪದಿಂದಾದರೂ ಆತನಿಗೆ ಭಗವತಿಯು ಒಳ್ಳೆಯದನ್ನು ಮಾಡಲೆಂದಾಶಿಸುವೆನು. (ಪಕ್ಕಕ್ಕೆ ತಿರುಗಿ ಅಕ್ಷಯ, ಕಲಾಧವ, ಕುಮುದಮಿತ್ರ ಪ್ರಭಾಕರನನ್ನು ಕುರಿತು ಹೇಳಿದರು.)