ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XI, ಮಕ್ಕಾ ನಗರದ ಮುತ್ತಿಗೆ ಮಾಡಿದರು. ಮಹಮ್ಮದನ ಉದಾತ್ತ ಸ್ವಭಾವವನ್ನು ಕಂಡು ಶತ್ರು ಗಳೆಲ್ಲರೂ ನಾಚಿಕೊಂಡು ಶರಣಾಗತರಾಗಲು, ಮಹಮ್ಮದನು ಅವ ರನ್ನೂ ಮನ್ನಿಸಿ ಪಟ್ಟಣದಲ್ಲಿ ಶಾಂತಿಯನ್ನು ನೆಲೆಗೊಳಿಸಿದ ಬಳಿಕ, ಪುರ ಜನರೆಲ್ಲರಿಗೂ ಇಸ್ಲಾಂ ಮತ ಧರ್ಮಗಳನ್ನು ಬೋಧಿಸಿದನು ; ವಿಗ್ರಹ ಗಳೇ ದೇವರೆಂಬ ಭಾವನೆಯು ತಪ್ಪೆಂಬುದನ್ನು ಅವರು ಮನಗಾಣು ವಂತೆ ಅವರಿಗೆ ತಿಳಿವಳಿಕೆಯನ್ನು ಹೇಳಿ ಕಾಬಾ ದೇವ ಮಂದಿರದಲ್ಲಿ ವಿಗ್ರಹಗಳನ್ನೆಲ್ಲ ಒಡೆದುಹಾಕಿದನು. ಹಿಂದೆ ಕೊರೈಷ್ ಮನೆತನದವರು ಮಹಮ್ಮದೀಯರನ್ನು ವಕ್ಕಾ ನಗರದಿಂದ ಓಡಿಸಿ ಅವರ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡಿದ್ದರು. ಈ ಅಪರಾಧವನ್ನೂ ಮಹಮ್ಮದನು ಕ್ಷಮಿಸಿ ಅವರ ಕ್ಷಮಾಗುಣದ ಸ್ವಾಧೀನದಲ್ಲಿದ್ದ ತನ್ನ ಸ್ವತ್ತುಗಳನ್ನೂ ಅವರಿಗೆ ಪರಮಾವಧಿ ಬಿಟ್ಟುಕೊಡುವಂತೆ, ನಷ್ಟಕ್ಕೆ ಗುರಿಯಾಗಿದ್ದ ತನ್ನ ಶಿಷ್ಯರಿಗೆ ಬೋಧಿಸಿದನು. ಅಬೂ ಸುಫಾನನಂತಹ ದೊಡ್ಡ ದೊಡ್ಡ ಸೇನಾ ನಾಯಕರು ಕೂಡ ತಮ್ಮ ಪ್ರಯತ್ನವು ವಿಫಲ ವಾಗುವುದೆಂದು ಬಗೆದು ತಟಸ್ಥರಾಗಿದ್ದಾಗ, ಅಬೂ ಜಹಾಲನ ಮಗ ನಾದ ಇಕ್ರನನೆಂಬವನು, ಮಹಮ್ಮದೀಯರು ಪುರ ಪ್ರವೇಶ ಮಾಡುವ ಸಮಯದಲ್ಲಿ ಖಾಲಿದನ ಸೈನಿಕರನ್ನು ಹಿಂಸಿಸಿ, ಕೊನೆಗೆ ತಲೆ ತಪ್ಪಿಸಿ ಕೊಂಡು ಓಡಿಹೋಗಿದ್ದ. ಅವನ ಪರವಾಗಿ ಅವನ ಹೆಂಡಿತಿಯು ಮಹಮ್ಮದನ ಬಳಿಗೆ ಬಂದು ತನ್ನ ಪತಿಯನ್ನು ಕ್ಷಮಿಸುವಂತೆ ಬೇಡಿ ಕೊಳ್ಳಲು, ಮಹಮ್ಮದನು ಇಕ್ರಮನ ಅಪರಾಧವನ್ನು ಕೃಷಿ ಸಿರುವೆನೆಂದು ಆಕೆಗೆ ತಿಳಿಸಿದನು. ಊಹುದ್ ಕದನದಲ್ಲಿ ಮಹ ಮದನ ಚಿಕ್ಕಪ್ಪನಾದ ಹಂಜನನ್ನು ಕೊಂದಿದ್ದ ವಾಕ್ಷಿಯೆಂಬವನೂ, ರೋಷ ಪಾರವಶ್ಯದಿಂದ ಮೃತನ ಪಿತ್ತಕೋಶವನ್ನು ಹಲ್ಲಿನಿಂದ ಕಡಿದು ಹಾಕಿದ್ದ ಅವನ ಪತ್ನಿಯ ಶರಣಾಗತರಾಗಿ ಕ್ಷಮೆಯನ್ನು ಪಡೆದರು. ಮಹಮ್ಮದನ ಮಗಳು ಹಿಂದೆ ಮಕ್ಕಾ ನಗರದಿಂದ ಮೆದೀನಾ ನಗರಕ್ಕೆ ಪ್ರಯಾಣ ಮಾಡುವಾಗ್ಗೆ ಹಬ್ಬಾರ್‌ ಎಂಬ ಘಾತುಕನೊಬ್ಬನು ಆಕೆ ಯನ್ನು ಕಲ್ಲುಗಳಿಂದ ಹೊಡೆದು ಗಾಸಿಪಡಿಸಿದ ಕಾರಣದಿಂದ ಆಕೆಯ